ಏನಿದು ಆಶ್ಚರ್ಯ! ಈ ಊರಿನಲ್ಲಿ ಭೂತಗಳ ಮದುವೆ ಮಾಡ್ತಾರಂತೆ!!!

ಏನಿದು ಆಶ್ಚರ್ಯ! ಈ ಊರಿನಲ್ಲಿ ಭೂತಗಳ ಮದುವೆ ಮಾಡ್ತಾರಂತೆ!!!

 


ನಾವು ದೀರ್ಘಕಾಲದವರೆಗೆ ಮದುವೆಯಾಗದಿದ್ದರೆ, ಅಥವಾ ತಡವಾಗಿ ಮದುವೆಯಾದರೆ ಸಮಾಜದಲ್ಲಿ ಬೇರೆ ಬೇರೆ ಪ್ರಕಾರ ಅಭಿಪ್ರಾಯ ನಿರ್ಮಾಣ ವಾಗುವದು ಸಹಜ ಸಂಗತಿಯಾಗಿದೆ. ಸಮಾಜದಲ್ಲಿ 18 ವರ್ಷ ತುಂಬಿದ ಹುಡಿಗಿಗೆ ಮತ್ತು 21 ವರ್ಷ ಪೂರ್ಣವಾದ ಹುಡುಗರಿಗೆ ಮದುವೆ ಮಾಡಿಕೊಳ್ಳುವ ಅಧಿಕಾರ ನಮ್ಮ ದೇಶದಲ್ಲಿದೆ. ಇದುವರೆಗೆ ನಾವು ಬರೀ ಹುಡುಗ ಮತ್ತು ಹುಡುಗಿಗೆ ಜೊತೆಗೂಡಿಸಿ ಮದುವೆ ಮಾಡುವದನ್ನು ಕೇಳಿದ್ದೇವೆ ಆದರೆ ಕೇರಳದ ಕಾಸರಗೂಡು ಜಿಲ್ಲೆಯಲ್ಲಿ ಕೆಲವೊಂದು ಸಮುದಾಯಗಳಲ್ಲಿ ಭೂತಗಳಿಗೆ ಮದುವೆ ಮಾಡುತ್ತಾರಂತೆ. ಬಾಲ್ಯದಲ್ಲಿ ಮೃತಪಟ್ಟ ಮಕ್ಕಳ ಕುಟುಂಬದವರು ತಮ್ಮ ಮಕ್ಕಳಿಗಾಗಿ ಈ ಮದುವೆ ಸಮಾರಂಭವನ್ನು ಮಾಡುತ್ತಾರೆ. ಅವರ ಸಮುದಾಯದಲ್ಲಿ ಮಗ ಅಥವಾ ಮಗಳು ಸತ್ತರೆ ಅವರು ಭೂತವಾಗಿಬಿಟ್ಟಿದ್ದಾರೆ ಎಂದು ಭಾವಿಸಿ ಅವರ ಮದುವೆ ಅತೀ ವಿಜೃಂಭಣೆಯಿಂದ ಆಚರಿಸುವರು. ಈ ಮದುವೆ ನಿಜ ಮದುವೆ ಹೇಗೆ ಮಾಡುವರೋ ಹಾಗೆ ಭೂತದ ಮದುವೆ ಕೂಡಾ ಮಾಡುವರು.

ಈ ಪದ್ಧತಿಯನ್ನು ಇಲ್ಲಿ ಅನೇಕ ಬುಡಕಟ್ಟುಗಳಲ್ಲಿ ಆಚರಿಸಲಾಗುತ್ತದೆ. ಮದುವೆಯನ್ನು ನಿಜವಾಗಿ ಮಾಡುವ ವಿಧಿಗಳ ಪ್ರಕಾರ ಅಂದ್ರೆ, ಲಗ್ನಪತ್ರಿಕೆ ತಯಾರಿಸುವುದರದಿಂದ ಮದುವೆಯಲ್ಲಿಯ ಎಲ್ಲ ವಿಧಿಗಳಂತೆ ಮಾಡಲಾಗುವದು. ಆದರೆ ಮದುವೆಯ ಸಂದರ್ಭದಲ್ಲಿ ವಧು ವರರ ಸ್ಥಳದಲ್ಲಿ ಅವರ ವಿಗ್ರಹ ಗಳನ್ನು( ಗೊಂಬೆ) ಇಡುತ್ತಾರೆ. ಯಾವ ಕುಟುಂಬದಲ್ಲಿ ಚಿಕ್ಕ ವಯಸ್ಸಿನ ಮಕ್ಕಳು ಮೃತ ಪಡುತ್ತಾರೋ ಆ ಕುಟುಂಬದವರು ಈ ಪ್ರಕಾರದ ಮದುವೆಯ ವೃತ ಪಟ್ಟಿರುತ್ತಾರೆ. ಈ ಮದುವೆಯಲ್ಲಿ ಸಾಂಪ್ರದಾಯಿಕ ವಿವಾಹದ ಉಡುಪನ್ನು ಪ್ರತಿಮೆಗಳಿಗೆ ಧರಿಸಲಾಗುತ್ತದೆ, ಹೂಮಾಲೆ ಹಾಕಲಾಗುತ್ತದೆ ಮತ್ತು ಮದುವೆಯ ಔತಣಕೂಟಗಳನ್ನು ಸಹ ಬಾಳೆ ಎಲೆಯ ಮೇಲೆ ಕೊಡಲಾಗುವದು. ಈ ಪ್ರಕಾರ ಮಾಡುವದರಿಂದ ಮೃತ ಮಕ್ಕಳನ್ನು ಗೌರವಿಸುವದಂತಾಗುವದಂತೆ.

ಇದರ ಹಿಂದಿನ ಕಾರಣವೆಂದರೆ ಒಂದು ವೇಳೆ ಮಕ್ಕಳೂ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದರೆ, ಕಾಲಾಂತರದಲ್ಲಿ ಕುಟುಂಬದಲ್ಲಿಯ ಇನ್ನುಳಿದ ಬೇರೆ ಮಕ್ಕಳು ದೊಡ್ಡವರಾದಗ ಅವರ ಮದುವೆಯ ಕಂಕಣ ಭಾಗ್ಯ ಕೂಡಿ ಬರದೆ ಇದ್ದಾಗ, ಮನೆಯಲ್ಲಿ ಹಲವಾರು ಸಮಸ್ಯೆಗಳು ನಿರ್ಮಾಣವಾಗುತ್ತಿದ್ದರೆ ಅನೇಕ ಕೆಟ್ಟ ಸಂದರ್ಭಗಳು ಎದುರಿಸುವ ಸಮಸ್ಯೆ ನಿರ್ಮಾಣ ವಾಗುವದು. ಅಂತಹ ಸಮಯದಲ್ಲಿ ಅದರ ಪರಿಹಾರ ಕೇಳುವ ಸಲುವಾಗಿ ಜ್ಯೋತಿಷಿ ಕಡೆಗೆ ಹೋದರೆ ಅವರು ಸತ್ತ ಮಕ್ಕಳಿಗೆ ಮದುವೆಯಾಗಲು ಸಲಹೆ ನೀಡುತ್ತಾರಂತೆ. ಮೃತ ಮಕ್ಕಳಿಗೆ ಮದುವೆ ಮಾಡುವವರೆಗೆ ಅವರ ಆತ್ಮಕ್ಕೆ ಶಾಂತಿ ಸಿಗುವದಿಲ್ಲ ಎಂಬ ಕಲ್ಪನೆ ಇದೆ.

Leave a Reply

Your email address will not be published. Required fields are marked *