ಬಾತರೂಮಿನಲ್ಲಿ ಯಾವ ದಿಕ್ಕಿಗೆ ಕನ್ನಡಿ ಇರಬೇಕು?

ಬಾತರೂಮಿನಲ್ಲಿ ಯಾವ ದಿಕ್ಕಿಗೆ ಕನ್ನಡಿ ಇರಬೇಕು?

 

 

ವಾಸ್ತುಶಾಸ್ತ್ರದಲ್ಲಿ ಮನೆಯ ಯಾವ ಯಾವ ಭಾಗದಲ್ಲಿ ಕನ್ನಡಿಗಳಿರಬೇಕು ಎಂಬುದರ ಬಗೆಗಿನ ಮಾಹಿತಿ ವಿವರವಾಗಿ ಕೊಟ್ಟಿದ್ದಾರೆ. ಮನೆಯಲ್ಲಿ ಬಾತರೂಮ್ ಇದೊಂದು ಮಹತ್ವದ ಘಟಕವಾಗಿದೆ ಕಾರಣ ದಿನದ ಪ್ರಾರಂಭ ಇಲ್ಲಿಂದಲೇ ಶುರುವಾಗುವದು. ಬಾತರೂಮ್ ಸುಂದರವಾಗಿ ಕಾಣಿಸುವದರ ಜೊತೆಗೆ ಅದು ಧನಾತ್ಮಕ ಶಕ್ತಿಯೂ ದೊರೆಯುವಂತಹದು ಇರಬೇಕು. ಯಾಕೆಂದರೆ ಇಡೀ ದಿನ ಚೆನ್ನಾಗಿ ಸಾಗಬೇಕು. ವಾಸ್ತುಶಾಸ್ತ್ರದಲ್ಲಿ ಬಾತರೂಮಿನ ಒಳಗಡೆ ಕನ್ನಡಿ ಹೇಗೆ ಅಳವಡಿಸಬೇಕು ಎಂಬುದನ್ನೂ ಉಲ್ಲೇಖಿಸಲಾಗಿದೆ.

ವಾಸ್ತುವಿಜ್ಞಾನದ ಅನುಗುಣ ಕನ್ನಡಿಯು ಅಳವಡಿಸುವಾಗ ಬಾಗಿಲಿನ ಎದುರು ನೇರ ಬರದಂತೆ ಗಮನವಹಿಸಬೇಕು.

ಯಾವಾಗ ಮುಂಜಾನೆ ಬೆಡ್ ನಿಂದ ಎದ್ದು ಬಾತರೂಮನ್ನು ಪ್ರವೇಶ ಮಾಡುತ್ತೇವೆಯೋ ನಮ್ಮ ಜೊತೆ ಧನಾತ್ಮಕ ಹಾಗೂ ಋಣಾತ್ಮಕ ಈ ಎರಡು ಶಕ್ತಿಗಳು ಪ್ರವೇಶ ಮಾಡುತ್ತವೆ.

ನಿದ್ರೆಯಿಂದ ಎದ್ದಾಗ ನಮ್ಮಲ್ಲಿ ಋಣಾತ್ಮಕ ಶಕ್ತಿಯ ಪ್ರಭಾವ ಹೆಚ್ಚು ನಿರ್ಮಾಣವಾಗಿರುತ್ತದೆ. ಬಾಗಿಲಿನ ಎದುರುಗಡೆ ಕನ್ನಡಿ ಇರುವದರಿಂದ ನಮ್ಮ ಜೊತೆಗೆ ಪ್ರವೇಶಿಸಿದ ಋಣಾತ್ಮಕ ಶಕ್ತಿ ಮತ್ತೆ ನಮ್ಮೊಂದಿಗೆ ಮನೆಯಲ್ಲಿ ಪ್ರವೇಶ ಪಡೆಯುತ್ತದೆ. ಆದ್ದರಿಂದ ದರ್ಪಣದ ಋಣಾತ್ಮಕ ಪ್ರಭಾವವನ್ನು ದೂರ ಮಾಡುವದಕ್ಕಾಗಿ ಹಾಗೂ ಕನ್ನಡಿಯ ರಿಫ್ಲೆಕ್ಷನ್ ಬಾಗಿಲಿನ ಮುಖಾಂತರ ಮನೆಯ ಒಳಗಡೆ ಬೀಳದಂತೆ ಕನ್ನಡಿಯನ್ನು ತಾಗಿಸಬೇಕು.

ಇದರ ಜೊತೆಗೆ ಮನೆಯ ಕೆಲವು ಮಹತ್ವದ ಭಾಗಗಳಲ್ಲಿಯೂ ಕನ್ನಡಿ ಎಲ್ಲಿ ಇರಬಾರದು ಅದರ ಬಗ್ಗೆಯೂ ವಾಸ್ತುಶಾಸ್ತ್ರ ಸೂಚಿಸುತ್ತದೆ. ಬೆಡ್ ರೂಮಿನಲ್ಲಿ ಕನ್ನಡಿ ಇರುವದು ಸಹ ಒಳ್ಳೆಯದಲ್ಲ ಯಾಕೆಂದರೆ ಅದರ ರಿಫ್ಲೆಕ್ಷನ್ ಬೆಡ್ ಮೇಲೆ ಬೀಳುವದರಿಂದ ಸ್ವಾಸ್ತ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವದು.

ಕೆಲವರು ಕನ್ನಡಿಯನ್ನು ಮನೆಯ ಮುಖ್ಯ ದ್ವಾರದ ಎದುರುಗಡೆ ತಾಗಿಸುವರು, ಇದು ಸಹ ವಾಸ್ತುಶಾಸ್ತ್ರದ ಪ್ರಕಾರ ಇದು ತಪ್ಪು. ಇದರಿಂದ ಮನೆಯಲ್ಲಿ ಬರುವ ಧನಾತ್ಮಕ ಶಕ್ತಿ ಕನ್ನಡಿಯ ರಿಫ್ಲೆಕ್ಷನ್ ದಿಂದ ಮರಳಿ ಹೋಗುವದು. ಈ ಕಾರಣದಿಂದ ಏಳಿಗೆಯ ವೇಗ ಮಂದ ಗತಿಯಲ್ಲಿ ಸಾಗುವದು.

Leave a Reply

Your email address will not be published. Required fields are marked *