ಮಿಸ್ ವರ್ಲ್ಡ್ ಸ್ಪರ್ಧೆ ಗೆದ್ದ ಫೈನಲಿಸ್ಟ್ ಳಿಗೆ ಏನೇನು ದೊರೆಯುವದು ಗೊತ್ತಾ? ನೀವೂ ಆಶ್ಚರ್ಯ ಪಡುವಿರಿ.

ಮಿಸ್ ವರ್ಲ್ಡ್ ಸ್ಪರ್ಧೆ ಗೆದ್ದ ಫೈನಲಿಸ್ಟ್ ಳಿಗೆ ಏನೇನು ದೊರೆಯುವದು ಗೊತ್ತಾ? ನೀವೂ ಆಶ್ಚರ್ಯ ಪಡುವಿರಿ.

 

ಇಂದಿನ ಆಧುನಿಕ ಜಗತ್ತಿನಲ್ಲಿ ಮಿಸ್ ವರ್ಲ್ಡ್ , ಮಿಸ್ ಯೂನಿವರ್ಸ ಆಗಿ ರಾರಾಜಿಸುವ ಇಚ್ಛೆ ಯಾವ ಸುಂದರ ಮತ್ತು ಜಾಣ ಹುಡುಗಿಗೆ ಇರುವದಿಲ್ಲ. ಆದರೆ ಪ್ರತಿಯೊಬ್ಬರೂ ಭುವನಸುಂದರಿ ಆಗಲಿಕ್ಕೆ ಸಾದ್ಯವಿಲ್ಲ. ಕಾರಣ ಜಗತ್ತಿನಲ್ಲಿ ಈ ಬಹುಮಾನ ಪ್ರತಿ ವರ್ಷ ಒಬ್ಬಳಿಗೆ ಸಿಗುವದು.

ಇನ್ನೂ ಇಂತಹ ದೊಡ್ಡ ಕಾರ್ಯಕ್ರಮ ಮತ್ತು ದೊಡ್ಡ ಪದವಿ ಎಂದ ಮೇಲೆ ಅಂತಹ ದೊಡ್ಡ ಮಂಚದಲ್ಲಿ ಹೆಸರು ಪಡೆದು ವಿಶ್ವಸುಂದರಿಯಾದ ಮೇಲೆ ಬಹುಮಾನದ ರೂಪದಲ್ಲಿ ದೊರೆಯುವ ಪ್ರೈಸ್ ಸಹ ಭಾರೀ ಇರುವದು, ಇದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಒಬ್ಬಳು ಹುಡುಗಿ ಮಿಸ್ ವರ್ಲ್ಡ್ ಆದನಂತರ ಆ ಸುಂದರಿಗೆ ಏನೇನು ಕಾಣಿಕೆಗಳು ದೊರೆಯುವವು ಎಂಬುದನ್ನು ತಿಳಿದುಕೊಳ್ಳೋಣ.

ಮಿಸ್ ವರ್ಲ್ಡ್ ಪಟ್ಟ ಸಿಕ್ಕ ಮೇಲೆ ಮೊಟ್ಟ ಮೊದಲು ದೊರೆಯುವ ಸನ್ಮಾನದ ಕಾಣಿಕೆ ಎಂದರೆ ರತ್ನಜಡಿತ ಮುಕುಟ. ಈ ಕಿರೀಟವು ತುಂಬಾ ಬಹುಮೂಲ್ಯವಾದ ರತ್ನಗಳಿಂದ ನಿರ್ಮಿಸಿದ್ದು ಇರುತ್ತದೆ. ಇದರ ಬೆಲೆ ಲಕ್ಷಾವಧಿ ರೂಪಾಯಿಗಳಲ್ಲಿರುವದು. ಈ ಬರೀ ಒಂದು ಕಿರೀಟವೇ ಸ್ಪರ್ಧೆ ಗೆದ್ದ ಹುಡುಗಿಗೆ ಲಕ್ಷಾಧೀಶನ್ನಾಗಿಸುವದು.

 

ಇನ್ನೂ ಈ ಸ್ಪರ್ಧೆಯಲ್ಲಿ ಕೊಡುವ ನಗದು ಹಣದ ವಿಚಾರಕ್ಕೆ ಬಂದರೆ ಸುಮಾರು ಒಂದು ಲಕ್ಷ ಪೌಂಡ್ಸ್ ನಗದು ಹಣ ದೊರೆಯುವದು.(ಈ ಹಣವನ್ನು ಸ್ಪರ್ಧೆಯ ಆಯೋಜಕರು ಎಷ್ಟು ಅಂತ ಎಂದಿಗೂ ಘೋಷಿಸುವದಿಲ್ಲ)

ಭಾರತೀಯ ನಗದಿನಲ್ಲಿ ಇದರ ಮೌಲ್ಯ ಸುಮಾರು 86 ಲಕ್ಷಗಳ ವರೆಗೆ ಆಗುವದು. ಇದನ್ನು ಬಿಟ್ಟು ಇವರಿಗೆ ಬೇರೆ ಅನೇಕ ವಸ್ತುಗಳು ಕಾಣಿಕೆಯ ಸ್ವರೂಪದಲ್ಲಿ ದೊರೆಯುವವು. ಜಗತ್ತಿನ ದೊಡ್ಡ ದೊಡ್ಡ ಸೌಂದರ್ಯ ಸಾಧನಗಳ ಬ್ರ್ಯಾಂಡ್ ಗಳು ಈ ಮಿಸ್ ವರ್ಲ್ಡ್ ಸ್ಪರ್ಧೆಗೆ ಪ್ರಾಯೋಜಿಸುತ್ತಾರೆ. ಆ ಎಲ್ಲ ಕಂಪನಿಗಳ ಪ್ರತಿಯೊಂದು ಪ್ರಾಡಕ್ಟ್ ಗಳು ಉಚಿತವಾಗಿ ಉಪಯೋಗಿಸಲು ದೊರೆಯುವವು. ಜೊತೆಗೆ ದೊಡ್ಡ ದೊಡ್ಡ ಜ್ಯುವೆಲ್ಲರಿ ಕಂಪನಿಗಳು ಡಿಜಾಯಿನ್ ಮಾಡಿದ ಆಭರಣಗಳು ಸಹ ದೊರೆಯುವವು. ಹಾಗೆಯೇ ಮಿಸ್ ವರ್ಲ್ಡ್ ವಿನ್ನರಗೆ ಅತ್ಯುನ್ನತ ರಾಜ ವೈಭವದ ಟ್ರಾವೆಲ್ಸ್ ಪ್ಯಾಕೇಜ್ ಗಳು ಜಾಹೀರು ಪಡಿಸುತ್ತಾರೆ. ಆದ್ದರಿಂದ ಜಗತ್ತಿನಲ್ಲಿ ಎಲ್ಲಿ ಬೇಕೆಂದರಲ್ಲಿ ವರ್ಷ ಪೂರ್ತಿ ಉಚಿತವಾಗಿ ಪ್ರವಾಸ ಮಾಡಬಹುದು. ಇದಕ್ಕಾಗಿ ಯಾವುದೇ ಪ್ರಕಾರದ ಎಂಥ ಖರ್ಚು ಮಾಡುವದು ಅವಶ್ಯಕತೆ ಇರುವದಿಲ್ಲ ಎಲ್ಲವೂ ಬರಿ ಉಚಿತ.

ಇಷ್ಟು ಅಲ್ಲದೆ ಮಿಸ್ ವರ್ಲ್ಡ್ ಆದನಂತರ ಜಾಗತಿಕ ಮಟ್ಟದ ದೊಡ್ಡ ದೊಡ್ಡ ಕಂಪನಿಗಳು ತಮ್ಮ ನಿರ್ಮಾಣದ ಬ್ರ್ಯಾಂಡ್ ಗಳ ಜಾಹೀರಾತಿಗಾಗಿ ಕರೆಯುವರು. ಇದಕ್ಕಾಗಿ ಕೋಟ್ಯಾವಧಿ ರೂಪಾಯಿಗಳ ಆಫರ್ ಗಳನ್ನು ಕೊಡುತ್ತಾರೆ.

Leave a Reply

Your email address will not be published. Required fields are marked *