ವಿವಾಹಿತೆಗೆ ಮಾಂಗಲ್ಯದ ಆವಶ್ಯಕತೆ ಯಾಕೆ ಗೊತ್ತಾ?

ವಿವಾಹಿತೆಗೆ ಮಾಂಗಲ್ಯದ ಆವಶ್ಯಕತೆ ಯಾಕೆ ಗೊತ್ತಾ?

 

 

 

ದಾರದಲ್ಲಿ ಪೋಣಿಸಿದ ಕರಿಮಣಿಗಳು ಹಾಗೂ ಬಂಗಾರದ ಪೆಂಡಿಲ್ ಗಳು ಕೂಡಿದ ಆಭರಣವೇ ಮಾಂಗಲ್ಯ. ಈ ಮಾಂಗಲ್ಯ ವಿವಾಹಿತೆಗೆ ಯಾಕೆ ಅನಿವಾರ್ಯ ಎಂಬುದು ತಿಳಿಯುವಾ.

ಮಾಂಗಲ್ಯದ ಆಭೂಷಣ ದೊಂದಿಗೆ ಬೇರೆ ಯಾವ ಆಭರಣವು ಸಾಠಿ ಇಲ್ಲ. ಪ್ರಾಚೀನ ಕಾಲದಿಂದಲೂ ಮಾಂಗಲ್ಯಕ್ಕೆ ಅಪಾರ ಮಹತ್ವವಿದೆ. ಪ್ರತಿ ಸ್ತ್ರೀಗೆ ವಿವಾಹದ ನಂತರ ಈ ಮಾಂಗಲ್ಯ ಪತಿಯ ಕಡೆಯಿಂದ ಕಟ್ಟಲಾಗುತ್ತದೆ, ಅದನ್ನು ಪತಿಯ ಮೃತ್ಯುವಿನ ನಂತರವೇ ತೆಗೆದು ಹಾಕುವ ರೂಢಿ ಇದೆ. ಅದಕ್ಕಿಂತ ಪೂರ್ವದಲ್ಲಿ ಮಾಂಗಲ್ಯವನ್ನು ಯಾವುದೇ ಕಾರಣದಿಂದ ಎಂತಹುದೇ ಪರಿಸ್ಥಿಯಲ್ಲಿ ತೆಗೆದು ಹಾಕುವದು ಅಶುಭವೆಂದು ಪರಿಗಣಿಸಲಾಗುವದು.

ಜೊತೆಗೆ ಇದನ್ನು ಪತಿಯ ಜಾಣ್ಮೆಗೂ ಹೋಲಿಸಿದ್ದಾರೆ. ಹೀಗೆ ಅನೇಕ ಕಾರಣಗಳಿಂದ ಮಾಂಗಲ್ಯ ಮಹಿಳೆಯರಿಗೆ ಅನಿವಾರ್ಯವಾಗಿದೆ. ಇದಾಯಿತು ಮಾಂಗಲ್ಯದ ಧಾರ್ಮಿಕ ಮಹತ್ವ.

ಇನ್ನು ಮಾಂಗಲ್ಯ ಮಹಿಳೆಗೆ ಅನಿವಾರ್ಯವೇಕೆ? ಎಂಬ ಕಾರಣಗಳು ಅನೇಕ ಇವೆ. ವಿವಾಹಿತ ಮಹಿಳೆ ಎಲ್ಲಿ ಹೋದಲ್ಲಿಯೂ ಆಕರ್ಷಣದ ಕೇಂದ್ರಬಿಂದುವಾಗಿರುತ್ತಾಳೆ. ಎಲ್ಲರ ಒಳ್ಳೆಯ ಕೆಟ್ಟ ದೃಷ್ಟಿ ಅವಳ ಮೇಲೆ ನೆಟ್ಟಿರುತ್ತದೆ. ಇಂತಹ ಸಮಯದಲ್ಲಿ ಮಾಂಗಲ್ಯದಲ್ಲಿಯ ಕರಿಮಣಿಗಳು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತವೆ. ಜೊತೆಗೆ ಅದರಲ್ಲಿಯ ಬಂಗಾರದ ಪೆಂಡಿಲ್ ಗಳ ಮಹತ್ವವು ಸಾಕಷ್ಟಿದೆ. ಬಂಗಾರ ತೀಕ್ಷ್ಣ ಮತ್ತು ಊರ್ಜೆಯ ಪ್ರತೀಕವಾಗಿದೆ. ಆದ್ದರಿಂದಲೇ ಮಾಂಗಲ್ಯಕ್ಕೆ ವಿವಾಹಿತ ಸ್ತ್ರೀಗೆ ಅನಿವಾರ್ಯ ಮಾಡಲಾಗಿದೆ.

Leave a Reply

Your email address will not be published. Required fields are marked *