ರಾತ್ರಿಯ ಊಟದಲ್ಲಿ ಮೊಸರು ಬೇಕೋ ಬೇಡವೋ? ತಿಳಿದುಕೊಳ್ಳಿ!

ರಾತ್ರಿಯ ಊಟದಲ್ಲಿ ಮೊಸರು ಬೇಕೋ ಬೇಡವೋ? ತಿಳಿದುಕೊಳ್ಳಿ!

 

ಮೊಸರು ಟೆಸ್ಟಿಗೆ ಹುಳಿ, ಶರೀರಕ್ಕೆ ತಂಪು ಮತ್ತು ಪಚನಕ್ಕೆ ಜಡವಾಗಿರುವದು. ಇದು ಶರೀರದಲ್ಲಿ ಶಕ್ತಿ, ಕೆಮ್ಮು, ಪಿತ್ತ , ಪಚನ ಕ್ರೀಯೆ ಮತ್ತು ಕೊಬ್ಬಿನ ಅಂಶವನ್ನು ಹೆಚ್ಚಿಸುವದು. ಬೇಸಿಗೆಯಲ್ಲಿ ತಂಪಾದ ಪದಾರ್ಥಗಳನ್ನು ತಿನ್ನುವ ಸಲಹೆಗಳನ್ನು ಕೊಡುತ್ತಾರೆ. ತಜ್ಞರ ಪ್ರಕಾರ ಈ ಕಾಲದಲ್ಲಿ ಹೆಚ್ಚು ಎಣ್ಣೆಯಿಂದ ಕೂಡಿದ ಹಾಗೂ ಮಸಾಲೆ ಪದಾರ್ಥಗಳು ಉಪಯೋಗ ಆದಷ್ಟು ಕಡಿಮೆ ಮಾಡಬೇಕು. ಮೊಸರಿನಿಂದ ಶರೀರಕ್ಕೆ ತಂಪು ದೊರೆಯುವದು. ಬೇಸಿಗೆಯಲ್ಲಿ ಮೊಸರು ಊಟ ಮಾಡುವದರಿಂದ ಶರೀರದ ತಪಮಾನ ಸಂತುಲಿತವಾಗಿಡುವದು. ಜೊತೆಗೆ ಇದು ಪಚನಕ್ರಿಯೆಗೆ ತುಂಬಾ ಸಹಾಯಕಾರಿ. ಮೊಸರಿನಲ್ಲಿರುವ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಇನ್ನಿತರ ಕೆಲವು ಪೋಷಕ ತತ್ವಗಳು ಶರೀರದ ಅವಶ್ಯಕತೆಗಳನ್ನು ಪೂರ್ಣಗೊಳಿಸಲು ಸಹಾಯವಾಗುತ್ತದೆ. ಆದರೆ ಪ್ರತಿಯೊಂದು ಅನ್ನ ಘಟಕಗಳ ಪ್ರಕಾರ ಮೊಸರು ಸೆವನೆಗೂ ಸಹಿತ ಕೆಲವು ಒಳ್ಳೆಯ ನಿಯಮಗಳಿವೆ ಸಾಮಾನ್ಯವಾಗಿ ಮನೆಯಲ್ಲಿ ರಾತ್ರಿ ವೇಳೆಯಲ್ಲಿ ಮೊಸರಿನ ಸೇವನೆ ಮಾಡುವದಿಲ್ಲ. ಇದರೊಂದಿಗೆ ಮೊಸರಿನ ಸೇವನೆ ಬಗ್ಗೆ ಇರುವ ಈ ನಿಯಮಗಳನ್ನು ತಿಳಿದುಕೊಳ್ಳುವದು ಅವಶ್ಯಕತೆ ಇದೆ.

ಹಾಗೆ ನೋಡಲಾಗಿ ಮೊಸರು ಪ್ರತಿಯೂಬ್ಬರಿಗೆ ಲಾಭದಾಯಕವೆ ಇದೆ. ಆದರೆ ಆಯುರ್ವೇದದ ಪ್ರಕಾರ ರಾತ್ರಿಯ ಸಮಯದಲ್ಲಿ ತಿನ್ನದೇ ಇರುವದು ಒಳ್ಳೆಯದು. ಒಂದು ವೇಳೆ ರಾತ್ರಿಯ ಸಮಯದಲ್ಲಿ ಸೇವನೆ ಮಾಡುತ್ತಿದ್ದರೆ ಕೆಮ್ಮು ಹೆಚ್ಚಾಗಲು ಕಾರಣವಾಗುವದು.

1) ಆಯುರ್ವೇದದ ಅನುಸಾರವಾಗಿ ರಾತ್ರಿಯ ವೇಳೆ ನಮ್ಮ ಶರೀರದಲ್ಲಿ ಕಫ್ ನಿರ್ಮಾಣವಾಗುವ ನೈಸರ್ಗಿಕ ಶಕ್ತಿ ಹೆಚ್ಚಾಗುತ್ತಿರುತ್ತದೆ. ಆದಕಾರಣ ರಾತ್ರಿಯ ಊಟದಲ್ಲಿ ಮೊಸರಿನಿಂದ ದೂರವಿದ್ದರೆ ಕಫ್ ಹೆಚ್ಚಾಗುವ ಸಮಸ್ಯೆಯಿಂದ ಮುಕ್ತರಾಗಬಹುದು. ಇಲ್ಲವಾದರೆ ಕಫ್ ನಿಂದ ಹೊಟ್ಟೆಯ ವಿಕಾರಗಳು ಸಂಭವಿಸುವವು.

2) ಶರೀರದಲ್ಲಿ ಪಿತ್ತದಿಂದ ಕಂಡುಬರುವ ಎದೆಯುರಿತವಿದ್ದರೆ ಮೊಸರಿನಿಂದ ದೂರವಿರಬೇಕು.

3) ನಿಮಗೆ ಸತತವಾದ ಶೀತ ಕೆಮ್ಮು ಇದ್ದರೆ ತಪ್ಪಿಯೂ ರಾತ್ರಿಯ ಸಮಯದಲ್ಲಿ ಮೊಸರು ತಿನ್ನಬೇಡಿ. ಇದರಿಂದ ಅನಾರೋಗ್ಯ ವಾಗುವ ಸಂಭವ ವಿರುತ್ತದೆ.

4)ನೀವು ಒಂದು ವೇಳೆ ಹಗಲು ಹೊತ್ತಿನಲ್ಲಿ ಮೊಸರಿನ ಸೇವನೆ ಮಾಡುತ್ತಿದ್ದರೆ ಅದರಲ್ಲಿ ಸಕ್ಕರೆಯನ್ನು ಮಿಶ್ರ ಮಾಡಿ ತಿನ್ನಲು ಪ್ರಯತ್ನಿಸಿ. ರಾತ್ರಿ ಮೊಸರು ತಿನ್ನುವ ಅಭ್ಯಾಸ ವಿದ್ದರೆ ಅದರಲ್ಲಿ ಸ್ವಲ್ಪ ಪ್ರಮಾಣದ ಕರಿಮೆಣಸಿನ ಪುಡಿಯನ್ನು ಮಿಶ್ರ ಮಾಡಿ ತಿನ್ನಬಹುದು.

5) ರಾತ್ರಿಯ ಸಮಯದಲ್ಲಿ ಮೊಸರಿನಲ್ಲಿ ಸಕ್ಕರೆಯನ್ನು ಮಿಶ್ರ ಮಾಡಿ ತಿನ್ನಬೇಡಿ. ಮೊಸರಿನ ಸ್ಥಾನದಲ್ಲಿ ಮಜ್ಜಿಗೆ ಕುಡಿಯುವದಾದರೆ ಒಳ್ಳೆಯದು.

Leave a Reply

Your email address will not be published. Required fields are marked *