ಈ ಆಂಡ್ರಾಯಿಡ್ ಮ್ಯಾಜಿಕ್ ಕೋಡ್ ಬಿಚ್ಚುವುದು ಎಲ್ಲರ ಗುಟ್ಟು..!

ಈ ಆಂಡ್ರಾಯಿಡ್ ಮ್ಯಾಜಿಕ್ ಕೋಡ್ ಬಿಚ್ಚುವುದು ಎಲ್ಲರ ಗುಟ್ಟು..!

 

ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರ ಹತ್ತಿರ ಮೊಬೈಲ್ ಇರುವದು ಸಾಮಾನ್ಯವಾಗಿದೆ. ಮೊಬೈಲ್ ಮೂಲಕ ಅತೀ ವೇಗವಾಗಿ ನಾವು ದೇಶ ವಿದೇಶಗಳಲ್ಲಿ ಇದ್ದ ವ್ಯಕ್ತಿಯ ಜೊತೆಗೆ ಸಂಪರ್ಕ ಮಾಡಲು ಸಾಧ್ಯವಾಗಿದೆ. ಈ ಆಧುನಿಕ ಯುಗದಲ್ಲಿ ಪ್ರತಿಯೊಂದು ಕೆಲಸ ಡಿಜಿಟಲ್ ಪದ್ಧತಿಯಿಂದ ನಡೆಯುತ್ತಿದೆ. ಇದರಿಂದ ನಮ್ಮ ಸಮಯ ಮತ್ತು ಖರ್ಚು ಉಳಿತಾಯವಾಗಲು ಸಹಾಯವಾಗಿದೆ. ವಿಚಿತ್ರ ಸಂಗತಿಯೇನೆಂದರೆ ಇಂದು ಒಂದು ವೇಳೆ ನೀರು ಮತ್ತು ಆಹಾರ ಇಲ್ಲದೆ ಬದಕಬಹುದು, ಆದರೆ ಮೊಬೈಲ್ ಇಲ್ಲದೆ ಒಂದು ದಿವಸವು ಸಹ ಕಳೆಯಲು ಸಾಧ್ಯವಿಲ್ಲ ಏಕೆಂದರೆ ನಾವು ಮೊಬೈಲ್ ಗೆ ಅಷ್ಟೊಂದು ಅಡಿಕ್ಟ್ ಆಗಿದ್ದೇವೆ ನಿಜ ಅಲ್ವಾ?

ನಾವು ಮೊಬೈಲ್ ನಲ್ಲಿ ಹಲವಾರು ಪ್ರಕಾರದ ಮಾಹಿತಿ ಅಥವಾ ಡೇಟಾ ಸೆವ್ ಮಾಡಿರುತ್ತೇವೆ. ಅದರಲ್ಲಿ ಕೆಲವೊಂದು ವೈಯಕ್ತಿಕ ವಾದ ಮಾಹಿತಿ ಸಹ ಇರುತ್ತದೆ. ಆದ್ದರಿಂದ ನಾವು ಅವುಗಳನ್ನು ಬೇರೆಯವರ ಕಣ್ಣಿಗೆ ಕಾಣಬಾರದೆಂಬ ಎಚ್ಚರಿಕೆ ವಹಿಸುತ್ತೇವೆ. ಕೆಲವೊಮ್ಮೆ ಆ ಡಾಟಾ ನಮ್ಮ ಮನೆಯ ಸದಸ್ಯರು ಅಥವಾ ಗೆಳೆಯ/ಗೆಳತಿಯರಿಗೆ ಗೊತ್ತಾಗಿ ಬಿಡುತ್ತದೆ. ಅದು ಹೇಗೆಂದರೆ ನಮ್ಮ ಮೊಬೈಲ್ ತೆಗೆದುಕೊಂಡು ಅದರಲ್ಲಿಯ ಕೆಲವೊಂದು ವೈಯಕ್ತಿಕ ಮಾಹಿತಿ ವೀಕ್ಷಣೆ ಮಾಡುತ್ತಾರೆ ಅದು ನಮಗೆ ಗೊತ್ತಾಗುವದಿಲ್ಲ. ಏಕೆಂದರೆ ಮೋಬೈಲ್ ನಲ್ಲಿ ರಿಸೆಂಟ್ ಆಪ್ ಕ್ಲೋಸ್ ಮಾಡಿ ಬಿಟ್ಟಿರುತ್ತಾರೆ. ಈ ಕಾರಣಕ್ಕಾಗಿ ಅವರು ಏನನ್ನು ನೋಡಿದ್ದಾರೆ ಅಥವಾ ಯಾವ ಆಪ್ ಓಪನ್ ಮಾಡಿದ್ದಾರೆ ಎಂಬುದರ ಬಗ್ಗೆ ನಮಗೆ ಅರಿವಾಗುವದಿಲ್ಲ.

ಈ ಮೇಲಿನ ಸಮಸ್ಯೆ ಬಗೆ ಹರಿಸುವ ಸಲುವಾಗಿ ಅಂದರೆ ನಿಮ್ಮ ಮೊಬೈಲ್ ನಲ್ಲಿ ಯಾವ ಆಪ್ ಓಪನ್ ಮಾಡಿದ್ದಾರೆ ಮತ್ತು ಉಪಯೋಗಿಸಿದ ಸಮಯ ಇವೆಲ್ಲವುಗಳ ಡಿಟೇಲ್ ತಿಳಿದುಕೊಳ್ಳುವ ಸಲುವಾಗಿ ನಿಮಗೆ ಒಂದು ಟ್ರಿಕ್ ತಿಳಿಸುವವರಿದ್ದೇವೆ ಅದು ಹೇಗೆಂದರೆ ಒಂದು ಕೋಡ್ ಮೂಲಕ ಎಲ್ಲ ಮಾಹಿತಿ ತಿಳಿದುಕೊಳ್ಳಬಹುದು.

ಇದನ್ನು ಹೇಗೆ ತಿಳಿದುಕೊಳ್ಳುವದು ನೋಡಿ.

● ಮೊದಲು ನಿಮ್ಮ ಮೋಬೈಲ್ ನ ಡೈಲಿಂಗ್ ಪ್ಯಾಡ್ ಅಂದರೆ ಫೋನ್ ನಂಬರ್ ಎಂಟರ್ ಮಾಡುವ ಅಪ್ ತೆಗೆಯಿರಿ.

● ತದನಂತರ ಡೈಲ್ ಪ್ಯಾಡ್ ನಲ್ಲಿ *#*#4636*#*# ಈ ಕೋಡ್ ಡೈಲ್ ಮಾಡಿ.

● ಡೈಲ್ ಮಾಡಿದ ನಂತರ ಮೊಬೈಲ್ ಸ್ಕ್ರೀನ್ ಮೇಲೆ ಮೂರು ಆಪ್ಶನ್ ಕಾಣುವವು Phone information, Usage Statistics ಮತ್ತು WLAN Information or Wi-Fi information ಇದರಲ್ಲಿ ಎರಡನೆಯ ಆಯ್ಕೆಯನ್ನು ಅಂದರೆ Usage Statistics ಮೇಲೆ ಕ್ಲಿಕ್ ಮಾಡಿ.

● ನಂತರ ನಿಮ್ಮ ಮೊಬೈಲ್ ನಲ್ಲಿ ಕೆಳಗೆ ಕಾಣುವ ಚಿತ್ರದ ಪ್ರಕಾರ ಸ್ಕ್ರೀನ್ ಓಪನ್ ಆಗುವದು.

● ಓಪನ್ ಮಾಡಿದ ಸ್ಕ್ರೀನ್ ಮೇಲಿನ ಪ್ರತಿಯೊಂದು ಕೋಡ್ ನ ಮಾಹಿತಿ ಕೆಳಗಿನಂತಿರುತ್ತವೆ.

ಮೇಲಿನ ಕೋಡ್ ಮೂಲಕ ನಮ್ಮ ಮೊಬೈಲ್ ನಲ್ಲಿ ಯಾರು ಯಾವ ಆಪ್ ಉಪಯೋಗ ಮಾಡಿದರು ಮತ್ತು ಏನೆನನ್ನು ನೋಡಿದ್ದಾರೆ ಎಂಬುದರ ಮಾಹಿತಿ ನಮಗೆ ಸಹಜವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *