ಬೆರಳಿನಲ್ಲಿ ತಾಮ್ರದ ಉಂಗುರವನ್ನು ಧರಿಸಿದರೆ ಏನಾಗುತ್ತದೆ ಗೊತ್ತಾ? ತಿಳಿದುಕೊಳ್ಳಿ.

ಬೆರಳಿನಲ್ಲಿ ತಾಮ್ರದ ಉಂಗುರವನ್ನು ಧರಿಸಿದರೆ ಏನಾಗುತ್ತದೆ ಗೊತ್ತಾ? ತಿಳಿದುಕೊಳ್ಳಿ.

 

ಲೋಹದ ಅಂಶವು ಕೂಡ ನಮ್ಮ ಶರೀರಕ್ಕೆ ಬೇಕಾಗುವ ಮಹತ್ವದ ಘಟಕವಾಗಿದೆ.
ಶರೀರದಲ್ಲಿಯ ವಿವಿಧ ರೀತಿಯ ದೋಷಗಳನ್ನು ದೂರಮಾಡಲು ಈ ಲೋಹವು ತುಂಬಾ ಪ್ರಯೋಜನಕಾರಿಯಾಗಿದೆ.
ಅದಕ್ಕಾಗಿಯೇ ಮಹಿಳೆಯರು ಮತ್ತು ಪುರುಷರು ಕೂಡಾ ತಮ್ಮ ಬೆರಳುಗಳಲ್ಲಿ ತಾಮ್ರದ ಉಂಗುರನ್ನು ತೊಟ್ಟುಕೊಳ್ಳುತ್ತಾರೆ.
ಮದುವೆಯ ನಂತರ ಮಹಿಳೆಯರು ಮೂಗಿನಲ್ಲಿ ನತ್ತು, ಕಾಲಿನಲ್ಲಿ ಕಾಲುಂಗರು, ಮತ್ತು ಇತರ ಆಭರಣಗಳನ್ನು ಧರಿಸುತ್ತಾರೆ.
ನಿಮ್ಮ ದೇಹವು ನಿಶ್ಚಿತ ಲೋಹವನ್ನು ಹೊಂದಿದ್ದರೆ, ಶರೀರವು ಕಾರ್ಯಶೀಲವಾಗಿರುವದು.


ತಾಮ್ರ, ಹಿತ್ತಾಳೆ, ಚಿನ್ನ, ಮತ್ತು ಬೆಳ್ಳಿ ಮುಂತಾದ ಹಲವು ಲೋಹಗಳಿವೆ. ಪ್ರತಿಯೊಂದು ಲೋಹ ಬೇರೆ ಬೇರೆಯಾದ ಮಹತ್ವವನ್ನು ಹೊಂದಿದೆ.
ತಾಮ್ರವು ಈ ಲೋಹಗಳಲ್ಲಿಯೇ ಅತ್ಯಂತ ಪ್ರಾಚೀನ ಲೋಹವಾಗಿದ್ದು, ಇದು ವಿಭಿನ್ನ ಮಹತ್ವವನ್ನು ಹೊಂದಿದೆ ಎಂದು ಹೇಳಲಾಗಿದೆ.
ತಾಮ್ರದಲ್ಲಿ ನೀರಿನಲ್ಲಿಯ ಕೀಟಾಣುಗಳನ್ನು ತೆಗೆದುಹಾಕುವಂತಹ ವಿಶೇಷ ಗುಣಧರ್ಮ ಹೊಂದಿದೆ. ಹೀಗಾಗಿ ಯಾವಾಗಲೂ ತಾಮ್ರದ ಪಾತ್ರೆಯಲ್ಲಿಯ ನೀರು ಕುಡಿಯಬೇಕು ಎಂದು ಸಲಹೆ ನೀಡಲಾಗುತ್ತದೆ.
ತಾಮ್ರದಿಂದ ತಯಾರಿಸಿದ ಎಲ್ಲ ವಸ್ತುಗಳು ಪ್ರಯೋಜನಕಾರಿ ಮತ್ತು ಮಾನವ ಜೀವನಕ್ಕೆ ಉಪಯುಕ್ತವೆಂದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ.
ಹಾಗಾಗಿ ನಾವು ಇಂದು ತಾಮ್ರದಿಂದ ತಯಾರಿಸಿದ ಉಂಗುರನ್ನು ಬೆರಳಲ್ಲಿ ತೊಟ್ಟುಕೊಳ್ಳುವದರಿಂದ ಆಗುವ 10 ಲಾಭಗಳ ಕುರಿತು ತಿಳಿಸುವವರಿದ್ದೇವೆ.
ತಾಮ್ರದ ರಿಂಗ್ ತೊಟ್ಟುಕೊಳ್ಳುವದರಿಂದ ಆಗುವ 10 ಆರೋಗ್ಯಕರ ಪ್ರಯೋಜನಗಳು: –

1. ಹೊಟ್ಟೆಯ ಸಂಬಂಧಿತ ಕಾಯಿಲೆಗಳ ಮೇಲೆ ತುಂಬಾ ಪ್ರಯೋಜನಕಾರಿ:


ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ತೊಂದರೆಗಳನ್ನು ದೂರಮಾಡಲು ತಾಮ್ರದ ರಿಂಗ್ ಬಹಳ ಪ್ರಯೋಜನಕಾರಿಯಾಗಿದೆ. ಹೊಟ್ಟೆ ನೋವು, ಅಪಚನ ಮತ್ತು ಅಸಿಡಿಟಿ ಮುಂತಾದ ಸಮಸ್ಯೆಗಳನ್ನು ತಡೆ ಹಾಕಲು ತುಂಬಾ ಲಾಭದಾಯಕವಾಗಿದೆ.

2. ಬೆರಳಿನ ಉಂಗುರು ಚರ್ಮದ ಸಮಸ್ಯೆಗೆ ಪ್ರಯೋಜನಕಾರಿ:


ತಾಮ್ರವು ಆರೋಗ್ಯಕ್ಕೆ ಮಾತ್ರವಲ್ಲದೇ ಚರ್ಮ-ಸಂಬಂಧಿತ ಸಮಸ್ಯೆಗಳ ಚಿಕಿತ್ಸೆಯಲ್ಲಿಯೂ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ.

3. ರಕ್ತ ಪರಿಚಲನೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ:


ಬೆರಳುಗಳಲ್ಲಿ ತಾಮ್ರದ ಉಂಗುರವನ್ನು ಧರಿಸುವದರಿಂದ ದೇಹದ ರಕ್ತದ ಪೂರೈಕೆಯಲ್ಲಿ ಸುಧಾರಣೆಯಾಗುತ್ತದೆ. ಇದಲ್ಲದೆ, ಕಡಿಮೆ ಪ್ರಮಾಣದ ರಕ್ತಪ್ರವಾಹದಿಂದ ಉಂಟಾಗುವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಮುಕ್ತತೆ ಸಿಗುವದು.

4. ರೋಗ ಪ್ರತೀಕಾರಕ ಶಕ್ತಿ ವೃದ್ಧಿಸುತ್ತದೆ:-


ವಿವಿಧ ಲೋಹಗಳಲ್ಲಿ ಒಂದಾದ ತಾಮ್ರವನ್ನು ಎಲ್ಲಕ್ಕಿಂತ ಪುರಾತನ ಧಾತು ಎಂದು ಪರಿಗಣಿಸಲಾಗಿದೆ. ಒಂದು ತಾಮ್ರದ ಉಂಗುರವನ್ನು ಧರಿಸುವದರಿಂದ ಅದು ದೇಹದಲ್ಲಿಯ ಅಸ್ವಸ್ಥತೆ ಕಡಿಮೆ ಮಾಡುತ್ತದೆ, ಮತ್ತು ದೇಹದ ರೋಗಪ್ರತಿಕಾರಕ ಶಕ್ತಿಯಲ್ಲಿ ಸುಧಾರಣೆ ಕಂಡು ಬರುತ್ತದೆ.

5. ದೇಹದ ಜೊತೆಗೆ ಮನಸ್ಸಿಗೂ ಶಾಂತವಾಗಿ ಇಡುತ್ತದೆ:


ತಾಮ್ರದ ರಿಂಗ್ ದೇಹದಲ್ಲಿಯ ಉಷ್ಣತೆಯ ಶಾಖವನ್ನು ಕಡಿಮೆ ಮಾಡುತ್ತದೆ. ಇದು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಕೋಪವು ನಿಯಂತ್ರಣದಲ್ಲಿಡುತ್ತದೆ. ಈ ರಿಂಗ್ ದೇಹ ಮತ್ತು ಮನಸ್ಸನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ.

6. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ:


ತಾಮ್ರದ ರಿಂಗ್ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಅಧಿಕ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವ ಜನರಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ. ಈ ರಿಂಗ್ ತೊಟ್ಟುಕೊಳ್ಳುವ ಮೂಲಕ ನಿಮ್ಮ ದೇಹದ ಊತವನ್ನು ಸಹ ಕಡಿಮೆ ಮಾಡಬಹುದು.

7. ಸೂರ್ಯನ-ಸಂಬಂಧಿತ ರೋಗಗಳಿಗೆ ಪ್ರಯೋಜನಕಾರಿ:


ತಾಮ್ರವನ್ನು ಸೂರ್ಯನ-ಸಂಬಂಧಿತ ತೊಂದರೆಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ತಾಮ್ರದ ಉಂಗುರವನ್ನು ಸೇರಿಸುವ ಮೂಲಕ ನೀವು ಸೂರ್ಯನಿಗೆ ಸಂಬಂಧಿಸಿದ ಎಲ್ಲಾ ರೋಗಗಳನ್ನು ತೊಡೆದುಹಾಕಬಹುದು.

8. ಆಧ್ಯಾತ್ಮಿಕ ಸಾಧನ:


ತಾಮ್ರದ ಉಂಗುರವು ಸಾಧನೆಯ ದಿಕ್ಕಿನಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ.
ಜನರು ಆಳವಾದ ಧ್ಯಾನದ ಮಾರ್ಗವನ್ನು ತೊರೆದಾಗ, ಅವರಿಗೆ ತಾಮ್ರದ ಉಂಗುರವನ್ನು ನೀಡಲಾಗುತ್ತದೆ.
ಮುಖ್ಯವಾಗಿ, ಆಧ್ಯಾತ್ಮಿಕ ಅಭ್ಯಾಸದ ಗುರಿಯು ಜೀವನದಲ್ಲಿ ಆತ್ಮವನ್ನು ಅತ್ಯುನ್ನತ ಹಂತಕ್ಕೆ ತಲುಪಿಸುವದು.

9. ಸಿದ್ಧಿ ಸಾಧನೆ:


ಸಾಧಕರು ಪರಿಶ್ರಮದಿಂದ ಮಾಡಿದ ಸಿದ್ಧ ಸಾಧನೆಗಳನ್ನು ಕೆಲವೊಂದು ಸಲ ಮರೆತು ಬಿಡುವ ಸಾಧ್ಯತೆಗಳು ಇರುತ್ತವೆ.ಆದರೆ ದೇಹದಲ್ಲಿ ಈ ಲೋಹವಿರುವದರಿಂದ ಮಾಡಿದ ಸಿದ್ಧಿ ಯೋಗವು ಸುರಕ್ಷಿತವಾಗಿರುವದು.
ತಾಮ್ರದ ಲೋಹವು ಯಾವಾಗಲೂ ಈ ಪ್ರಕ್ರಿಯೆಯನ್ನು ತಡೆದು ನಿಲ್ಲಿಸುತ್ತದೆ. ಏಕೆಂದರೆ ಅದು ನಿಮ್ಮ ಸಂಪರ್ಕವನ್ನು ದೇಹದೊಂದಿಗೆ ಬಲಪಡಿಸುತ್ತದೆ.
ಚಿನ್ನವೂ ಸಹಿತ ಸ್ವಲ್ಪ ಮಟ್ಟಿಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ. ಅದಕ್ಕಾಗಿ ಬಂಗಾರದ ಉಂಗುರನ್ನು ಬೆರಳಲ್ಲಿ ತೊಡುವದು ಉತ್ತಮವೆಂದು ಪರಿಗಣಿಸಲಾಗಿದೆ.

 

10. ದೇಹವನ್ನು ಆರೋಗ್ಯಕರವಾಗಿ ಇಡುತ್ತದೆ:


ತಾಮ್ರದ ಉಂಗುರನ್ನು ತೊಡುವದರಿಂದ ಅದು ನಮ್ಮ ಶರೀರ, ಮನಸ್ಸು , ಬುದ್ದಿ ಇವೆಲ್ಲವುಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಮೇಲಿನ ಎಲ್ಲಾ ಪ್ರಯೋಜನಗಳನ್ನು ನೀವು ಪಡೆಯಬೇಕಾದರೆ, ಮೊದಲು ನೀವು ಶುದ್ಧ ತಾಮ್ರದಿಂದ ರಿಂಗ್ ಮಾಡಲ್ಪಟ್ಟಾಗ ಮಾತ್ರ ಲಭ್ಯವಾಗುತ್ತದೆ ಎಂದು ನಂಬಲಾಗಿದೆ. ಒಂದು ಸಣ್ಣ ಉಂಗುರವು ನಿಮಗೆ ಇಂತಹ ಪ್ರಯೋಜನಗಳನ್ನು ನೀಡುವಾದಾದರೆ ನೀವು ಯಾಕೆ ತಾಮ್ರದ ರಿಂಗನ್ನು ಧರಿಸಬಾರದು?

Leave a Reply

Your email address will not be published. Required fields are marked *