ಭಾರತೀಯ ಸೈನ್ಯ ಪಡೆಯಲ್ಲಿ ಸೇವಾನಿವೃತ್ತ ಹೊಂದಿದ ಶ್ವಾನಗಳನ್ನು ಏಕೆ ಕೊಲ್ಲುತ್ತಾರೆ ಗೊತ್ತಾ? ಇದರ ಹಿಂದಿನ ಕಾರಣ ತಿಳಿದುಕೊಳ್ಳಿ!

ಭಾರತೀಯ ಸೈನ್ಯ ಪಡೆಯಲ್ಲಿ ಸೇವಾನಿವೃತ್ತ ಹೊಂದಿದ ಶ್ವಾನಗಳನ್ನು ಏಕೆ ಕೊಲ್ಲುತ್ತಾರೆ ಗೊತ್ತಾ? ಇದರ ಹಿಂದಿನ ಕಾರಣ ತಿಳಿದುಕೊಳ್ಳಿ!

 

 

 

ಭಾರತದ ಸೈನ್ಯಪಡೆಯಲ್ಲಿ ದೇಶದ ಸುರಕ್ಷತೆಯ ದೃಷ್ಟಿಯಿಂದ ನಾಯಿಗಳಿಗೆ ತುಂಬಾ ಮಹತ್ವದ ಸ್ಥಾನವಿದೆ. ನಾಯಿಗಳಲ್ಲಿರುವ ವಿಶೇಷ ಗುಣದಿಂದ ದೇಶಕ್ಕಾಗಿ ಉತ್ತಮ ಸೇವೆಯನ್ನು ಪಡೆಯುವ ಕಾರ್ಯಕ್ಕೆ ಸೈನ್ಯಪಡೆ ಪ್ರಯತ್ನಿಸುತ್ತಿರುತ್ತವೆ. ಈ ಶ್ವಾನಗಳು ಒಬ್ಬ ಯೋಧನ ಹಾಗೆ ದೇಶದ ಸಲುವಾಗಿ ಕಾರ್ಯ ಮಾಡುತ್ತವೆ.

ಆದರೆ ಈ ನಾಯಿಗಳ ಕುರಿತು ಬಹಳಷ್ಟು ಜನರಿಗೆ ಮಾಹಿತಿ ಇರಲಿಕ್ಕಿಲ್ಲ, ಏನೆಂದರೆ ಎಲ್ಲಿಯವರೆಗೆ ನಾಯಿಗಳು ಸೈನ್ಯದಲ್ಲಿ ಕಾರ್ಯ ನಿರ್ವಹಿಸಲು ಸಕ್ಷಮವಾಗಿರುತ್ತವೆಯೋ ಅಲ್ಲಿಯವರೆಗೆ ಮಾತ್ರ ಶ್ವಾನಗಳು ಜೀವಂತವಾಗಿರುತ್ತವೆ, ಅಂದರೆ ಸೈನ್ಯಕ್ಕೆ ಉಪಯೋಗವಾಗುವವರೆಗೆ ಮಾತ್ರ. ಒಂದು ವೇಳೆ ಶ್ವಾನ ಸೈನ್ಯದಲ್ಲಿ ಸರಿಯಾಗಿ ಕಾರ್ಯ ಮಾಡದಿದ್ದರೆ ಅಥವಾ ತನ್ನ ವಿಶೇಷತೆಯನ್ನು ಕಳೆದುಕೊಂಡರೆ ಅದು ಸೇವಾನಿವೃತ್ತ ಹೊಂದುತ್ತದೆ. ಮತ್ತು ಅದಕ್ಕೆ ಬರ್ಬರವಾಗಿ ಹತ್ಯೆ ಮಾಡಲಾಗುತ್ತದೆ.

ಈ ಪದ್ಧತಿ ಬ್ರಿಟಿಷ್ ರ ಆಡಳಿತದ ಕಾಲಾವಧಿ ಮುಕ್ತಾಯಗೊಂಡಾಗಿನಿಂದ ಸೇವಾನಿವೃತ್ತ ಹೊಂದಿದ ಶ್ವಾನಗಳ ಹತ್ಯೆ ಮಾಡುವ ರೂಢಿ ನಡೆದುಕೊಂಡು ಬಂದಿದೆ, ಅದು ಇಂದಿಗೂ ಚಾಲ್ತಿಯಲ್ಲಿದೆ. ಶ್ವಾನವು ಒಂದು ತಿಂಗಳಿಗಿಂತ ಹೆಚ್ಚು ಕಾಲಾವಧಿಯವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ತನ್ನ ಸೇವೆ ಸಲ್ಲಿಸಲು ಅಸಮರ್ಥವಾದರೆ ಆಗ ಆ ಶ್ವಾನಕ್ಕೆ ಸನ್ಮಾನ ಮತ್ತು ಸತ್ಕಾರ ಮಾಡಿ ಅದಕ್ಕೆ ಸೇವಾನಿವೃತ್ತ ವಾಗಿದೆ ಎಂದು ಘೋಷಣೆ ಮಾಡುತ್ತಾರೆ.

ಸೇವಾನಿವೃತ್ತ ಹೊಂದಿದ ಶ್ವಾನಗಳನ್ನು ಹತ್ಯೆ ಮಾಡುವ ಹಿಂದಿನ ಎರಡು ಕಾರಣಗಳು:

1) ಸೈನ್ಯದ ಸುರಕ್ಷತೆಗಾಗಿ:-


ಪ್ರತಿಯೊಂದು ಸೇವಾನಿವೃತ್ತ ಹೊಂದಿದ ಶ್ವಾನಗಳಿಗೆ ಸೈನ್ಯದಲ್ಲಿಯ ಪರಿಸರ ಮತ್ತು ಮುಖ್ಯಾಲಯ ಇವುಗಳ ಮಾಹಿತಿ ಸಹಜವಾಗಿ ಇದ್ದಿರುತ್ತದೆ, ಅದಲ್ಲದೆ ಅನೇಕ ಪ್ರಕಾರದ ಗುಪ್ತ ಸ್ಥಾನಗಳ, ವಿಷಯಗಳ ಮಾಹಿತಿ ಸಹ ಗೊತ್ತಿರುತ್ತದೆ ಇದರಿಂದ ಒಂದು ವೇಳೆ ಈ ನಾಯಿಗಳನ್ನು ಸಾಮಾನ್ಯ ಜನರಿಗೆ ಒಪ್ಪಿಸಿದರೆ ಸೈನ್ಯದ ಸುರಕ್ಷಿತತೆಯ ದೃಷ್ಟಿಯಿಂದ ತುಂಬಾ ಅಪಾಯಕಾರಿಯಾಗಿತ್ತದೆ. ಅದಕ್ಕಾಗಿ ಸೇವೆಯಿಂದ ನಿವೃತ್ತ ಹೊಂದಿದ ನಾಯಿಗಳನ್ನು ಸನ್ಮಾನ ದಿಂದ ಹತ್ಯೆ ಮಾಡಲಾಗುತ್ತದೆ.

2) ವಿಶೇಷ ಸೌಲಭ್ಯಗಳ ಕೊರತೆ:-


ಸೇವೆಯಲ್ಲಿ ನಿವೃತ್ತ ಹೊಂದಿದ ಶ್ವಾನಗಳನ್ನು ಯಾವುದೇ ಒಂದು ಪಶು ವಿದ್ಯಾಲಯ ಅಥವಾ ಸಮಾಜಕಲ್ಯಾಣಕಾರಿ ಸಂಸ್ಥೆ ಯವರಿಗೆ ಒಂದು ವೇಳೆ ಒಪ್ಪಿಸಿದರೆ ಅದಕ್ಕೆ ಸೈನ್ಯದಲ್ಲಿ ದೊರೆಯುತ್ತಿದ್ದ ಸೌಲಭ್ಯ ಸೌಕರ್ಯಗಳು ಅಲ್ಲಿ ನಾಯಿಗೆ ಸಿಗುವದಿಲ್ಲ. ಏಕೆಂದರೆ ಈ ಸೌಲಭ್ಯ ಕೇವಲ ಸೈನ್ಯದಲ್ಲಿ ಮಾತ್ರ ಕೊಡಲಾಗುತ್ತದೆ. ಶ್ವಾನಗಳಿಗೆ ಸೈನ್ಯದಲ್ಲಿ ವಿಶೇಷವಾದ ಸೇವೆಗಳನ್ನು ಪೂರೈಕೆ ಮಾಡಲಾಗುತ್ತದೆ. ಈ ಎರಡು ಕಾರಣಗಳಿಂದ ಸೇವೆಯಲ್ಲಿ ನಿವೃತ್ತ ಹೊಂದಿದ ಶ್ವಾನಗಳನ್ನು ಹತ್ಯೆ ಮಾಡಲಾಗುತ್ತದೆ.

ಆದರೆ ಕೇಂದ್ರದ ಸಮಿತಿ ಈ ಒಂದು ಪದ್ಧತಿಯ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಸೇವಾನಿವೃತ್ತ ಹೊಂದಿದ ಶ್ವಾನಗಳನ್ನು ಹತ್ಯೆ ಮಾಡಬಾರದು ಎಂಬುದರ ಕುರಿತು ಹೊಸ ಕ್ರಮ ಗಳನ್ನೇನಾದರೂ ತೆಗೆದುಕೊಳ್ಳಲು ಬರುತ್ತದೆಯೇ ಎಂದು ವಿಚಾರ ಮಾಡುತ್ತಿದೆ.

Leave a Reply

Your email address will not be published. Required fields are marked *