ಇಲ್ಲಿ ಸರಕಾರ ಮಲಗುವದಕ್ಕೆ ಕೊಡುತ್ತಿದೆ 22 ಕೋಟಿ ರೂಪಾಯಿ!

ಇಲ್ಲಿ ಸರಕಾರ ಮಲಗುವದಕ್ಕೆ ಕೊಡುತ್ತಿದೆ 22 ಕೋಟಿ ರೂಪಾಯಿ!

 

 

ಇದೊಂದು ಇಂಥ ದೇಶವಾಗಿದೆ ಎಂದರೆ ಇಲ್ಲಿಯ ಜನರು ಇಷ್ಟೊಂದು ಕೆಲಸ ಮಾಡುವರೆಂದರೆ ಅವರಿಗೆ ಪರಿಪೂರ್ಣವಾಗಿ ಮಲಗಲು ಸಹ ಪರ್ಯಾಪ್ತ ಸಮಯ ಸಿಗುವದಿಲ್ಲ. ಈ ಒಂದು ಕಾರಣದಿಂದ ಜಪಾನ್ ದೇಶ ಇಂದು ಜಗತ್ತಿನಲ್ಲಿಯೇ ಆರ್ಥಿಕ ದೃಷ್ಟಿಯಿಂದ ಮೂರನೆಯ ಸ್ಥಾನದಲ್ಲಿದೆ. ಜಪಾನ್ ಸರಕಾರ ಜಾರಿಯಲ್ಲಿ ತಂದಿದ್ದ ‘ ಡೆತ್ ಫಾರ್ ಓವರವರ್ಕ್’ ಎಂಬ ಶ್ವೇತ ಪತ್ರಿಕೆಯ ಮುಖಾಂತರ, ಕಳೆದ ಕೆಲವು ವರ್ಷಗಳಲ್ಲಿ ಈ ಪ್ರಕಾರವಾಗಿ ಮಾಡುತ್ತಿರುವ ಕೆಲಸದ ಒತ್ತಡದ ಕಾರಣದಿಂದಾಗಿ ಜನರ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಿದೆ ಎಂದು ಹೇಳಿದೆ.

ಇಲ್ಲಿ ಕೆಲಸಗಾರರು ಫುಲ್ ಟೈಮ್ ಜಾಬ್ ಮಾಡುತ್ತಾರಂತೆ.
ಇಲ್ಲಿ ಪ್ರತಿಶತ ಅರ್ಧಕ್ಕಿಂತ ಹೆಚ್ಚು ಕೆಲಸಗಾರರು ಫುಲ್ ಟೈಂ ಜಾಬ್ ಮಾಡುತ್ತಾರೆ. ತಮಗೆ ಪರಿಪೂರ್ಣ ನಿದ್ರೆ ಮಾಡಲು ಕೂಡಾ ಸಮಯ ಸಿಗುವದಿಲ್ಲ ಎಂಬುದು ಈ ಕೆಲಸಗಾರರ ಅಭಿಪ್ರಾಯವಾಗಿದೆ. ಸರಕಾರವು ಜಾರಿಯಲ್ಲಿ ತಂದ ಶ್ವೇತ ಪತ್ರಿಕೆಯ ಕಾನೂನು ಮೂಲಕ ಇಲ್ಲಿಯ ಜನರಿಗೆ ರೆಸ್ಟ್ ತೆಗೆದುಕೊಳ್ಳುವ ಸಲುವಾಗಿ ಸಮಯ ತುಂಬಾ ಕಡಿಮೆ ದೊರೆಯುತ್ತದೆ. ಈ ಸಮಸ್ಯೆಯ ಕುರಿತು ಸರಕಾರವು ಒಂದು ಸರ್ವೇ ಮಾಡಿದೆ. ಅದರಲ್ಲಿ ಸುಮಾರು 1700 ಕಂಪನಿಗಳಲ್ಲಿ ಕೇವಲ 2 ಪ್ರತಿಶತ ಕಂಪನಿಗಳು ಮಾತ್ರ ಕಾರ್ಮಿಕರಿಗೆ ಸಾಧಾರಣವಾಗಿ ರೆಸ್ಟ್ ಪಿರೇಡ್ ಕೊಡುತ್ತೆ. ಇವುಗಳ ಹೊರತು ಉಳಿದ ಎಲ್ಲ ಕಂಪನಿಗಳು ಸರಿಯಾಗಿ ರೆಸ್ಟ್ ಪಡೆಯಲು ಸಮಯ ಕೊಡುವದಿಲ್ಲವಂತೆ.

◆ಸರಕಾರ ಈ ಸಮಸ್ಯೆಯ ಕುರಿತು ಪರಿಹಾರ ಕಂಡು ಹಿಡಿದಿದೆ.
ಜಪಾನ್ ಸರಕಾರ ಈ ಒಂದು ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದೆ. ಅದು ಯಾವುದೆಂದರೆ ಸರಕಾರವು ಮುಂದಿನ ಆರ್ಥಿಕ ವರ್ಷದ ಸಲುವಾಗಿ ಸುಮಾರು 22 ಕೋಟಿ ರೂಪಾಯಿ ಸಂಪೂರ್ಣವಾಗಿ ಬೇರೆ ಮಾಡಿ ಇಟ್ಟಿದೆ. ಈ ಹಣವನ್ನು ಲಘು ಮತ್ತು ಮಧ್ಯಮ ವರ್ಗದ ಕಂಪನಿಗಳ ಸಲುವಾಗಿ, ಸಾಮಾನ್ಯವಾಗಿ ರೆಸ್ಟ್ ಪಿರಿಯಡ್ ತೆಗೆದುಕೊಳ್ಳವ ಸಂಬಂಧವಾಗಿ ಪ್ರೋತ್ಸಾಹ ಧನ ನೀಡಲಾಗುವದಂತೆ.

ಇಂಥ ಒಂದು ಪ್ರೋಗ್ರಾಮ್ ಮುಖಾಂತರ ಸರಕಾರ ಪ್ರತಿ ಕಂಪನಿಗೆ 5 ಲಕ್ಷ ಯೆನ್( ಸುಮಾರು 30 ಲಕ್ಷ ರೂಪಾಯಿ) ಕೊಡುತ್ತದೆ. ಇದರ ಹಿಂದಿನ ಉದ್ದೇಶವೇನೆಂದರೆ ಕಂಪನಿಗಳು ಕೆಲಸಗಾರರ ನಿಯಮ, ಟ್ರೇನಿಂಗ್ ಮತ್ತು ಸಾಫ್ಟವೇರ್ ಗಳ ಅಪಡೆಟ್ ಮಾಡಬೇಕೆಂಬುದು ಸರಕಾರದ ಊಹೆಯಾಗಿದೆ. ಇದರಿಂದ ಅವರ ಕಷ್ಟವು ಸಹ ಕಡಿಮೆಯಾಗುವದರ ಜೊತೆಗೆ ಕೆಲಸಗಾರರಿಗೆ ವಿಶ್ರಾಂತಿ ದೊರೆಯುವದು ಎಂಬುದು ಇದರ ಇನ್ನೊಂದು ಉದ್ದೇಶವಾಗಿದೆ.

1 Comment

Leave a Reply

Your email address will not be published. Required fields are marked *