ಇನ್ನು DTH ಔಟ್!! ಮೈಕ್ರೋ ಎಂಟಿನಾ ದಿಂದ TV ನೋಡಲು ಸಾಧ್ಯ.

ಇನ್ನು DTH ಔಟ್!! ಮೈಕ್ರೋ ಎಂಟಿನಾ ದಿಂದ TV ನೋಡಲು ಸಾಧ್ಯ.

 

 

ವಿಜ್ಞಾನದಿಂದ ತಂತ್ರಜ್ಞಾನದಲ್ಲಿ ಆಗುತ್ತಿರುವ ಹೊಸ ಹೊಸ ಬದಲಾವಣೆಗಳು ಆಗುತ್ತಿರುವದನ್ನು ಕಂಡು ದಿನಂಪ್ರತಿ ಆಶ್ಚರ್ಯ ಪಡುವದು ಈಗ ಹೊಸ ವಿಷಯವಾಗೇನು ಉಳಿದಿಲ್ಲ. ವಿಜ್ಞಾನದಲ್ಲಾಗುತ್ತಿರುವ ಕ್ರಾಂತಿಯಿಂದ ಜಗತ್ತಿನಲ್ಲಿ ಪ್ರತಿಯೊಂದು ನಿಮಿಷಕ್ಕೆ ಏನಾದರೊಂದು ಹೊಸ ಅನ್ವೇಷಣೆ ನಿರ್ಮಾಣವಾಗುತ್ತಲಿದೆ. ಹೊಸ ತಂತ್ರಜ್ಞಾನಗಳಿಂದ ತಯಾರಿಸಲಾದ ವಸ್ತುಗಳಿಂದ ಹಳೆಯ ವಸ್ತುಗಳು ನೋಡನೋಡುತ್ತಲೇ ಕಾಲಬಾಹ್ಯವಾಗಿ ಬಿಡುತ್ತವೆ.

ಈ ಪಂಕ್ತಿಯಲ್ಲಿ ಇನ್ನು DTH ಸಹ ಸೇರುವ ಮಾರ್ಗದಲ್ಲಿದೆ. ಇದರ ಸ್ಥಾನವನ್ನು ಈಗ ಮೈಕ್ರೋ ಎಂಟಿನಾ ತೆಗೆದುಕೊಳ್ಳಲಿದೆ.

ಮಾಳಿಗೆ ಬೇಡ, ತಂತಿ ಬೇಡಾ, ಎಂಟಿನಾ ಮಾತ್ರ ತಯಾರಿದೆ.

ಡಿಟಿಎಚ್ ಸಲುವಾಗಿ ಎತ್ತರದ ಮಾಳಿಗೆಯ ಅವಶ್ಯಕತೆ ಇರುತ್ತದೆ. ಜೊತೆಗೆ ಸ್ವಲ್ಪ ಸ್ಥಳದ ಅವಶ್ಯಕತೆ ಸಹಿತ ಇರುತ್ತದೆ. ಆದರೀಗ ಜಗತ್ತಿನ ತುಂಬಾ ಮೈಕ್ರೊ ಸ್ಟ್ರಿಪ್ ಎಂಟಿನಾದ ಚರ್ಚೆ ಜೋರಾಗಿ ನಡೆದಿದೆ. ಭಾರತದಲ್ಲಿಯೂ ಸಹ ಸಂಪೂರ್ಣ ಸ್ವದೇಶಿಯದಾದ ಎಂಟಿನಾ ನಿರ್ಮಾಣವಾಗಿದೆ. ಪ್ರಸಾರ ಮಾಧ್ಯಮಗಳಿಂದ ದೊರೆತ ಮಾಹಿತಿ ಪ್ರಕಾರ ಪಂಜಾಬ ಪ್ರಾಂತದ ಬಾಬಾ ಬಂದಾ ಸಿಂಹ ಬಹಾದೂರ ಇಂಜಿನಿಯರ್ ಕಾಲೇಜ ನಲ್ಲಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ವಿಭಾಗದ ಅಸಿಸ್ಟಂಟ್ ಪ್ರೊಫೆಸರ್ ಜಸಪಾಲ್ ಸಿಂಹ ಇವರು ತಯಾರಿಸಿದ್ದಾರೆ.

ಸೆಟ್ ಟಾಪ್ ಬಾಕ್ಸ್ ಜೊತೆಗೆ ಡೈರೆಕ್ಟ್ ಕನೆಕ್ಟ್ ಆಗುವದು.

ವಿಶೇಷ ವೇನೆಂದರೆ ಈ ಮೈಕ್ರೋ ಎಂಟಿನಾದಲ್ಲಿ ಎರಡರಿಂದ ಮೂರು ಸೆಂಟಿಮೀಟರ್ ನ ಒಂದು ಚಿಪ್ ನ್ನು ಬಳಸಲಾಗಿದೆ. ಈ ಚಿಪ್ ಇರತಂಕ್ಕಂತಹ ಬಾಕ್ಸ್ ಮನೆಯಲ್ಲಿಯೇ ಸರ್ವಿಸ್ ಬಾಕ್ಸ್ ಕ್ಕೆ ಜೋಡಿಸಲಾಗುವದು. ಇದರಿಂದ ಡಿಶ್ ಬದಲಾಗಿ ಎಂಟಿನಾ ಮಾಧ್ಯಮದಿಂದಲೂ ಟಿವಿ ನೋಡಲು ಸಾಧ್ಯವಾಗಲಿದೆ.

ಜಸಪಾಲ್ ಸಿಂಹ ಅವರು ಹೇಳುವ ಪ್ರಕಾರ ಈ ಎಂಟಿನಾ ತಯಾರಿಸಲು ಐದು ವರ್ಷಗಳ ಕಾಲಾವಧಿ ಬೇಕಾಯಿತಂತೆ.

ಬರೀ 50 ₹ ಗಳಲ್ಲಿ ಟಿವಿ ನಡೆಯುವದು.

ಪ್ರೊಫೆಸರ್ ಜಸಪಾಲ್ ಸಿಂಹ ಅವರ ದಾವೆಯ ಪ್ರಕಾರ ಇದು ಗ್ರಾಹಕರ ಜೊತೆಗೆ ಕಂಪೆನಿಗೂ ಸಹಿತ ಲಾಭದಾಯಕವಾಗಿದೆ. ಈ ಎಂಟಿನಾದಿಂದ ಹಣ ಮತ್ತು ಸಮಯ ಎರಡರ ಉಳಿತಾಯವಾಗಲಿದೆ. ಇದರ ಸಲುವಾಗಿ ಬರೀ 50 ₹ ಗಳ ಖರ್ಚು ಬರಲಿದೆ. ಇದಕ್ಕಾಗಿ ಬೇಕಾಗುವ ಚಿಪ್ ಪ್ರಿಂಟೆಡ್ ಸರ್ಕಿಟ್ ಬೋರ್ಡ್ (PCB) ಗೆ ಅಟ್ಯಾಚ್ ಮಾಡಲಾಗುವದು. ಈ ಚಿಪ್ ನ ಆಕಾರ ಎರಡರಿಂದ ಮೂರು ಸೆಂಟಿಮೀಟರ್ ವರೆಗೆ ಇದ್ದು ಇದನ್ನು ಉಪಯೋಗಿಸಲಾಗಿ ಟಿವಿ ಸಿಗ್ನಲ್ ಸಹ ತುಂಬಾ ಚೆನ್ನಾಗಿ ಬರುವದು.

Leave a Reply

Your email address will not be published. Required fields are marked *