ಮುಕೇಶ್ ಅಂಬಾನಿ ಮಗನ ಮದುವೆ ಆಮಂತ್ರಣ ಪತ್ರಿಕೆ ಬೆಲೆ ಕೇಳಿದರೆ ಬೆಚ್ಚಿ ಬೀಳ್ತೀರಾ!!

ಮುಕೇಶ್ ಅಂಬಾನಿ ಮಗನ ಮದುವೆ ಆಮಂತ್ರಣ ಪತ್ರಿಕೆ ಬೆಲೆ ಕೇಳಿದರೆ ಬೆಚ್ಚಿ ಬೀಳ್ತೀರಾ!!

 

 

ರಿಲಾಯನ್ಸ್ ಇಂಡಸ್ಟ್ರಿಜ್ ಮಾಲೀಕರಾದ ಮುಕೇಶ್ ಅಂಬಾನಿಯವರ ಮಗನ ಮದುವೆಯ ಆಮಂತ್ರಣ ಪತ್ರಿಕೆಯ ಹಣದಲ್ಲಿ ಸಾಮಾನ್ಯ ಮನುಷ್ಯನ ಸಂಪೂರ್ಣ ಮದುವೆ ಯಾಗುತ್ತದೆ ಅಂದರೆ ಅತಿಶಯೋಕ್ತಿಯಾಗಲಾರದು.

ಅಥವಾ ಈ ಆಮಂತ್ರಣ ಪತ್ರಿಕೆಯ ಹಣದಲ್ಲಿ ಆಯ್ ಫೋನ್ ಎಕ್ಸ್ ಕನಸು ನೋಡುವ ನಮಗೆ, ಒಂದು ಸ್ವಂತಕ್ಕೆ ಇಟ್ಟುಕೊಂಡು ಇನ್ನೊಂದು ಗೆಳೆಯನಿಗೆ ಗಿಫ್ಟ್ ಕೊಡಬಹುದಾಗಿದೆ. ಇಲ್ಲ ಯಾವುದಾದರೂ ಸಾಲದಲ್ಲಿ ಮುಳುಗಿದ ಬಡ ರೈತನ ಜೀವನೋಪರಾಂತ ಮಾಡಿದ ಸಾಲ ಮುಟ್ಟಿಸಬಹುದಾಗಿದೆ. ಎಂದ ಮೇಲೆ ಈ ಹಾಯ್ ಫಾಯ್ ಸಿರಿವಂತರ ಮದುವೆ ಆಮಂತ್ರಣದ ಪತ್ರಿಕೆ ಎಷ್ಟು ಬೆಳೆಯುಳ್ಳದ್ದು ಇದ್ದಿರಬಹುದು ಎಂದು ನೀವೇ ಅಂದಾಜಿಸಿಕೊಳ್ಳಿ.

ಮುಕೇಶ್ ಅಂಬಾನಿ ಜಗತ್ತಿನ ಅತೀ ದೊಡ್ಡ ಶ್ರೀಮಂತರಲ್ಲಿ ಒಬ್ಬರು. ಫೋರ್ಬ್ಸ್ ಸಹಿತ ಇವರಿಗೆ ಭಾರತದ ದೊಡ್ಡ ಶ್ರೀಮಂತನೆಂದೇ ಘೋಷಣೆ ಮಾಡಿದೆ. ಅಂದಾಗ ಸಿರಿವಂತರ ಮದುವೆ ಅಂದ ಮೇಲೆ ಕೇಳಬೇಕೆ, ಅದು ತುಂಬಾ ರಾಜ ವೈಭವದಲ್ಲಿಯೇ ಮದುವೆ ನಡೆಯುವದು ಎಂದಾಯಿತು. ಇಲ್ಲಿಯವರೆಗೆ ಮದುವೆಯ ದಿನಾಂಕದ ಬಗ್ಗೆಯಂತೂ ಯಾವುದೇ ಸುದ್ದಿ ಹೊರಬಿದ್ದಿಲ್ಲ, ಆದರೆ ಇಂಟರ್ನೆಟ್ ನಲ್ಲಿ ವೈರಲ್ ಆದ ಸುದ್ದಿಗಳ ಪ್ರಕಾರ ವಿಚಾರ ಮಾಡುವದಾದರೆ ಈ ಡಿಸೆಂಬರ್ ನಲ್ಲಿಯೇ ಮದುವೆ ನಡೆಯುವ ಸಾಧ್ಯತೆಗಳಿವೆ. ಅದಕ್ಕೂ ಮೊದಲು ಈ ಆಮಂತ್ರಣ ಪತ್ರಿಕೆಯ ಚರ್ಚೆಗಳೇ ತುಂಬಾ ನಡೆದಿವೆ.

ಮುಕೇಶ್ ಅಂಬಾನಿಯವರ ಮಗನಾದ ಆಕಾಶ್ ಅಂಬಾನಿಯ ಕಾರ್ಡಿನ ಬೆಲೆಯ ಬಗ್ಗೆ ನಾವು ಯಾವುದೇ ದಾವೆ ಮಾಡುತ್ತಿಲ್ಲ, ಆದರೆ ಸುದ್ದಿಮೂಲಗಳ ಪ್ರಕಾರ ಹೇಳುವದಾದರೆ ಆಕಾಶ್ ಅಂಬಾನಿಯು ಇಷ್ಟ ಪಟ್ಟಿರುವ ಕಾರ್ಡಿನ ಬೆಲೆ ಸುಮಾರು ಎರಡೂವರೆ ಲಕ್ಷ ಎನ್ನುವ ಸುದ್ದಿ ತಿಳಿದು ಬಂದಿದೆ.

ಅಷ್ಟೇ ಅಲ್ಲ ಆ ಕಾರ್ಡಿನಲ್ಲಿ ಬಂಗಾರದ ಉಪಯೋಗದ ಜೊತೆಗೆ ಸುಂದರವಾದ ನಕ್ಷೆಯ ಕೆಲಸವನ್ನು ಸಹ ಮಾಡಿದ್ದಾರೆನ್ನಲಾಗಿದೆ. ಹಾಗಾದರೆ ಈ ಕಾರ್ಡನ್ನು ಪಡೆಯುವ ವ್ಯಕ್ತಿ ಭಾಗ್ಯವಂತ ಅಷ್ಟೇ ಅಲ್ಲ ಧನವಂತನು ಸಹಿತ ನಾಗುವನು ಎನ್ನಬಹುದು.

Leave a Reply

Your email address will not be published. Required fields are marked *