ರಕ್ತದ ಒಂದೇ ಸ್ಯಾಂಪಲ್ ನಿಂದ 200 ಪ್ರಕಾರಗಳ ಪರೀಕ್ಷೆ ಸಾಧ್ಯ! ಹಣ ಸಮಯ ಎರಡು ಉಳಿತಾಯ. ಹೇಗೆ ತಿಳಿದುಕೊಳ್ಳಿ.

ರಕ್ತದ ಒಂದೇ ಸ್ಯಾಂಪಲ್ ನಿಂದ 200 ಪ್ರಕಾರಗಳ ಪರೀಕ್ಷೆ ಸಾಧ್ಯ! ಹಣ ಸಮಯ ಎರಡು ಉಳಿತಾಯ. ಹೇಗೆ ತಿಳಿದುಕೊಳ್ಳಿ.

 

 

ಅನೇಕ ಪ್ರಕಾರದ ರೋಗಗಳಿಗೆ ಕಾರಣೀಭೂತವಾಗಿರುವ ಬೇರೆ ಬೇರೆ ವ್ಹಾಯರಸ್ ಮತ್ತು ಬ್ಯಾಕ್ಟೀರಿಯಾಗಳ ಸಂಬಂಧಿತವಾದ ಪರೀಕ್ಷೆಯ ಸಲುವಾಗಿ ಇನ್ನು ಮುಂದೆ ರಕ್ತದ ಒಂದೇ ಪರೀಕ್ಷೆ ಸಾಕಾಗುವದು.

 

ಹೊಸ ಬಗೆಯ ರಕ್ತ ಪರೀಕ್ಷೆಯಿಂದ ವೇಳೆ ಮತ್ತು ಹಣದ ಉಳಿತಾಯ ಎರಡೂ ಸಾಧ್ಯವಾಗಲಿವೆ. ಈ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಸದ್ಯಕ್ಕೆ ಅಮೇರಿಕೆಯಲ್ಲಿ ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಇದೆ ತಂತ್ರಜ್ಞಾನವನ್ನು ಎಮ್ಸಗಳಲ್ಲಿ ಉಪಯೋಗಿಸುವ ವಿಚಾರ ಪ್ರಗತಿ ಪಥದಲ್ಲಿದೆ.

ಕೊಲಂಬಿಯಾ ಯುನಿವರ್ಸಿಟಿಯಲ್ಲಿಯ ‘ಸೆಂಟರ್ ಫಾರ್ ಇನ್ಫೆಕ್ಷನ್ ಆಂಡ್ ಇಮ್ಯುನಿಟಿ’ ಯ ಅಸೋಸಿಯೇಷನ್ ಡೈರೆಕ್ಟರ್ ಡಾ ಥಾಮಸ್ ಬ್ರಿಜ್ ಇವರು ಮಧ್ಯಪ್ರದೇಶದ ಭೋಪಾಲದ ಎಮ್ಸ್ ನಲ್ಲಿ ರಕ್ತ ಪರೀಕ್ಷೆಯ ಸಂಬಂಧವಾಗಿ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.

ಈ ವರ್ಕಶಾಪ್ ನಲ್ಲಿ ಮಾತನಾಡುವಾಗ ಕೆಲವು ಮಹತ್ವದ ವಿಷಯಗಳ ಬಗ್ಗೆ ಪರಾಮರ್ಶಿಸಿದರು. ರಕ್ತದ ಒಂದು ಸ್ಯಾಂಪಲ್ ನಿಂದ ಬೇರೆ ಬೇರೆ ಪ್ರಕಾರದ ವ್ಹಾಯರಸ್ ಗಳನ್ನು ಪರೀಕ್ಷಿಸುವ ‘ ವೀರ್ ಕ್ಯಾಪ್ ಸಿಕವರ್ಟ್’ ಮತ್ತು ಬ್ಯಾಕ್ಟೀರಿಯಾಗಳನ್ನು ಪರೀಕ್ಷಿಸಲು ‘ ಬ್ಯಾಕ್ ಕ್ಯಾಪ್ ಸಿಕವರ್ಟ್’ ಹೆಸರಿನ ರಕ್ತ ಪರೀಕ್ಷೆಯ ಸಂಬಂಧವಾಗಿ ಎರಡು ಅತ್ಯಾಧುನಿಕ ಪದ್ಧತಿಗಳನ್ನು ವಿಕಸಿತ ಮಾಡಿದ ಬಗ್ಗೆ ಮಾಹಿತಿ ನೀಡಿದರು. ಈ ಹೊಸದಾದ ಪ್ರಕ್ರೀಯೆಯಿಂದ ಜಗತ್ತಿನಲ್ಲಿಯ ಅನೇಕ ದೇಶಗಳಲ್ಲಿ ಸುಮಾರು 200 ಕ್ಕಿಂತ ಹೆಚ್ಚು ವಾಯರಸ್ ಗಳನ್ನು ಶೋಧಿಸಲಾಗಿದೆ. ಈ ವಾಯರಸ್ ಗಳು ಅನೇಕ ಪ್ರಕಾರದ ರೋಗಗಳಿಗೆ ಕಾರಣೀಭೂತವಾಗಿರುತ್ತವೆ. ಈ ತಂತ್ರಜ್ಞಾನದಿಂದ ಇನ್ನು ಮುಂದೆ ಬೇರೆ ಬೇರೆ ರೋಗಗಳಿಗೆ ಪ್ರತಿಸಲ ಬೇರೆ ರಕ್ತದ ಸ್ಯಾಂಪಲ್ ತೆಗೆದುಕೊಳ್ಳುವ ಅವಶ್ಯಕತೆ ಬೀಳುವದಿಲ್ಲ.

ಒಮ್ಮೆ ಒಂದು ಸಲ ಸ್ಯಾಂಪಲ್ ತೆಗೆದುಕೊಂಡರೆ ಸಾಕು, ಅದರ ಸಹಾಯದಿಂದ ಬೇರೆ ಬೇರೆ ಪ್ರಕಾರದ ವಾಯರಸ್ ಗಳ ಪರೀಕ್ಷೆ ಮಾಡಲು ಸಾಧ್ಯವಾಗುವದು. ಇದರ ಉಪಯೋಗ ಇನ್ನು ಮುಂದೆ ಶೀಘ್ರದಲ್ಲಿಯೇ ಜಗತ್ತಿನಾದ್ಯಂತ ವಿಸ್ತರಿಸಲಾಗುವದು ಎಂದು ಅವರು ಪ್ರತಿಪಾದಿಸಿದರು.

Leave a Reply

Your email address will not be published. Required fields are marked *