ಉತ್ತಮ ನಿದ್ರೆಯ ಕೆಲವು ನಿಯಮಗಳು.

ಉತ್ತಮ ನಿದ್ರೆಯ ಕೆಲವು ನಿಯಮಗಳು.

 

 

ಮಲಗುವಾಗ ಯಾವಾಗಲೂ ತಲೆ ಪೂರ್ವ ದಿಕ್ಕಿನ ಕಡೆಗೆ ಹಾಗೂ ಕಾಲುಗಳು ಪಶ್ಚಿಮದ ಕಡೆಗೆ ಇರಬೇಕು. ಒಂದು ಸಮಯ ದಕ್ಷಿಣದ ಕಡೆಗೆ ತಲೆ ಇಟ್ಟರೂ ನಡೆಯಬಹುದು, ಆದರೆ ಪಶ್ಚಿಮ ಮತ್ತು ಉತ್ತರದ ಕಡೆಗೆ ತಲೆ ಮಾಡಿ ಮಲಗುವದು ಬೇಡ.

ನಮ್ಮ ದೇಹದ ಚುಂಬಕೀಯ ಶಕ್ತಿಯ ದಿಕ್ಕು ಕಾಲುಗಳ ಬದಿಗೆ ದಕ್ಷಿಣ ಹಾಗೂ ತಲೆಯ ಬದಿ ಉತ್ತರವಿರುತ್ತದೆ. ಒಂದು ವೇಳೆ ನಾವು ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದರೆ ಉತ್ತರ-ಉತ್ತರ ದಿಕ್ಕುಗಳು ಒಂದುಗೂಡುತ್ತವೆ. ಅಂದರೆ ಸಜಾತಿಯ ಚುಂಬಕೀಯ ದೃವಗಳು ಒಂದಾಗುವವು. ಎರಡು ಸಜಾತಿಯ ಚುಂಬಕಗಳು ಒಂದುಗೂಡುವದರಿಂದ ಅವುಗಳು ಪರಸ್ಪರ ಒಂದನ್ನೊಂದು ಪ್ರತಿರೋಧ ಮಾಡುತ್ತವೆ. ಈ ಕಾರಣದಿಂದ ನಮ್ಮ ತಲೆಯ ಮೇಲೆ ರಾತ್ರಿಪೂರ್ತಿ ಒತ್ತಡ ನಿರ್ಮಾಣವಾಗುವದು. ಇದರಿಂದ ನಮ್ಮ ಬಿ ಪಿ ಹೆಚ್ಚು ಕಡಿಮೆಯಾಗುವದು. ಇದು ದೇಹಕ್ಕೆ ಒಳ್ಳೆಯದಲ್ಲ, ಯಾಕೆಂದರೆ ನಮ್ಮ ಶರೀರದ ಆರೋಗ್ಯದಲ್ಲಿ ಏರುಪೇರಾಗಲು ಪ್ರಾರಂಭಿಸುವದು. ಪೂರ್ವ ದಿಕ್ಕಿನೆಡೆಗೆ ಮಾತ್ರ ಗುರುತ್ವಾಕರ್ಷಣದ ಬಲ ಎಲ್ಲಂಕ್ಕಿಂತ ಕಡಿಮೆ ಇರುವದು.

ರಾತ್ರಿಯ ನಿದ್ರೆ ಆರೋಗ್ಯದ ದ್ರಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ. ಮಲಗುವ ಸಮಯ ವಯಸ್ಸಿಗನುಸಾರವಾಗಿ ಇರುತ್ತದೆ. ಆದರೆ ಕನಿಷ್ಠ 6 ಘಂಟೆಯಾದರೂ ಮಲಗಲೇಬೇಕು.

● ಒಂದು ವರ್ಷದ ಮಗುವಿಗೆ 18 ಘಂಟೆಗಳ ನಿದ್ರೆ ಬೇಕು. ಮುಂದೆ ನಾಲ್ಕು ವರ್ಷಗಳ ವರೆಗೆ 14 ಘಂಟೆಗಳ, 4 ರಿಂದ 5 ವರ್ಷಗಳ ವರೆಗೆ 12 ಘಂಟೆ, 5 ರಿಂದ 15 ವರ್ಷಗಳವರೆಗೆ 10 ಘಂಟೆಗಳ ಕಾಲ, 15 ರಿಂದ 25 ವಯಸ್ಸಿಗೆ 9 ಘಂಟೆಗಳ, 25 ವರ್ಷಗಳ ನಂತರ 6 ರಿಂದ 7 ಘಂಟೆ, ಮತ್ತು ಕಷ್ಟದ ಕೆಲಸಗಳನ್ನು ಮಾಡುವವರಿಗೆ 7 ರಿಂದ 8 ಘಂಟೆಗಳ ಕಾಲ ನಿದ್ರೆ ಬೇಕು ಅದು ಸರಿಯಾದ ಮತ್ತು ಶಾಂತತೆಯಿಂದ ಕೂಡಿದ ನಿದ್ರೆ ಯಾಗದೆ ಇದ್ದಲ್ಲಿ ಅನೇಕ ರೋಗಗಳು ಉತ್ಪತ್ತಿ ಆಗುವವು.

● ಮಲಗುವ ಮುನ್ನ ಮೂತ್ರ ವಿಸರ್ಜನೆ ಮಾಡಿದರೆ ಒಳ್ಳೆಯದು ಕಾರಣ ನಿದ್ರೆಯಿಂದ ಏಳುವದು ತಪ್ಪುವದು.

● ಮಲಗುವಾಗ ಪ್ರಥಮ ಎಡಕ್ಕೆ ಎರಡು ನಿಮಿಷ ನಂತರ ಬಲಕ್ಕೆ ಎರಡು ನಿಮಿಷ ಹೀಗೆ ಓರೆಯಾಗಿ ಅಥವಾ ಹೋಳು ಮೈಯಿಂದ ಮಲಗಿ ಆದ ಮೇಲೆ ಮುಖ ಮೇಲೆ ಮಾಡಿ ಬೆನ್ನಿನ ಮೇಲೆ ಮಲಗಬೇಕು. ಈ ಭಂಗಿಯಲ್ಲಿ ಮಲಗಿದಾಗ ನಮ್ಮ ಅಂಗೈಗಳೆರಡು ಹೊಟ್ಟೆ ಹಾಗೂ ಎದೆಯ ಮಧ್ಯಭಾಗದಲ್ಲಿ ಇರಬೇಕು.

● ಆದಷ್ಟು ನಸುಕಿನಲ್ಲಿ ಬೇಗ ಏಳುವ ರೂಢಿ ಇಟ್ಟುಕೊಳ್ಳಿ, ಮತ್ತು ವ್ಯಾಯಾಮದ ಅಭ್ಯಾಸವಿದ್ದರೆ ಚೆನ್ನಾಗಿರುತ್ತದೆ.

● ಚಂದ್ರನಾಡಿ ಕಾರ್ಯಗತವಿದ್ದರೆ ನಿದ್ರೆ ಚೆನ್ನಾಗಿ ಬರುವದು. ಒಂದು ವೇಳೆ ನಿದ್ರೆ ಚೆನ್ನಾಗಿ ಬರದಿದ್ದರೆ ಬಲಭಾಗದ ಮೂಗಿನ ಸೊರಳೆಯಿಂದ ಉಸಿರಾಟ ನಿಲ್ಲಿಸಿ ಎಡಗಡೆಯ ಮೂಗಿನ ಸೊರಳೆಯಿಂದ ಉಸಿರಾಟ ಮಾಡಬೇಕು.

● ನಿದ್ರೆಯಿಂದ ಏಳುವಾಗ ಬಲಗಡೆಗೆ ಹೊರಳಿ ಬಲಗಡೆಯಿಂದಲೇ ಏಳಬೇಕು.

● ಚಿಕ್ಕ ಮಕ್ಕಳು ಹೇಗೆ ಮಲಗುವರೊ ಹಾಗೆ ಸಹ ಮಲಗುವದು ಒಳ್ಳೆಯದು. ಒಂದು ಕಾಲು ಉದ್ದವಾಗಿ ಇನ್ನೊಂದು ಕಾಲು ಮಡಿಕೆ ಮಾಡಿದ ಅವಸ್ಥೆ ತುಂಬಾ ಒಳ್ಳೆಯದು.

● ಪುರುಷರು ಬೋರಲಾಗಿ ಹೊಟ್ಟೆ ಕೆಳಗಡೆ ಮಾಡಿ ಮಲಗಬಾರದು.ಇದರಿಂದ ಹರ್ನಿಯಾ ಅಪೆಂಡಿಕ್ಸ್ ದಂತಹ ಕಾಯಿಲೆಗಳು ಆಗುವ ಸಂಭವವಿರುತ್ತದೆ.

● ಮಲಗುವಾಗ ಕೈ,ಕಾಲುಗಳನ್ನು ಮತ್ತು ಬಾಯಿಯನ್ನು ಚೆನ್ನಾಗಿ ತೊಳೆದುಕೊಂಡು ಮಲಗಬೇಕು.

● ಮಲಗುವಾಗ ಮೈಮೇಲೆ ಸಡಿಲವಾದ ಹತ್ತಿಯ ಬಟ್ಟೆಗಳನ್ನು ಉಪಯೋಗಿಸಬೇಕು. ಹಾಗೂ ಸಾಕ್ಸ್ ಗಳನ್ನು ಉಪಯೋಗಿಸಬಾರದು.

ಡಾ. ನಿತಿನ್ ಜಾಧವ್.
ಸಂಜೀವನ ಚಿಕಿತ್ಸಕ, ಮುಂಬೈ.

Leave a Reply

Your email address will not be published. Required fields are marked *