ಆಟದ ಮೈದಾನದಲ್ಲಿಯೇ ಕೋನೆಯುಸಿರೆಳೆದ ಈ ಮಹಾನ್ ಆಟಗಾರ.

ಆಟದ ಮೈದಾನದಲ್ಲಿಯೇ ಕೋನೆಯುಸಿರೆಳೆದ ಈ ಮಹಾನ್ ಆಟಗಾರ.

 

ಆಸ್ಟ್ರೇಲಿಯಾದ ಈ ಯುವ ಮತ್ತು ಬಿರುಸಿನ ಆಟಗಾರ ಫಿಲಿಪ್ ಹ್ಯುಜ್ ಆಟದ ಸಂದರ್ಭದಲ್ಲಿಯೇ ಬ್ಯಾಟಿಂಗ್ ಮಾಡುವಾಗ ಸೀನ್ ಎಬಾಟ್ ಅವರು ಎಸೆದ ಬಾಲ್ ನಿಂದ ತಲೆಗೆ ಪೆಟ್ಟು ಬಿದ್ದು ದಾರುಣ ಸಾವು ಕಂಡು ನಿನ್ನೆಗೆ 27 ನವೆಂಬರಕ್ಕೆ ಮೂರು ವರ್ಷಗಳು ಕಳೆದವು. ಆಟದ ಸಂದರ್ಭದಲ್ಲಿ ಎಸೆದ ಬಾಲ್ ಫಿಲಿಪ್ ಅವರ ತಲೆಗೆ ತಾಗಿ ಆತ ಮೈದಾನದಲ್ಲಿಯೇ ಕುಸಿದು ಬಿದ್ದನು.

ನಂತರ ತ್ವರಿತ ಉಪಚಾರಕ್ಕಾಗಿ ಅವರಿಗೆ ಎಅರ್ ಆಂಬ್ಯುಲೆನ್ಸ್ ನಿಂದ ಹಾಸ್ಪಿಟಲ್ ಗೆ ತೆಗೆದುಕೊಂಡು ಹೋದರೂ ಜೀವಸಹಿತ ರಕ್ಷಿಸುವ ಪ್ರಯತ್ನ ಫಲಿಸಲಿಲ್ಲ. ಕೊನೆಗೆ ಸೇಂಟ್ ವಿನ್ಸೆಂಟ್ ಹಾಸ್ಪಿಟಲ್ ನಲ್ಲಿ ಕೋಣೆಯುಸಿರೆಳೆದನು. ಹೀಗೆ ಆಟ ಆಡುವಾಗಲೇ ಮೈದಾನದಿಂದ ಜಗತ್ತನ್ನೇ ಬಿಟ್ಟು ಹೋದ ಆಟಗಾರ ಸದಾ ಕ್ರೀಡಾ ರಸಿಕರ ಮನದಲ್ಲಿ ಹಸಿರಾಗಿದ್ದಾರೆ.

Leave a Reply

Your email address will not be published. Required fields are marked *