ಮಹತ್ವದ್ದು: RBI ಸ್ಪಷ್ಟನೆ.500-2000 ₹ ಗಳ ನೋಟಿನ ಮೇಲೆ ಬರೆದರೆ…………

ಮಹತ್ವದ್ದು: RBI ಸ್ಪಷ್ಟನೆ.500-2000 ₹ ಗಳ ನೋಟಿನ ಮೇಲೆ ಬರೆದರೆ............

 

 

ನವದೆಹಲಿ: 500 – 2000 ₹ ಗಳ ಮುಖಬೆಲೆಯ ನೋಟುಗಳ ಮೇಲೆ ಪೆನ್ನಿನಿಂದ ಬರೆದದ್ದೇ ಆದರೆ ಆ ನೋಟುಗಳನ್ನು ಬ್ಯಾಂಕಿನವರು ತೆಗೆದುಕೊಳ್ಳುವದಿಲ್ಲ ಎಂಬ ವದಂತಿಗಳು ಸೋಶಿಯಲ್ ನೆಟ್ ವರ್ಕ ನಲ್ಲಿ ವೈರಲ್ ಆಗಿದ್ದವು.

ಈ ಎಲ್ಲ ವದಂತಿಗಳಿಗೆ ಸಂಬಂಧಿಸಿ ಆರ್ ಬಿ ಆಯ್ ತನ್ನ ಸ್ಪಷ್ಟಿಕರಣವನ್ನು ನೀಡಿದೆ. 500 – 2000 ಮುಖಬೆಲೆಯ ನೋಟುಗಳ ಮೇಲೆ ಏನೇ ಬರೆದಿದ್ದರೂ ಇಂಥ ನೋಟುಗಳನ್ನು ಬ್ಯಾಂಕಿನವರು ತೆಗೆದುಕೊಳ್ಳಲು ನಿರಾಕರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ ನೋಟಿನ ಬಣ್ಣ ಒಂದು ವೇಳೆ ಮಾಸಿದ್ದರೂ ಸಹಿತ ಬ್ಯಾಂಕ್ ಅದನ್ನು ತೆಗೆದುಕೊಳ್ಳಲೆಬೇಕು ಎಂದು ಸ್ಪಷ್ಟನೆ ನೀಡಿದೆ.

ಬರೆದ ನೋಟುಗಳನ್ನು ಬ್ಯಾಂಕಿನವರು ನಿರಾಕರಿಸಲು ಸಾಧ್ಯವಿಲ್ಲ ಆದರೆ….


ನೋಟುಗಳ ಮೇಲೆ ಬರೆದಿರತಕ್ಕಂತಹ ಹಣವನ್ನು ಬದಲಿಸಲು ನೀವು ಒಂದು ವೇಳೆ ಬ್ಯಾಂಕಿಗೆ ಹೋದರೆ ಆ ನೋಟುಗಳು ಬದಲಿಸಿ ನಿಮಗೆ ಬೇರೆ ನೋಟುಗಳು ಅಥವಾ ಹಣ ದೊರೆಯುವದಿಲ್ಲ. ಬದಲಾಗಿ ಆ ಹಣ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಬೇಕಾಗುವದು ಎಂದು ಆರ್ ಬಿ ಆಯ್ ಹೇಳಲು ಮರೆತಿಲ್ಲ.

ಹೊಸ ನೋಟುಗಳನ್ನು ಬದಲಿಸಿ ಕೊಡುವ ನಿಯಮ ಇಲ್ಲಿಯವರೆಗೆ ಬಂದಿಲ್ಲವಾದ್ದರಿಂದ ಬರೆದಿರತಕ್ಕಂತಹ ನೋಟುಗಳನ್ನು ಬದಲಿಸಿ ಕೊಡುವದಿಲ್ಲ.

ಸ್ಮಾರ್ಟ್ ಫೋನ್ ಇಲ್ಲದಿದ್ದರೂ ಇಂಟರ್ ನೆಟ್ ಸೌಲಭ್ಯ.

ಯಾರ ಹತ್ತಿರ ಸ್ಮಾರ್ಟ್ ಫೋನ್ ಇಲ್ಲವೋ ಆ ವ್ಯಕಿಗಳು ಸಹಿತ ಇಂಟರ್ನೆಟ್ ಬ್ಯಾಂಕಿಂಗ್ ನ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಫೋನ್ ನಿಂದ *99# ಈ ನಂಬರನ್ನು ಡಾಯಲ್ ಮಾಡಿದ ನಂತರ ಇಂಟರ್ನೆಟ್ ಇಲ್ಲದೇನೆ ಎರಡು ಖಾತೆಗಳಲ್ಲಿ ಕೊಡಕೊಳ್ಳುವಿಕೆಯ ವ್ಯವಹಾರ ಮಾಡಬಹುದಾಗಿದೆ. ಇದಕ್ಕಾಗಿ ಗ್ರಾಹಕರಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡುವದು ಅವಶ್ಯಕವಾಗಿದೆ.

Leave a Reply

Your email address will not be published. Required fields are marked *