” ಚಿಕ್ಕವನಿದ್ದಾಗ ಸೆಗಣಿ ತುಂಬುವ ಹುಡುಗನ ಒಂದೇ ಒಂದು ಕಲ್ಪನೆ 8 ತಿಂಗಳಲ್ಲಿ 8 ಕೋಟಿಯ ಮಾಲೀಕನನ್ನಾಗಿ ಮಾಡಿತು. ಓದಿ ಹೇಗೆ ಅಂತ”

" ಚಿಕ್ಕವನಿದ್ದಾಗ ಸೆಗಣಿ ತುಂಬುವ ಹುಡುಗನ ಒಂದೇ ಒಂದು ಕಲ್ಪನೆ 8 ತಿಂಗಳಲ್ಲಿ 8 ಕೋಟಿಯ ಮಾಲೀಕನನ್ನಾಗಿ ಮಾಡಿತು. ಓದಿ ಹೇಗೆ ಅಂತ"

 

 

ಒಬ್ಬ ಸಾಮಾನ್ಯ ಭಾರತೀಯ ವ್ಯಕ್ತಿ ಎಂಟು ತಿಂಗಳಲ್ಲಿ ಎಂಟು ಕೋಟಿ ರೂಪಾಯಿಗಳನ್ನು ಸ್ವಂತದ ಪರಿಶ್ರಮದಿಂದ ಗಳಿಸುವನು. ಇದರ ಮೇಲೆ ಬಹುಶಃ ನಿಮಗೆ ವಿಶ್ವಾಸ ಕೂಡಲಕ್ಕಿಲ್ಲ. ಇಲ್ಲವಾದರೆ ಯಾವುದೇ ಲಾಟರಿ ಹೊಡೆದಿರಬೇಕೆಂದು ಅನಿಸಬಹುದು. ಇಲ್ಲ ಅನಧಿಕೃತ ಕೆಲಸವೇನಾದರೂ ಮಾಡಿರಬೇಕು ಎಂದು ಎನಿಸಲು ಬಹುದು. ಇವು ಯಾವುದೂ ಇಲ್ಲ. ಈತ ಬರೀ ತನ್ನ ಬುದ್ಧಿ ಕಲ್ಪನೆಯಿಂದ ಇಷ್ಟೊಂದು ಹಣ ಕಡಿಮೆ ಅವಧಿಯಲ್ಲಿ ಸಂಪಾದಿಸಿದ್ದಾನೆ. ಯಾವುದು ಆ ಐಡಿಯಾ ನೋಡೋಣ.

ಕ್ಯಾಲಿಪ್ಸೋ ಹೆಸರಿನ ಬ್ಯೂಟಿ ಸ್ಟಾರ್ಟ್ ಅಪ್ ಪ್ರಾರಂಭಿಸಿದ ಗೌರವ ರಾಣಾ ಬಗ್ಗೆ ತಿಳಿದುಕೊಳ್ಳುವಾ. ಹರಿಯಾಣದ ಒಂದು ಚಿಕ್ಕ ಊರಿನಲ್ಲಿ ಜನಿಸಿದ ಗೌರವ ಒಂದು ಸಾಮಾನ್ಯ ಬಡತನ ಕುಟುಂಬದ ಸದಸ್ಯ. ಆತನ ಊರಿನಲ್ಲಿ ಶಾಲೆ ಇರದ ಕಾರಣ ನೆರೆಯ ಊರಿಗೆ ಶಾಲೆ ಕಲಿಯಲು ಹೋಗುತ್ತಿದ್ದ. ಪ್ರಾಥಮಿಕ ಹಂತದ ಶಿಕ್ಷಣ ಮುಗಿಸಿ ಮುಂದಿನ ಶಿಕ್ಷಣದ ಸಲುವಾಗಿ ಪಟ್ಟಣಕ್ಕೆ ಹೋಗುವ ನಿಶ್ಚಯ ಮಾಡಿದನು.

ಈ ಗೌರವನ ಮುಂದೆ ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಹಣದ ಸಮಸ್ಯೆ ಇತ್ತು. ತನ್ನ ಚಿಕ್ಕಂದಿನಲ್ಲಿಯ ಸಂಘರ್ಷದ ಜೀವನದ ಬಗ್ಗೆ ಹೇಳುವಾಗ ಗೌರವ ತನ್ನ ಕುಟುಂಬದ ದಯನೀಯ ಪರಸ್ಥಿತಿಯನ್ನು ನೆನೆಪಿಸಿಕೊಳ್ಳುತ್ತಾನೆ. ತಂದೆಯ ಅನಾರೋಗ್ಯದ ಕಾರಣದಿಂದ ಆರ್ಥಿಕ ಸಮಸ್ಯೆ ಮತ್ತಷ್ಟು ಹದಗೆಟ್ಟಿತು. ಅಜ್ಜಿಯ ಒಂದು ಚಿಕ್ಕ ದಿನಸಿ ಅಂಗಡಿಯಿಂದಲೇ ಮನೆ ನಡೆಯುತ್ತಿತ್ತು.

ವ್ಯಕ್ತಿಯ ಆತ್ಮಬಲ, ದೃಢ ನಿಶ್ಚಯ ಇದ್ದರೆ ಆತನ ಏಳಿಗೆಯನ್ನು ಯಾರಿಗೂ ನಿಲ್ಲಿಸಲು ಸಾಧ್ಯವಿಲ್ಲ. ತನ್ನ ಪರಿಶ್ರಮದ ಬಲದಿಂದ ಆಗ್ರಾದ ಒಂದು ಎಜುಕೇಶನಲ್ ಇನ್ಟಿಟ್ಯೂಟ್ ನಲ್ಲಿ ಪ್ರವೇಶ ಪಡೆದು ಕಠೋರ ಪರಿಶ್ರಮದಿಂದ ಅಭ್ಯಾಸ ಮಾಡಿದನು. ಏತನ್ಮಧ್ಯೆ ಗ್ರಾಮಸ್ಥರು ಮತ್ತು ಸಂಬಂಧಿಕರು ಅಲ್ಪಸ್ವಲ್ಪ ಹಣದ ಸಮಸ್ಯೆಯನ್ನು ನೀಗಿಸಿದರು. ಹೀಗೆಯೇ ಆತ ತನ್ನ ಗುರಿಯಲ್ಲಿ ಯಶಸ್ವಿಯಾಗಿ ಆಟೋಮೊಬೈಲ್ ಎಂಜಿನಿಯರಿಂಗ್ ಡಿಗ್ರಿ ಪೂರ್ಣಗೊಳಿಸಿ 2011 ರಲ್ಲಿ ಗೌರವ ನೌಕರಿಯ ಶೋಧದಲ್ಲಿ ಇಂದೂರಕ್ಕೇ ಬಂದನು.

ಇದೇ ಸಂದರ್ಭದಲ್ಲಿ ಗೌರವನ ತಂದೆಯ ನಿಧನವಾಯಿತು. ಮನೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಯಿತು. ಮಾಡು ಇಲ್ಲವೇ ಮಡಿ ಯಂತಹ ಸ್ಥಿತಿಯಲ್ಲಿ ಗೌರವನು ನೌಕರಿಯ ಜೊತೆಗೆ ಒಂದು ಬಿಜನೆಸ್ ಪ್ರಾರಂಭಿಸುವ ವಿಚಾರ ಮಾಡಿದನು. ಮೊದಲು ತನ್ನ ಒಂದು ಬಿಜನೆಸ್ ಇವೆಂಟ್ ಕಂಪನಿಯ ರೂಪದಲ್ಲಿ ಶುರು ಮಾಡಿದನು. ಆದರೆ ಅದರಲ್ಲಿ ಯಶಸ್ಸು ಸಿಗದ ಕಾರಣ ಕಂಪನಿಯು ನಡೆಯಲಿಲ್ಲ. ಹೀಗಾಗಿ ಮೊದಲನೆಯ ಪ್ರಯತ್ನದಲ್ಲಿ ವಿಫಲನಾದನು.

ಈ ಸೋಲಿನಿಂದ ಪಾಠ ಕಲಿತ ಗೌರವನು 2015 ರಲ್ಲಿ ಹೊಸ ಕಲ್ಪನೆಯಿಂದ ಹೊಸ ಉತ್ಸಾಹದಿಂದ ಬ್ಯುಟಿ ಸರ್ವಿಸ್ ಪ್ರೋವೈಡರ್ ಬಿಜನೆಸ್ ಪ್ರಾರಂಭಿಸಿದನು. ಈ ಹೊಸ ಸ್ಟಾರ್ಟ್ ಅಪ್ ನ ಹೆಸರು ಕ್ಯಾಲಿಪ್ಸೋ ಹೆಸರಿನಿಂದ ಪರಿಚಯಿಸಿದನು. ವೆಬ್ಸೈಟ್ ಮತ್ತು ಮೊಬೈಲ್ ಅಪ್ ನ ಸಹಾಯದಿಂದ ಆನ್ ಡಿಮ್ಯಾಂಡ್ ಬ್ಯೂಟಿ ಸರ್ವಿಸ್ ಕೊಡುವ ಕಲ್ಪನೆ ಅತ್ಯಂತ ಜನಪ್ರಿಯವಾಯಿತು.

ಈ ಆಪ್ ನ ಮುಖಾಂತರ ಮಹಿಳೆಯರು ಮನೆಯಲ್ಲಿ ಕುಳಿತುಕೊಂಡೆ ಈ ಸೇವೆಯ ಲಾಭವನ್ನು ಪಡೆದುಕೊಳ್ಳ ತೊಡಗಿದರು. ದೇಶದ ಎಲ್ಲಕ್ಕೂ ದೊಡ್ಡ ಹೋಟೆಲ್ ಬಿಜನೆಸ್ ಒಯೋ ರೂಮ್ಸ್ ಜೊತೆಗೆ ಟಾಯ್-ಅಪ್ ಮಾಡಿಕೊಂಡು ವಿವಿಧ ದೊಡ್ಡ ಪಟ್ಟಣಗಳಲ್ಲಿ ಡ್ಯೂಟಿ ಸರ್ವಿಸ್ ಕೊಡುವ ಕರಾರು ಮಾಡಲಾಗಿದೆ.

ಯಾವ ಹುಡುಗ ಸ್ವಲ್ಪ ಹಣಕ್ಕಾಗಿ ಬೀದಿ ಬೀದಿಯಲ್ಲಿಯ ಶೆಗಣಿ ಗೊಬ್ಬರವನ್ನು ಕೂಡಿ ಹಾಕುತ್ತಿದ್ದ, ಇಂದು ಆತ ತನ್ನ ಸ್ವಂತ ಪರಿಶ್ರಮದ ಬಲದಿಂದ ಕೋಟ್ಯಾವಧಿ ರೂಪಾಯಿಗಳ ಮಾಲೀಕ ನಾಗಿದ್ದಾನೆ. ಮತ್ತು ಸಾವಿರಾರು ಜನರಿಗೆ ತಾನೇ ಕೆಲಸವನ್ನು ನೀಡಿದ್ದಾನೆ.

Leave a Reply

Your email address will not be published. Required fields are marked *