ಸ್ವಂತ ಕಾರು ಹೊಂದಿದ್ದೀರಾ? ಹಾಗಾದರೆ ಅಡುಗೆ ಅನಿಲ (ಗ್ಯಾಸ್ ) ಸಬ್ಸಿಡಿ ರದ್ದತಿ ಬಗ್ಗೆ ಮಹತ್ವದ ಮಾಹಿತಿ.

ಸ್ವಂತ ಕಾರು ಹೊಂದಿದ್ದೀರಾ? ಹಾಗಾದರೆ ಅಡುಗೆ ಅನಿಲ (ಗ್ಯಾಸ್ ) ಸಬ್ಸಿಡಿ ರದ್ದತಿ ಬಗ್ಗೆ ಮಹತ್ವದ ಮಾಹಿತಿ.

 

 

ಸರಕಾರ ಶೀಘ್ರದಲ್ಲಿಯೇ ಮತ್ತೊಂದು ದೊಡ್ಡ ನಿರ್ಣಯವನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ.

RTO ಆಫೀಸಿನಿಂದ ಮಾಹಿತಿ ಸಂಕಲನವಾಗುತ್ತಿದೆ:

ಯಾರು ಸ್ವಂತ ಕಾರು ಹೊಂದಿದ್ದಾರೋ ಅವರ ಅಡುಗೆ ಅನಿಲ (ಗ್ಯಾಸ್) ಸಬ್ಸಿಡಿ ರದ್ದು ಮಾಡುವ ದೊಡ್ಡ ನಿರ್ಣಯದ ಶಾಕ್ ಕೊಡುವ ತಯಾರಿಯಲ್ಲಿದೆ.

ಸರಕಾರ ಮೊದಲು ಪ್ರಾಯೋಗಿಕ ತತ್ವದ ಮೇಲೆ ಕೆಲವೊಂದು ಆರ್ ಟಿ ಒ ಆಫೀಸ್ ಗಳಲ್ಲಿಂದ ಮಾಹಿತಿ ಸಂಗ್ರಹ ಮಾಡುತ್ತಲಿದೆ. ದೇಶದಲ್ಲಿ ಅನೇಕ ನಾಗರಿಕರು ಎರಡರಿಂದ ಮೂರು ಕಾರಗಳನ್ನು ಹೊಂದಿದ್ದಾರೆ, ಅಂತಹವರು ಗ್ಯಾಸ್ ಮೇಲಿನ ಸಬ್ಸಿಡಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇಂಥ ವ್ಯಕ್ತಿಗಳ ಮಾಹಿತಿಯನ್ನು ಪಡೆದುಕೊಂಡು ಭವಿಷ್ಯದಲ್ಲಿ ಅವರ ಸಬ್ಸಿಡಿಯ ಲಾಭವನ್ನು ಕಡಿತ ಗೊಳಿಸುವ ಬಗ್ಗೆ ಸರಕಾರ ಗಂಭೀರವಾಗಿದೆ.

ಸಿರಿವಂತರು ಪಡೆದುಕೊಳ್ಳುವ ಸರಕಾರಿ ಸಬ್ಸಿಡಿಗೆ ಕತ್ತರಿ.

ಅಡುಗೆ ಅನಿಲದ ಸಬ್ಸಿಡಿಯನ್ನು ಆಧಾರ ಕ್ರಮಾಂಕಕ್ಕೆ ಜೋಡಿಸಿರುವದರಿಂದ ಸರಕಾರದ ಬೊಕ್ಕಸದ ಮೇಲಿನ 30 ಸಾವಿರ ಕೋಟಿ ₹ ಗಳ ಭಾರ ಕಡಿಮೆಯಾಗಲಿದೆ.

ಸರಕಾರ ಇನ್ನು ಶ್ರೀಮಂತರಿಗೆ ದೊರೆಯುವ ಸರಕಾರಿ ಅನುದಾನಕ್ಕೂ ಕತ್ತರಿ ಹಾಕುವ ವಿಚಾರದಲ್ಲಿದೆ.

Leave a Reply

Your email address will not be published. Required fields are marked *