ಎ ಟಿ ಎಮ್ ನಲ್ಲಿ ಹಣ ತೆಗೆಯುವ ಮುನ್ನ ಒಂದು ಸಲ ಚೆಕ್ ಮಾಡಿ ಎಷ್ಟು ಸುರಕ್ಷಿತವಿದೆ ನಿಮ್ಮ ಎಟಿಎಮ್!

ಎ ಟಿ ಎಮ್ ನಲ್ಲಿ  ಹಣ ತೆಗೆಯುವ ಮುನ್ನ ಒಂದು ಸಲ ಚೆಕ್ ಮಾಡಿ ಎಷ್ಟು ಸುರಕ್ಷಿತವಿದೆ ನಿಮ್ಮ ಎಟಿಎಮ್!

ನಮ್ಮ ಪೇಜ್ ಲೈಕ್ ಮಾಡಿ 👇🏻👇🏻

 

ಎಟಿಎಂ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ. ಹಣ ತೆಗೆಯುವದಕ್ಕಾಗಿ ಬ್ಯಾಂಕ್ ಗಿಂತ ಎಟಿಎಂ ಗೆ ಹೆಚ್ಚು ಪ್ರಾಧಾನ್ಯ ಕೊಡುತ್ತೇವೆ. ಆದರೆ ಇತ್ತೀಚೆಗೆ ಸ್ವಲ್ಪ ಜಾಗೃತೆ ವಹಿಸದಿದ್ದರೆ ಗಂಡಾಂತರ ಬಿಟ್ಟಿದ್ದಲ್ಲ.

ಎಟಿಎಂ ನಿಂದ ಹಣ ತೆಗೆಯುವ ಮುನ್ನ ಕೆಲವು ಅಂಶಗಳ ಕಡೆಗೆ ಗಮನ ಹರಿಸುವದು ಅವಶ್ಯ. ಯಾಕೆಂದರೆ ಯಾವ ಎಟಿಎಂ ನಿಂದ ಹಣ ತೆಗೆಯುತ್ತೇವೆಯೋ ಆ ಎಟಿಎಂ ಎಷ್ಟು ಸುರಕ್ಷಿತವಾಗಿದೆ ಎಂಬುದು ಮೊದಲು ತಿಳಿದುಕೊಳ್ಳಬೇಕಾಗಿದೆ.

ಎಟಿಎಂ ನಲ್ಲಿಎಲ್ಲಕ್ಕೂ ಹೆಚ್ಚು ಗಂಡಾಂತರ ಕಾರ್ಡ್ ಕ್ಲೋನಿಂಗ್ ನದ್ದು ಆಗಿದೆ. ಕಾರ್ಡ್ ಕ್ಲೋನಿಂಗ್ ನ ಪರಿಪೂರ್ಣ ಅರ್ಥವೇನೆಂದರೆ ನಿಮ್ಮ ಕಾರ್ಡಿನ ಮಾಹಿತಿಯನ್ನು ಸಂಪೂರ್ಣವಾಗಿ ಕದ್ದು ಅಂತಹದೇ ಎರಡನೇ ಕಾರ್ಡನ್ನು ತಯಾರಿಸಿಕೊಳ್ಳುವದು.

ಹ್ಯಾಕರ್ಸ್ ಯಾವುದೇ ಡೇಟಾ ಎಟಿಎಂ ಮಷಿನ್ ನಲ್ಲಿ ಕಾರ್ಡ್ ಸ್ಲಾಟ್ ಮಾಡುವ ಸ್ಥಳದಲ್ಲಿಂದ ಕದಿಯುವರು. ಹ್ಯಾಕರ್ಸ್ ಎಟಿಎಂ ಮಷಿನ್ ಸ್ಲಾಟ್ ನಲ್ಲಿ ಒಂದು ಡಿವಾಯಿಸ್ ನ್ನು ಅಳವಡಿಸಿ ನಿಮ್ಮ ಕಾರ್ಡಿನ ಪರಿಪೂರ್ಣ ಮಾಹಿತಿಯನ್ನು ಸ್ಕ್ಯಾನ್ ಮಾಡಿಕೊಳ್ಳುತ್ತಾರೆ.

Image result for ಏಟಿಎಂ

ನಂತರ ಆತ ಬ್ಲೂಟೂಥ್ ಅಥವಾ ಇಂತಹ ಬೇರೆ ವಾಯರ್ ಲೆಸ್ ಡಿವಾಯಿಸ್ ನಿಂದ ನಿಮ್ಮ ಡೇಟಾವನ್ನು ಪಡೆದುಕೊಳ್ಳುತ್ತಾರೆ. ಆದ್ದರಿಂದ ಎಟಿಎಂ ನಿಂದ ಹಣ ತೆಗೆಯುವ ಮುನ್ನ ತೆಗೆದುಕೊಳ್ಳಬೇಕಾದ ಕಾಳಜಿಯ ಬಗ್ಗೆ ತಿಳಿದುಕೊಳ್ಳುವಾ.

ನಿಮ್ಮ ಡೆಬಿಟ್ ಕಾರ್ಡಿನ ಪರಿಪೂರ್ಣ ಎಕ್ಸೆಸ್ ತೆಗೆದುಕೊಳ್ಳಲು ಹ್ಯಾಕರ್ಸ ಹತ್ತಿರ ನಿಮ್ಮ ಪಿನ್ ನಂಬರ್ ಇರುವದು ಅವಶ್ಯಕವಾಗಿದೆ. ಹ್ಯಾಕರ್ ಅದನ್ನು ಯಾವುದೇ ಕ್ಯಾಮೆರಾದಿಂದ ಟ್ರ್ಯಾಕ್ ಮಾಡಿಕೊಳ್ಳಬಹುದು. ಇದರಿಂದ ಬಚಾವಾಗಲು ಒಳ್ಳೆಯ ಐಡಿಯಾ ಅಂದರೆ ಪಿನ್ ನಂಬರ್ ಪ್ರೆಸ್ ಮಾಡುವಾಗ ಎರಡನೆಯ ಕೈಯಿಂದ ಅದನ್ನು ಮರೆಮಾಡುವ ರೂಢಿ ಇಟ್ಟುಕೊಳ್ಳಿ. ಕಾರಣ ಅದರ ಇಮೇಜ್ ಕ್ಯಾಮೆರಾದಲ್ಲಿ ಸೆರೆಹಿಡಿಯದಂತೆ ಮಾಡಿ.

Image result for ಏಟಿಎಂ

ಎಟಿಎಂ ಸೆಂಟರ್ ನಲ್ಲಿ ಎಂಟ್ರಿಮಾಡಿದ ನಂತರ ಕಾರ್ಡ್ ಸ್ಲಾಟ್ ಮಾಡುವ ಸ್ಥಳಕ್ಕೆ ಗಮನ ಹರಿಸಿ ನೋಡಿರಿ. ಕಾರ್ಡ್ ಸ್ಲಾಟ್ ಮಾಡುವ ಸ್ಥಳದಲ್ಲಿ ಏನಾದರೂ ಸಂದೇಹ ಬಂದರೆ ಅಥವಾ ಅದರೊಳಗಡೆ ಸಂದೇಹದ ವಸ್ತು ಕಂಡು ಬಂದರೆ ಕಾರ್ಡನ್ನು ಉಪಯೋಗ ಮಾಡಬೇಡಿ.

ಕಾರ್ಡ ಸ್ಲಾಟ್ ಮಾಡುವ ಸ್ಥಳದಲ್ಲಿ ಕಂಡುಬರುವ ಆ
ಲೈಟಿನ ಮೇಲೆ ನಿಮ್ಮ ಗಮನವಿರಲಿ. ಸ್ಲಾಟ್ ನಲ್ಲಿ ಹಸಿರು ಲೈಟ್ ಉರಿಯುತ್ತಿದ್ದರೆ ಎಟಿಎಂ ಸುರಕ್ಷಿತವೆಂದು ಭಾವಿಸಿರಿ. ಒಂದು ವೇಳೆ ಅದರಲ್ಲಿ ಕೆಂಪು ಲೈಟ್ ಅಥವಾ ಯಾವುದೇ ಲೈಟು ಇಲ್ಲದಿದ್ದರೆ ನಿಮ್ಮ ಎಟಿಎಂ ನ್ನು ಉಪಯೋಗಿಸಬೇಡಿ.

Image result for ಏಟಿಎಂ

 

ಆದರೂ ಕೆಲವೊಂದು ಸಲ ನೀವು ಹ್ಯಾಕರ್ಸ್ ಬೀಸಿದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಅಂತ ಅನ್ನಿಸಿದರೆ, ಒಂದು ವೇಳೆ ಆವತ್ತು ಬ್ಯಾಂಕ್ ಸಹ ಬಂದ್ ಇದ್ದರೆ ತ್ವರಿತವಾಗಿ ಪೊಲೀಸರಿಗೆ ಸಂಪರ್ಕಿಸಿರಿ. ಯಾಕೆಂದರೆ ಅಲ್ಲಿ ಹ್ಯಾಕರ್ಸ್ ನ ಫಿಂಗರ್ ಪ್ರಿಂಟ್ ದೊರೆಯುವದು. ಜೊತೆಗೆ ಸಮೀಪದಲ್ಲಿ ಯಾವುದಾದರೂ ಬ್ಲೂಟೂಥ್ ಡಿವಾಯಿಸ್ ಎಕ್ಟಿವ್ ಇದೆ ಅಥವಾ ಇಲ್ಲ ಎಂಬುದೂ ನೀವೂ ಗಮನಿಸಬಹುದು.ಇದರಿಂದ ನೀವೂ ಆ ವ್ಯಕ್ತಿಯನ್ನು ಶೋಧಿಸಿ ಪೊಲೀಸರಿಗೆ ಒಪ್ಪಿಸಬಹುದು.

ನಮ್ಮ ಪೇಜ್ ಲೈಕ್ ಮಾಡಿ 👇🏻👇🏻

Leave a Reply

Your email address will not be published. Required fields are marked *