LIC ಪಾಲಿಸಿ ಹೋಲ್ಡರ್ ಸಲುವಾಗಿ ಮಹತ್ವದ ಸುದ್ದಿ.

LIC ಪಾಲಿಸಿ ಹೋಲ್ಡರ್ ಸಲುವಾಗಿ ಮಹತ್ವದ ಸುದ್ದಿ.

 

 

 

ಸಾರ್ವಜನಿಕ ಕ್ಷೇತ್ರದಲ್ಲಿಯ ಜೀವವಿಮೆ ಕಂಪನಿಯಾದ LIC ತನ್ನ ಪಾಲಿಸಿದಾರರಿಗೆ ಜಾಗ್ರತಿಪರ ಸಂದೇಶವನ್ನು ಕೊಟ್ಟಿದೆ.

LIC ತನ್ನ ಪಾಲಿಸಿದಾರರಿಗೆ ಅಲರ್ಟ್ ಮಾಡಿದೆ. ಕಳೆದ ಕೆಲವು ದಿವಸಗಳಿಂದ ಸೋಷಿಯಲ್ ಮೀಡಿಯಾ ಮಾಧ್ಯಮದಿಂದ LIC ಗ್ರಾಹಕರಿಗೆ ಕೆಲವೊಂದು ಮೆಸೇಜ್ ಗಳು ಬರ್ತಾ ಇವೆ. ಈ ಮೆಸೇಜ್ ಗಳಲ್ಲಿ ಆಧಾರ್ ಕಾರ್ಡ್ ನ ಮಾಹಿತಿ ಕೊಡುವ ಸಂದರ್ಭದಲ್ಲಿ ಒಂದು ಸಂದೇಶ ಸುತ್ತಾಡುತ್ತಿದೆ. ಈ ಮೆಸೇಜ್ ಪಾಲಿಸಿ ಗ್ರಾಹಕನಿಗೆ ಅಥವಾ ಅವರ ಸಂಬಂಧಿಕರಿಗೆ ಒಂದು ವೇಳೆ ಬಂದರೆ ಜಾಗರೂಕವಾಗಿರಿ ಎಂದು ಹೇಳಿದೆ.

LIC ಕಂಪನಿಯವರು ಈ ತರಹದ ಯಾವುದೇ ಮಸೇಜ್ ಗಳನ್ನು ಕಳಿಸಿಲ್ಲ ಮತ್ತು ಕಳಿಸುವದಿಲ್ಲ.

ಕಂಪನಿಯು ತನ್ನ ಗ್ರಾಹಕರಿಗೆ ಎಚ್ಚೆತ್ತುಕೊಳ್ಳಲು ಹೇಳಿದೆ. ಕಂಪನಿಯ ವತಿಯಿಂದ ಆಧಾರ್ ಕಾರ್ಡ್ ಮಾಹಿತಿ ಬೇಕಾಗಿದೆ ಎಂದು ಕೇಳಿಲ್ಲ. ಆದ್ದರಿಂದ ಪಾಲಿಸಿ ಗ್ರಾಹಕರು ಇಂತಹ ಯಾವುದೇ ಮಾಹಿತಿಯನ್ನು ಯಾರ ಜೊತೆಗೆ ಶೇರ್ ಮಾಡಬೇಡಿ ಎಂದು ಸೂಚಿಸಿದೆ. ಒಂದು ವೇಳೆ ಮಾಡಿದ್ದಲ್ಲಿ ಅದಕ್ಕೆ LIC ಜವಾಬ್ದಾರರಲ್ಲ.

 

 

 

 

 

 

 

 

LIC ಸಾರ್ವಜನಿಕವಾಗಿ ನೋಟಿಸ್ ಕಳುಹಿಸಿ ಈ ಮಾಹಿತಿ ನೀಡಿದೆ. ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಮೆಸೇಜ್ ಫೇಕ್ ಆಗಿದೆ. LIC ಲೋಗೋವನ್ನು ಬಳಿಸಿ ವೈರಲ್ ಆದ ಈ ಮೆಸೇಜ್ ಕ್ಕೆ ಯಾವುದೇ ಪ್ರಕಾರದ ಪ್ರತಿಕ್ರಿಯೆ ಕೊಡಬೇಡಿ. ಮತ್ತು ಯಾರು ಯಾವುದೇ ಪ್ರಕಾರದ ತಮ್ಮ ಖಾಸಗಿ ಮಾಹಿತಿಯನ್ನು ಶೇರ್ ಮಾಡಬೇಡಿ.

Leave a Reply

Your email address will not be published. Required fields are marked *