ಫೆಂಗ್ ಶುಯಿ ಟಿಪ್ಸ್: ನವ ವರ್ಷಾರಂಭಕ್ಕೆ ಈ ವಸ್ತುಗಳಿಗೆ ಮನೆಯಲ್ಲಿ ಸ್ಥಾನ ಕಲ್ಪಿಸಿ ಕೊಟ್ಟರೆ ಆನಂದ ಐಶ್ವರ್ಯವೂ ಮನೆ ತುಂಬುವದು ಗ್ಯಾರಂಟಿ.

ಫೆಂಗ್ ಶುಯಿ ಟಿಪ್ಸ್: ನವ ವರ್ಷಾರಂಭಕ್ಕೆ ಈ ವಸ್ತುಗಳಿಗೆ ಮನೆಯಲ್ಲಿ ಸ್ಥಾನ ಕಲ್ಪಿಸಿ ಕೊಟ್ಟರೆ ಆನಂದ ಐಶ್ವರ್ಯವೂ ಮನೆ ತುಂಬುವದು ಗ್ಯಾರಂಟಿ.

 

 

ಹೊಸ ವರ್ಷ ಹೊಸ ಆರಂಭ. ಪ್ರತಿ ವರ್ಷ ವರ್ಷಾರಂಭಕ್ಕೆ ಹೊಸ ಜೀವನ , ಹೊಸ ವಿಚಾರ, ಜೀವನದಲ್ಲಿ ಏಳಿಗೆಯ ಬದಲಾವಣೆಗಳನ್ನು ಆಶಿಸುತ್ತೇವೆ. ಇವೆಲ್ಲದಕ್ಕೂ ಬೇಕಾಗಿರುವುದು ಕಾಂಚಾಣ. ಆದ್ದರಿಂದಲೇ ವಾಸ್ತು ಶಾಸ್ತ್ರಗಳಲ್ಲಿ ಹಣದ ಗಳಿಕೆ, ಇದರ ಜೊತೆಗೆ ಉಳಿತಾಯ ಮತ್ತು ವಿನಿಯೋಗ ಮಾಡುವ ಬಗ್ಗೆ ಅನೇಕ ರೀತಿಯ ಒಳ್ಳೆಯ ಸೂಚನೆಗಳನ್ನು ಕೊಟ್ಟಿರುತ್ತಾರೆ. ಹಾಗೆಯೇ ಫೆಂಗ್ ಶುಯಿ ಶಾಸ್ತ್ರದಲ್ಲಿಯೂ ಸಹಿತ ಮನೆಯ ಏಳಿಗೆಯ ಕುರಿತು ಕೆಲವೊಂದು ಒಳ್ಳೆಯ ಸಲಹೆಗಳು ಇವೆ. ಈ ಮಹತ್ವದ ಟಿಪ್ಸಗಳನ್ನು ಫಾಲೋ ಮಾಡಿ ಹೊಸ ವರ್ಷದ ಆಗಮನವನ್ನು ಚೆನ್ನಾಗಿ ಸ್ವಾಗತಿಸಿದರೆ ಭವಿಷ್ಯದ ದಾರಿ ಖುಷಿಯಿಂದ ತುಂಬಲು ಸಾಧ್ಯ. ಅದಕ್ಕಾಗಿ ಈ ವಸ್ತುಗಳನ್ನು ವರ್ಷಾರಂಭಕ್ಕೆ ಮನೆತುಂಬಿ, ಆಮೇಲೆ ನೋಡಿ ಒಳ್ಳೆಯ ಬದಲಾವಣೆ ಹೇಗಾಗುತ್ತದೆ ಎಂದು.

ಮೂರು ಕಾಲಿನ ಕಪ್ಪೆ:-

ಫೆಂಗ್ ಶುಯಿ ಶಾಸ್ತ್ರಕ್ಕನುಸಾರವಾಗಿ ಬಾಯಿಯಲ್ಲಿ ನಾಣ್ಯವನ್ನು ಹಿಡಿದ ಮೂರು ಕಾಲಿನ ಕಪ್ಪೆಯನ್ನು ಕಿಚನ್ ರೂಮ್ ನಿಂದ ದೂರ ಡ್ರಾಯಿಂಗ್ ರೂಮ್ ನಲ್ಲಿ ಅಥವಾ ಲಿವಿಂಗ್ ರೂಮ್ ನಲ್ಲಿ ಇಟ್ಟು ಬಿಡಿ. ಇದರ ಹಿಂದಿನ ಉದ್ದೇಶ ಮನೆಯಲ್ಲಿ ಲಕ್ಷ್ಮಿ ಸತತವಾಗಿ ವಾಸವಾಗಿರುತ್ತಾಳೆ.

● ಲಾಫಿಂಗ್ ಬುದ್ಧ:-

ಯಾರ ಮನೆಯಲ್ಲಿ ನಗುತ್ತಿರುವ ಬುದ್ಧನ ವಿಗ್ರಹ ವಿರುತ್ತದೆಯೋ ಅವರ ಮನೆಯಲ್ಲಿ ಸಂತೋಷ ಆನಂದಕ್ಕೆ ಬರವಿರುವದಿಲ್ಲ. ಹಾಗೆಯೇ ಹಣದ ಕೊರತೆ ನಿರ್ಮಾಣವಾಗುವದಿಲ್ಲ.

ಗೋಲ್ಡನ್ ಫಿಶ್:-

ಈ ಗೋಲ್ಡನ್ ಫಿಶ್ ಯಾವಾಗಲೂ ಹಣ ಮತ್ತು ಏಳಿಗೆಗೆ ಕಾರಣವಾಗಿರುತ್ತದೆ.

ಡ್ರ್ಯಾಗನ್:-

 

ಈ ಡ್ರ್ಯಾಗನ್, ಶಕ್ತಿ ಮತ್ತು ಎದೆಗಾರಿಕೆಯ ಪ್ರತೀಕವಾಗಿದೆ. ಮತ್ತು ಇದರಲ್ಲಿ ಅತ್ಯದ್ಭುತ ಶಕ್ತಿ ಇದೆ ಎಂದು ತಿಳಿಯಲಾಗಿದೆ.

ತಾಮ್ರದ ನಾಣ್ಯ :-

ಫೆಂಗ್ ಶುಯಿ ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಕೆಂಪು ರಿಬ್ಬನ್ ನಲ್ಲಿ ತಾಮ್ರದ ನಾಣ್ಯವನ್ನು ಹಾಕಿ ಕಟ್ಟುವದರಿಂದ ಮನೆಯಲ್ಲಿ ಧನ ಮತ್ತು ಸಮೃದ್ಧಿ ನೆಲೆಸುವದು.

ಆಮೆ:-

ಆಮೆ ಸಂತೋಷದ ಮತ್ತು ಹಣದ ಪ್ರತೀಕವಾಗಿದೆ. ಆದ್ದರಿಂದ ಇದನ್ನು ಸಹ ಮನೆಯಲ್ಲಿ ಇಡಲು ಅಭ್ಯಂತರವಿಲ್ಲ.

ಲವ್ ಲೈಫ್ ಕೆಂಪು ಬಣ್ಣದ ಕ್ಯಾಂಡಲ್:-

ಕೆಂಪು ಬಣ್ಣದ ಕ್ಯಾಂಡಲ್ ಮನೆಯಲ್ಲಿ ಪತಿ-ಪತ್ನಿಯರ ಪ್ರೀತಿಗೆ ಯಾವುದೇ ಅಡ್ಡಿ ಆತಂಕ ಬರದ ಹಾಗೆ ನೋಡಿಕೊಳ್ಳುವದು.

ಹಳದಿ ಬಣ್ಣದ ಕ್ಯಾಂಡಲ್:-

ಈ ಬಣ್ಣದ ಕ್ಯಾಂಡಲ್ ಮನೆಯಲ್ಲಿದ್ದರೆ ಮನೆಯ ಮಾಲೀಕನಿಗೆ ಏಳಿಗೆಯ
ಬಾಗಿಲು ತೆರೆಯುವದು.
ಈ ಕ್ಯಾಂಡಲ್ ಆದಷ್ಟು ತಮ್ಮ ವರ್ಕಿಂಗ್ ಸ್ಟೇಷನ್ ಅಥವಾ ಸ್ಟಡಿ ಟೇಬಲ್ ಮೇಲೆ ಇರುವ ಹಾಗೆ ನೋಡಿಕೊಳ್ಳಿ.

ಗುಲಾಬಿ ಕ್ಯಾಂಡಲ್:-

ಈ ಗುಲಾಬಿ ಬಣ್ಣದ ಕ್ಯಾಂಡಲ್ ಯಾವಾಗಲೂ ಹೃದಯಕ್ಕೆ ಶಾಂತಿ ಸಮಾಧಾನವನ್ನು ನೀಡುವದು. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ನೀಲಿ ಕ್ಯಾಂಡಲ್ :-

ನೌಕರಿಯಲ್ಲಿ ಪ್ರಮೋಷನ್ ಹಾಗೂ ಒಳ್ಳೆಯ ನೌಕರಿಯ ಶೋಧದಲ್ಲಿದ್ದರೆ ಮನೆಯಲ್ಲಿ ನೀಲಿ ಬಣ್ಣದ ಕ್ಯಾಂಡಲ್ ನ್ನು ಅವಶ್ಯವಾಗಿ ಇಡಿ ಯಶಸ್ಸು ನಿಮ್ಮದಾಗುವುದು.

Leave a Reply

Your email address will not be published. Required fields are marked *