ವಾಸ್ತುಶಾಸ್ತ್ರ.ಬೇರೆಯವರ ಮನೆಯಿಂದ ತಂದ ಈ ವಸ್ತುವಿನಿಂದ ಮಹತ್ವದ ಕನಸು ನನಸಾಗುವದು.

ವಾಸ್ತುಶಾಸ್ತ್ರ.ಬೇರೆಯವರ ಮನೆಯಿಂದ ತಂದ ಈ ವಸ್ತುವಿನಿಂದ ಮಹತ್ವದ ಕನಸು ನನಸಾಗುವದು.

 

 

 

ವಾಸ್ತುಶಾಸ್ತ್ರ ಮತ್ತು ಫೆಂಗ್ ಶುಯಿಯ ಅನುಕರಣವನ್ನು ಈಗ ಜಗತ್ತೇ ಅನುಸರಿಸುತ್ತಿದೆ. ವಾಸ್ತುವಿನ ಕ್ಷೇತ್ರದಲ್ಲಿ ಪ್ರತಿಯೊಂದು ದಿಕ್ಕಿಗೆ ತನ್ನದೇ ಆದ ಅರ್ಥ ಮತ್ತು ವಿಶೇಷ ಮಹತ್ವವಿದೆ. ಇವುಗಳಿಗೆ ಒಂದು ವೇಳೆ ಗಮನದಲ್ಲಿರಿಸಿದರೆ ಭವಿಷ್ಯದಲ್ಲಿ ಬರುವ ಅನೇಕ ಅಡ್ಡಿ ಆತಂಕಗಳಿಂದ ಮೊದಲೇ ಪಾರಾಗಬಹುದು. ಆದ್ದರಿಂದ ಯಾವ ಕೆಲಸಗಳಿಂದ ನಮಗೆ ಲಾಭ ಯಾವುದರಿಂದ ಹಾನಿಯುಂಟಾಗುತ್ತದೆ ಎಂಬುದನ್ನು ತಿಳಿಯೋಣ.

ಮನಿ ಪ್ಲಾಂಟ್ ವು ಮನೆಯ ಸೌಂದರ್ಯದ ಜೊತೆಗೆ ಕುಟುಂಬದ ಸಮೃದ್ಧಿಗೆ ಕಾರಣವಾಗುವದು. ಆದ್ದರಿಂದ ಈ ಪ್ಲಾಂಟನ್ನು ಮಾರ್ಕೆಟ್ ನಿಂದ ಖರೀದಿಸಿ ತರುವ ಬದಲು ಬೇರೆಯವರ ಮನೆಯಿಂದ ಯಾರಿಗೂ ಹೇಳದೆ ಕೇಳದೆ (ಒಂದು ಅರ್ಥದಲ್ಲಿ ಕಳ್ಳತನ ಮಾಡಿ) ತರುವದು ತುಂಬಾ ಲಾಭದಾಯಕವಾಗಿದೆ. ಇದರಿಂದ ಮನಸೋ ಇಚ್ಚೆ ಹಣ ಗಳಿಸುವ ಕನಸು ಈಡೇರುವದು. ಈ ಗಿಡದ ಬಳ್ಳಿಯ ಹಾಳಾಗುತ್ತಿರುವ ಎಲೆಗಳನ್ನು ಯಾವಾಗಲೂ ಕತ್ತರಿಸುತ್ತಿರಿ.

ಮುಳ್ಳು ಮುಳ್ಳಿನ ಗಿಡಗಳನ್ನು ಮನೆಯಲ್ಲಿ ಹಚ್ಚುವದರಿಂದ ಮನೆಯಲ್ಲಿ ಸಮಸ್ಯೆಗಳು ಉದ್ಭವಿಸುವವು. ಬಾಳೆಯ ವೃಕ್ಷ ಮತ್ತು ತುಳಸಿಯ ಮರ ಕೂಡಿ ಹಚ್ಚುವದರಿಂದ ಮನೆಯಲ್ಲಿ ಶ್ರೀಹರಿ ಹಾಗೂ ಲಕ್ಷ್ಮಿಯ ಆಶೀರ್ವಾದ ನೆಲೆಸಿರುವದು.

ಯಾವ ಸ್ಥಾನದಲ್ಲಿ ಅಲ್ಮಾರಿ ತಿಜೋರಿ ಅಥವಾ ಹಣವನ್ನು ಇಡುತ್ತೇವೆಯೋ ಅದರ ಆಸುಪಾಸಿನಲ್ಲಿ ಪಾದರಕ್ಷೆಗಳನ್ನು ಮತ್ತು ಬೂಟುಗಳನ್ನು ಒಯ್ಯಬೇಡಿ. ಹೀಗೆ ಮಾಡುವದರಿಂದ ಒಳ್ಳೆಯ ರೀತಿಯಲ್ಲಿ ಹಣದ ಲಾಭವಾದರೂ ಹಣದ ಉಳಿತಾಯ ಕೂಡಿಕೆ ಸರಿಯಾಗಿ ಆಗುವದಿಲ್ಲ.

ಮಾವಿನ ಮರದ ತಾಜಾ ಎಲೆಗಳನ್ನು ಮತ್ತು ಚೆಂಡುವಿನ ಹೂ ಗಳನ್ನು ಕೂಡಿಸಿ ಹಾರ ತಯಾರಿಸಿರಿ. ಈ ತರಹದ ಹಾರ ಶುಭ. ಮತ್ತು ಇದರ ಕೆಳಗೆ ಶುಭ-ಲಾಭ ಬರೆಯುವದನ್ನು ಮರೆಯಬೇಡಿ. ಹಾರ ಹೇಗೆ ಒಣಗಲು ಪ್ರಾರಂಭಿಸುವದೋ ಹಾಗೆ ಹಾರನ್ನು ತೆಗೆದು ಹಾಕಬೇಕು. ಕಾರಣ ಮನೆಯಲ್ಲಿ ಋಣಾತ್ಮಕ ಶಕ್ತಿ ಸಂಚರಿಸಲು ಪ್ರಾರಂಭಿಸುತ್ತದೆ. ಇದರಿಂದ ಆರ್ಥಿಕ ಸಮಸ್ಯೆಗಳು ಉದ್ಭವಿಸಲು ಕಾರಣವಾಗುತ್ತವೆ.

Leave a Reply

Your email address will not be published. Required fields are marked *