ಕ್ಯಾನ್ಸರ್ ಆಗುವ ಮೊದಲು ದೇಹ ಸೂಚಿಸುವ ಕೆಲವು ಸಂಕೇತಗಳು,  ಇವುಗಳನ್ನು ದುರ್ಲಕ್ಷಿಸಬೇಡಿ.

ಕ್ಯಾನ್ಸರ್ ಆಗುವ ಮೊದಲು ದೇಹ ಸೂಚಿಸುವ ಕೆಲವು ಸಂಕೇತಗಳು,  ಇವುಗಳನ್ನು ದುರ್ಲಕ್ಷಿಸಬೇಡಿ.

 

 

ನವ ದೇಹಲಿ:- ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ರಿಪೋರ್ಟ್ ಪ್ರಕಾರ 2106 ರಲ್ಲಿ ಸುಮಾರು 16 ಲಕ್ಷ 85 ಸಾವಿರ 210 ಅಮೇರಿಕನ್ನರಲ್ಲಿ ಕ್ಯಾನ್ಸರ್ ನ ಡಾಯ್ಗನೊಜ್ ಮಾಡಲಾಯಿತು. ಈ ರಿಪೋರ್ಟ್ ನಲ್ಲಿ 39.6 ಪ್ರತಿಶತ ಪುರುಷರು ಮತ್ತು ಮಹಿಳೆಯರು ತಮಗೆ ಕ್ಯಾನ್ಸರ್ ಇದೇ ಎಂದು ಮೊದಲೇ ಗುರುತಿಸಿಕೊಂಡಿದ್ದಾರೆ.

ಎಲ್ಲಿಯವರೆಗೆ ಕ್ಯಾನ್ಸರ್ ನ ಕಾರಣ ನಿಶ್ಚಿತವಾಗಿ ಕಂಡು ಹಿಡಿಯುವದಿಲ್ಲವೋ ಅಲ್ಲಿಯವರೆಗೆ ನಾವು ಕ್ಯಾನ್ಸರ್ ಪೂರ್ವದ ಸಾಮಾನ್ಯ ಲಕ್ಷಣಗಳನ್ನು ಕಂಡು ಹಿಡಿಯಬಹುದಾಗಿದೆ. ನಮ್ಮ ಶರೀರದ ಆಕಲನ ಮತ್ತು ಅದರ ಮೇಲೆ ಗಮನ ವಿಟ್ಟು ಈ ರೋಗದ ಲಕ್ಷಣಗಳನ್ನು ಸಹಜವಾಗಿ ಗುರುತಿಸಬಹುದಾಗಿದೆ.

 

ತೀವ್ರ ರಕ್ತಸ್ರಾವ:-
ದೇಹದ ಯಾವುದೇ ಅಂಗಾಂಗಗಳಿಂದ ತೀವ್ರ ರಕ್ತಸ್ರಾವ ವಾಗುವದು ಕ್ಯಾನ್ಸರ್ ನ ಲಕ್ಷಣಗಳಲ್ಲಿ ಒಂದು. ಈ ರೋಗದ ಸೋಂಕು ತಗುಲಿದಾಗಿನಿಂದ ಬಹಿರ್ದೆಸೆಯ ಮೂಲಕ ರಕ್ತ ಸ್ರಾವ ಕಂಡು ಬರುವದು. ಇದು ಕೊಲೆನ್ ಕ್ಯಾನ್ಸರ್ ನ ಲಕ್ಷಣವಾಗಿದೆ. ಇದರ ಜೊತೆಗೆ ಮಲಮೂತ್ರ ವಿಸರ್ಜನೆಯ ನಂತರ ಆ ಅಂಗಾಂಗಗಳಲ್ಲಿ ನೋವಾಗುವದು ಮತ್ತು ಮೂತ್ರದಲ್ಲಿ ರಕ್ತ ಹರಿಯುವಿಕೆಯ ಲಕ್ಷಣ ಕಂಡು ಬಂದಲ್ಲಿ ಅದು ಪ್ರೊಸ್ಟೇಟ್ ಕ್ಯಾನ್ಸರ್ ನ ಲಕ್ಷಣ ವಿರುವದು. ಮಹಿಳೆಯರಲ್ಲಿ ಮಾಸಿಕ ಋತುವಿನ ನಂತರವೂ ರಕ್ತ ಸ್ರಾವ ಒಂದು ವೇಳೆ ನಿಲ್ಲದೆ ಇದ್ದಲ್ಲಿ ಆಗಲೂ ಗಮನ ಹರಿಸುವ ಅವಶ್ಯಕತೆ ಇದೆ.

ರಾತ್ರಿಯ ಸಮಯದಲ್ಲಿ ಒಮ್ಮೆಲೇ ಬೆವೆತುಕೊಳ್ಳುವದು:-
ರಾತ್ರಿಯ ಸಮಯದಲ್ಲಿ ದೇಹವು ಹೆಚ್ಚಿನ ಪ್ರಮಾಣದಲ್ಲಿ ಬೆವರುವದು ಈ ಲಕ್ಷಣ ಶರೀರದಲ್ಲಿ ಔಷಧಿಯ ರಿಅಕ್ಷನ್ ಇಲ್ಲವೇ ಯಾವುದೇ ಇನ್ಫೆಕ್ಷನ್ ಸಂಕೇತ ಇರುತ್ತದೆ. ಇದೆ ತೆರನಾದ ಸ್ಥಿತಿ ಬಹಳ ದಿನಗಳವರೆಗೆ ಕಂಡು ಬಂದಲ್ಲಿ ಮತ್ತು ಬೆವರುವದು ಕಡಿಮೆಯಾಗದಿದ್ದಲ್ಲಿ ಡಾಕ್ಟರ್ ರನ್ನು ಸಂಪರ್ಕಿಸಬೇಕು.

ಅಶಕ್ತತೆ  ಮತ್ತು ಶರೀರದ  ವಿವಿಧ ಅಂಗಾಂಗಳಲ್ಲಿ ನೋವು ಕಂಡು ಬರುವದು:-
ಅತಿಯಾದ ಕೆಲಸ ಮತ್ತು ಕುಳಿತುಕೊಳ್ಳುವ ತಪ್ಪಾದ ರೂಢಿಗಳಿಂದ ಮೈ ಕೈ ನೋವಾಗುವದು ಸಾಮಾನ್ಯ. ಆದರೆ ಸತತವಾಗಿ ಸೊಂಟದಲ್ಲಿ ನೋವು ಕಂಡು ಬಂದಲ್ಲಿ ಅದು ಕೊಲೊರೆಕ್ಟಲ್ ಅಥವಾ ಪ್ರೊಸ್ಟೇಟ್ ಕ್ಯಾನ್ಸರ್ ನ ಕಾರಣವಾಗಿರುತ್ತದೆ. ಹಾಗೂ ಸೊಂಟದ ಆಸುಪಾಸಿನಲ್ಲಿ ಮಾಂಸಕೋಶದಲ್ಲಿಯು ನೋವು ಕಂಡುಬರುತ್ತದೆ. ಕಾರಣವಿಲ್ಲದೆ ಅವಶ್ಯಕತೆಗಿಂತ ಹೆಚ್ಚು ಅಶಕ್ತ ವೆನಿಸುವದು. ಇದು ಸಹ ಕ್ಯಾನ್ಸರ್ ನ ಪ್ರಾರಂಭಿಕ ಲಕ್ಷಣವಾಗಬಹುದು.

ತೂಕ ಕಡಿಮೆಯಾಗುವುದು:-
ಯಾವುದೇ ಕಾರಣವಿಲ್ಲದೆ ದೇಹದ ತೂಕದಲ್ಲಿ ಒಮ್ಮೆಲೇ ಇಳಿತ ಕಂಡುಬರುವದು ಸಹ ಕ್ಯಾನ್ಸರ್ ನ ಲಕ್ಷಣವಾಗಿದೆ. ಹಸಿವು ಕಡಿಮೆಯಾಗುವದು, ಇಲ್ಲವೇ ಹೆಚ್ಚಿಗೆ ಊಟ ಹೋಗದಿರುವದು ಇದು ಒಂದು ಲಕ್ಷಣವಾಗಿದೆ. ಯಾವುದೇ ಪರಿಶ್ರಮ ವಿಲ್ಲದೇ ಶರೀರದ ತೂಕ ಒಮ್ಮೆಲೇ ನಾಲ್ಕೈದು ಕೇಜಿ ಕಡಿಮೆಯಾದರೆ ಡಾಕ್ಟರ್ ರ ಸಲಹೆ ಸೂಚನೆ ತೆಗೆದುಕೊಳ್ಳುವದು ಸೂಕ್ತ.

ಸತತವಾಗಿ ಕಂಡು ಬರುವ ಕೆಮ್ಮು:-

ಶೀತ ಮತ್ತು ಫ್ಲೂ ಹೊರತಾಗಿ ಧೂಮಪಾನ ಮಾಡುವವರಲ್ಲಿ ಸಾಮಾನ್ಯವಾಗಿ ಕೆಮ್ಮು ಕಂಡು ಬರುವದು. ಇನ್ನು ಈ ಯಾವುದೇ ಚಟಗಳಿಲ್ಲದೇನೆ ಸತತವಾಗಿ ಕೆಮ್ಮು ಕಂಡು ಬಂದರೆ ಇದು ಲಂಗ್ ಕ್ಯಾನ್ಸರ್ ನ ಲಕ್ಷಣ ಇರಬಹುದಾಗಿದೆ. ಕೆಮ್ಮಿನ ಜೊತೆಗೆ ರಕ್ತ ಕಾಣಿಸಿಕೊಂಡರೆ ತ್ವರಿತವಾಗಿ ಡಾಕ್ಟರ್ ರನ್ನು ಸಂಪರ್ಕಿಸುವದು ತುಂಬಾ ಉತ್ತಮ. ಗಂಟಲಲ್ಲಿ ನೋವು ತುತ್ತು ನುಂಗುವಾಗ ಕಷ್ಟ ವಾಗುವದು, ಅನಿಸಿದರೆ ಡಾಕ್ಟರ್ ಹತ್ರ ಹೋಗುವದು ಒಳ್ಳೆಯದು.

ಎದೆಯಲ್ಲಿ ಉರಿತ ಮತ್ತು ಅಪಚನ:-

ಎದೆಯಲ್ಲಿ ಉರಿತ ಮತ್ತು ಅಪಚನ ಇವು ಸಾಮಾನ್ಯ ಸಮಸ್ಯೆಗಳಿವೆ. ಯಾಕೆಂದರೆ ಅತಿಯಾದ ಊಟ ಮತ್ತು ಮಸಾಲೆಯುಕ್ತ ಆಹಾರ ಸೇವನೆಯಿಂದ ಈ ಸಮಸ್ಯೆ ಕಂಡು ಬರುವದು. ಆದರೆ ಈ ಸಮಸ್ಯೆ ಮೇಲಿಂದ ಮೇಲೆ ಕಂಡು ಬರಲು ಪ್ರಾರಂಭಿಸಿದರೆ ಮಾತ್ರ ಅದು ಚಿಂತೆಯ ವಿಷಯವಾಗುವದು. ಅಂತ ಸಂದರ್ಭದಲ್ಲಿ ಡಾಕ್ಟರ್ ಸಲಹೆ ತೆಗೆದುಕೊಳ್ಳುವದು ಸೂಕ್ತ.

ಹಾಗಲಕಾಯಿ ರಸದ ಸೇವನೆಯಿಂದ ಕ್ಯಾನ್ಸರ್ ಮುಕ್ತ ಜೀವನ ಸಾಧ್ಯ.

ತರಕಾರಿಗಳು, ಹಣ್ಣುಗಳು ಮತ್ತು ಸಮತೋಲ ಆಹಾರ, ಆವಶ್ಯಕ ವಿಟಮಿನ್ಸ್ ಹಾಗೂ ಮಿನರಲ್ಸ್ ಗಳು ಒಳ್ಳೆಯ ಸ್ವಾಸ್ಥ್ಯದ ಗುರುಮಂತ್ರಗಳಾಗಿವೆ. ಆದರೆ ಇದರಲ್ಲಿಯ ಒಂದು ಘಟಕ ತುಂಬಾ ಮಹತ್ವದ್ದಾಗಿದೆ ಅದು ಕ್ಯಾನ್ಸರ್ ಆಗದಂತೆ ನೋಡಿಕೊಳ್ಳುವದು. ಅದೇ ಹಾಗಲಕಾಯಿ. ಇದು ತಿನ್ನಲು ಕಹಿಯಾದರೂ ಇದರ ಲಾಭ ಮಾತ್ರ ಬಹಳಷ್ಟಿದೆ.ಆದ್ದರಿಂದ ನಿಮ್ಮ ಆಹಾರದಲ್ಲಿ ಹಾಗಲಕಾಯಿಗೆ ಸ್ಥಾನ ವಿದ್ದರೆ ತುಂಬಾನೇ ಒಳ್ಳೆಯದು.ಇದರಿಂದ ಕ್ಯಾನ್ಸರ್ ಗುಣಮುಖವಾಗುವದು.

ದಿನಾಲು ಈ ಕಾಯಿಯ ರಸ ಕುಡಿಯುವದರಿಂದ ಮೇದೋಜೀರಕ ಗ್ರಂಥಿಗಳಲ್ಲಿಯ ಕ್ಯಾನ್ಸರ್ ಹುಟ್ಟುಹಾಕುವ ಜೀವಕೋಶಗಳು ನಾಶವಾಗುವವು. ನಿಯಮಿತವಾಗಿ ಈ ರಸವನ್ನು ಸೇವನೆ ಮಾಡುವದರಿಂದ 72 ರಿಂದ 90 ಪ್ರತಿಶತ ಧನಾತ್ಮಕ ಪರಿಣಾಮ ಕಂಡು ಬಂದಿದೆ. ಇದರ ಜ್ಯುಸ್ ಕ್ಯಾನ್ಸರ್ ಜೀವಕೋಶಗಳನ್ನು ನಮ್ಮ ಶರೀರದಿಂದ ದೂರವಿಡಲು ಸಹಾಯ ಮಾಡುತ್ತದೆ.

ಇಲಿಗಳ ಮೇಲೆ ಮಾಡಿದ ರಿಸರ್ಚ್ ನಿಂದ ಈ ಕ್ಯಾನ್ಸರ್ ನ ಟ್ಯೂಮರ್ 64 ಪ್ರತಿಶತ ಕಡಿಮೆಯಾದದ್ದು ಕಂಡು ಬಂದಿದೆ. ಕ್ಯಾನ್ಸರ್ ನ ನಾಶದಲ್ಲಿ ಕಿಮೋಥೆರಪಿ ಸಹ ಬಹುಮೂಲ್ಯ ಉಪಚಾರವಾಗಿದೆ. ಕ್ಯಾನ್ಸರ್ ಮೂಲ ಸಹಿತ ನಾಶ ಹೇಗೆ ಮಾಡಲು ಬರುವದು ಅದಕ್ಕೆ ತುಂಬಾ ಮಹತ್ವ ಇದೆ. ಅಷ್ಟೇ ಅಲ್ಲ ಹಾಗಲಕಾಯಿಯ ಸೇವನೆಯಿಂದ ಇನ್ನು ಕೆಲವು ಉಪಯೋಗಗಳು ಇವೆ.ಇದರ ಜ್ಯುಸ್ ವನ್ನು ನಿಯಮಿತವಾಗಿ ಸೇವಿಸುವದರಿಂದ ಹಸಿವು ಹೆಚ್ಚಾಗುವದು. ಮತ್ತು ಪಚನಕ್ರಿಯೆ ಸರಾಗವಾಗಿ ನಡೆಯುವದು.

Leave a Reply

Your email address will not be published. Required fields are marked *