ಒಳ್ಳೆಯ ಸಂಬಳದ ನೌಕರಿಯನ್ನು ತ್ಯಜಿಸಿ ಈ ಸಣ್ಣ ಉದ್ಯೋಗದಿಂದ ತಿಂಗಳಿಗೆ ಲಕ್ಷಾವಧಿ ರೂಪಾಯಿಗಳನ್ನು ಗಳಿಸುವ ಗೆಳೆಯರು.

ಒಳ್ಳೆಯ ಸಂಬಳದ ನೌಕರಿಯನ್ನು ತ್ಯಜಿಸಿ ಈ ಸಣ್ಣ ಉದ್ಯೋಗದಿಂದ ತಿಂಗಳಿಗೆ ಲಕ್ಷಾವಧಿ ರೂಪಾಯಿಗಳನ್ನು ಗಳಿಸುವ ಗೆಳೆಯರು.

 

 

ಚಿತ್ರದಲ್ಲಿ ಕಾಣಿಸುವ ಇವರು ಮಿತ್ರರು ಒಬ್ಬ ದೀಪಕ ಮತ್ತು ಇನ್ನೊಬ್ಬ ಅಭಿನವ ಏನಾದರೂ ಮಾಡಬೇಕು ಸ್ವಂತ ಬಿಜನೆಸ್ ಶೋಧಿಸಬೇಕು ಎನ್ನೋ ಉದ್ಧೇಶದಿಂದ ಒಬ್ಬ ದೇಶದಲ್ಲಿಯ ನೌಕರಿ ಬಿಟ್ಟರೆ ಇನ್ನೊಬ್ಬ ವಿದೇಶದಲ್ಲಿಯ ಒಳ್ಳೆಯ ಸಂಬಳದ ನೌಕರಿಯನ್ನು ತ್ಯಾಗ ಮಾಡಿದನು.

ಉತ್ತರಪ್ರದೇಶದ ಬುರಹಾನಪುರದಲ್ಲಿ ಸ್ವಂತದ್ದೆ ಬಾಳೆಹಣ್ಣಿನ ಚಿಪ್ಸ್ ತಯಾರಿಸಿ ಮಾರುವ ಉದ್ಯೋಗ ಪ್ರಾರಂಭಿಸಿದರು. ಮೂರೇ ಮೂರು ತಿಂಗಳುಗಳಲ್ಲಿ ಇವರು ತಯಾರಿಸಿದ ಬಾಳೆಕಾಯಿಯ ಚಿಪ್ಸಗಳು ಇಂಡಿಯಾ ಮಾರ್ಟ್ ಮತ್ತು ಅಮೆಜಾನ್ ನಂತಹ ಆನ್ಲೈನ್ ಶಾಪಿಂಗ್ ವೆಬ್ಸೈಟ್ನಲ್ಲಿ ಮಾರಲು ಪ್ರಾರಂಭಿಸಿತು.

ಸ್ವಾದಿಷ್ಟ , ಗರಿಗರಿಯಾದ ಹಾಗೂ ತಿನ್ನಲು ರುಚಿಕಟ್ಟಾದ ಕಾರಣದಿಂದ ಈ ಚಿಪ್ಸಗಳಿಗೆ ದೇಶ ವಿದೇಶಗಳಿಂದ ಬೇಡಿಕೆ ಬರತೊಡಗಿತು. ಗುಜರಾತ, ಲಖನೌ, ರಾಯಪೂರ ಮತ್ತು ಇಂದೋರ್ ನಲ್ಲಿ ತಮ್ಮ ಒಳ್ಳೆಯ ಇಮೇಜ್ ಸ್ಥಾಪಿಸಿದ ನಂತರ ಈ ಚಿಪ್ಸಗಳಿಗೆ ಹೊರಗಿನಿಂದ ವಿಶೇಷವಾಗಿ ಅಮೇರಿಕಾದಿಂದ ಡಿಮಾಂಡ್ ಬರತೊಡಗಿತು. ಈಗ ಅಮೇರಿಕಾಕ್ಕೆ ಮೊದಲ ಯತ್ನದಲ್ಲಿ 16 ಟನ್ ಚಿಪ್ಸಗಳನ್ನು ಕಳಿಸುವ ಉದ್ದೇಶ ಹೊಂದಿದ್ದಾರೆ.

ಒಂದು ವಾರದ ನಂತರ ಓ ಎಲ್ ಎಕ್ಸ್ ಮತ್ತು ಫ್ಲಿಪಕಾರ್ಟ್ ನಲ್ಲಿ ಚೀಪ್ಸಗಳ ಜೊತೆಗೆ ಬಾಳೆಯ ಹಿಟ್ಟು ಸಹಿತ ಮಾರಲು ಪ್ರಾರಂಭಿಸುವವರಿದ್ದಾರೆ. ಇದಕ್ಕಾಗಿ ಬಾಳೆಹಣ್ಣಿನ ವೇಫರ್ಸ್ ಕಂಪನಿ ಜೊತೆ ರಜಿಸ್ಟ್ರೇಷನ್ ಸಹ ಮಾಡಲಾಗಿದೆ.

31 ವರ್ಷದ ಅಭಿನವ ಖೇಮಾರಿಯ ನ್ಯಾಷನಲ್ ಡೇಅರಿ ಡೆವಲಪ್ಮೆಂಟ್ ಬೋರ್ಡನ ಆಯ್ ಆಯ್ ಎಲ್ ನಲ್ಲಿ ಎರಡು ವರ್ಷ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಕಂಪನಿ ಪ್ರಾರಂಭಿಸಿ ಮೂರು ತಿಂಗಳ ಅವಧಿಯಲ್ಲಿಯೇ ಇಬ್ಬರೂ ಕೂಡಿ ಇಲ್ಲಿಯ ವರೆಗೆ ನಾಲ್ಕು ಲಕ್ಷ ರೂಪಾಯಿಗಳ ಪ್ರಾಫಿಟ್ ತೆಗೆದುಕೊಂಡಿದ್ದಾರೆ.

ಒಟ್ಟು 18 ಪ್ರಕಾರದ ವಿವಿಧ ಸ್ವಾದಗಳಲ್ಲಿ ಈ ಬಾಳೆಕಾಯಿಯ ಚಿಪ್ಸಗಳು.

ಅಭಿನವ ಮತ್ತು ದೀಪಕ ಇವರು ಚಿಪ್ಸಗಳನ್ನು ಬೇರೆ ಬೇರೆ ಫ್ಲೇವರ್ ನಲ್ಲಿ ತಯಾರಿಸುವ ಕಲೆಯನ್ನು ಇಂಟರ್ನೆಟ್ ನಿಂದ ಕಲಿತುಕೊಂಡಿದ್ದಾರೆ. ಇವುಗಳಲ್ಲಿ ಟೊಮೊಟೊ, ಕ್ರೀಮ್ ಆಂಡ್ ಓನಿಯನ್, ಚಾಕಲೆಟ್,ಕ್ರಿಮಿ ಚೀಜ್, ಲೈಮ ಆಂಡ್ ಚಿಲಿ, ಶೆಜವಾನ್ , ಮಂಚೂರಿಯನ್ ಚೀಜ್, ಕರಿಮೆಣಸು, ಉಪವಾಸದ, ಜೈನ್ ಪಿಕ್ಸ್, ನಾಟೋಜ, ಕುರಕುರೆ, ಪುದೀನಾ ಮತ್ತು ಜಲಜೀರಾ ಹೀಗೆ ಇನ್ನು ಕೆಲವು ವಿವಿಧ ಸ್ವಾದಗಳಲ್ಲಿ ಚೀಪ್ಸ್ ತಯಾರಿಸುವದರಿಂದ ಅತೀ ಬೇಡಿಕೆ ಬರಲು ಕಾರಣವಾಗಿದೆ.

Leave a Reply

Your email address will not be published. Required fields are marked *