ರಾತ್ರಿ ಪೂರ್ತಿ ನೀರಿನಲ್ಲಿ ಬಾದಾಮಿ ನೆನೆಸಿಟ್ಟು ಮುಂಜಾನೆ ತಿಂದರೆ ಏನಾಗುತ್ತದೆ ಗೊತ್ತಾ? ಶಾಕ್ ಆಗ್ತೀರಾ!

ರಾತ್ರಿ ಪೂರ್ತಿ ನೀರಿನಲ್ಲಿ ಬಾದಾಮಿ ನೆನೆಸಿಟ್ಟು ಮುಂಜಾನೆ ತಿಂದರೆ ಏನಾಗುತ್ತದೆ ಗೊತ್ತಾ? ಶಾಕ್ ಆಗ್ತೀರಾ!

 

 

ಬಾದಾಮಿಯನ್ನು ನಾವು ಮೊದಲಿನಿಂದಲೂ ಆರೋಗ್ಯದ ದೃಷ್ಟಿಯಿಂದ ವರದಾನ ಎಂದು ಗುರುತಿಸಲಾಗುತ್ತದೆ. ಅದೇ ಪ್ರಕಾರ ರಾತ್ರಿಪೂರ್ತಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಮುಂಜಾನೆ ಅದನ್ನು ತಿಂದರೆ ಅದರ ಲಾಭ ಇನ್ನಷ್ಟು ಹೆಚ್ಚಳವಾಗುತ್ತದೆ. ಬಾದಾಮಿನಲ್ಲಿ ಇರುವಂತ ಮಿನಿರಲ್ಸ್, ವಿಟಾಮಿನ್ಸ್ ಮತ್ತು ಡಾಯಟರಿ ಫಾಯಬರ್ ನಮ್ಮ ಬುದ್ಧಿಯನ್ನು ಚುರುಕು ಗೊಳಿಸುವದರ ಜೊತೆಗೆ ಶರೀರಕ್ಕೆ ತುಂಬಾ ಉಪಾಯಕಾರಿಯಾಗಿದೆ. ನೆನೆಸಿದ ಬದಾಮಿ ಪಚನಕ್ರಿಯಾ ಸಲುವಾಗಿ ತುಂಬಾ ಲಾಭದಾಯಕವಾಗಿದೆ.

ನೀರಿನಲ್ಲಿ ನೆನೆದ ಬಾದಾಮಿ ಸೇವನೆ ಮಾಡುವುದರಿಂದ ಆಗುವ ಲಾಭಗಳು ತಿಳಿದುಕೊಳ್ಳಿ

1) ರಕ್ತದೊತ್ತಡ ಮೇಲೆ ನಿಯಂತ್ರಣ:-


ಕೆಲವು ದಿವಸಗಳ ಹಿಂದೆ ನಡೆಸಲಾದ ಸಂಶೋಧನೆಯಪ್ರಕಾರ, ಬಾದಾಮಿ ತಿನ್ನುವದರಿಂದ ರಕ್ತದಲ್ಲಿ ಅಲ್ಪಾ ಟೊಕೋ ಫೆರಾಲ್ ದ ಪ್ರಮಾಣ ಹೆಚ್ಚಿಸುತ್ತದೆ, ಅದು ಯಾವುದೇ ರಕ್ತದೊತ್ತಡ ಕಡಿಮೆ ಮಾಡುವ ಸಲುವಾಗಿ ಮಹತ್ವಪೂರ್ಣ ವಾಗಿದೆ.

2) ಸಂಧಿವಾತ ಮೇಲೆ ನಿಯಂತ್ರಣ:-


ರಾತ್ರಿಯಲ್ಲಿ ನೆನೆಸಿಟ್ಟ ಬಾದಾಮಿ ಮುಂಜಾನೆ ಸೇವನೆ ಮಾಡುವದರಿಂದ ಯಾವ ವ್ಯಕ್ತಿ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುತ್ತಾರೋ ಅಂಥ ಸಮಸ್ಯೆ ದೂರ ಅಥವಾ ಕಡಿಮೆ ಮಾಡಲು ಸಹಾಯವಾಗುತ್ತದೆ. ಊಟವಾದ ನಂತರ ಬದಾಮ ತಿನ್ನುವುದರಿಂದ ಸಕ್ಕರೆ ರೋಗ ಹೆಚ್ಚಾಗುವದನ್ನು ತಡೆಗಟ್ಟಲು ಉಪಾಯಕಾರಿಯಾಗಿದೆ. ಇದರಿಂದ ಸಂಧಿವಾತ ರೋಗ ಬರುವದನ್ನು ತಡೆಗಟ್ಟುತ್ತದೆ.

3) ಸ್ಥೂಲಕಾಯತೆ ಕಡಿಮೆ ಮಾಡುತ್ತದೆ:-


ನೆನೆಸಿದ ಬಾದಾಮಿ ಆಂಟಿ ಆಕ್ಸಿಡೆಂಟ್ ದ ಸ್ತೋತ್ರವಾಗಿದೆ. ಇದರಲ್ಲಿ ಇರುವಂತಹ ಮೋನಿಯನ್ ಸ್ಯಾಚುರೇಟೆಡ್ ಫ್ಯಾಟ್ ನಿಮ್ಮ ಹಸಿವಿನ ಮೇಲೆ ನಿಯಂತ್ರಣ ವಿಡುತ್ತದೆ. ಆ ಕಾರಣದಿಂದಾಗಿ ನಮ್ಮ ದೇಹದ ತೂಕ ಕಡಿಮೆ ಮಾಡಲು ತುಂಬಾ ಲಾಭದಾಯಕವಾಗಿದೆ.

4) ಹೃದಯ ಆರೋಗ್ಯಕರ ವಾಗಿಡುತ್ತದೆ:-


ಒಂದು ವೇಳೆ ನೀವು ಹೃದಯದ ಕುರಿತು ಯಾವುದೇ ಪ್ರಕಾರದ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಆಹಾರದಲ್ಲಿ ನೆನೆಸಿಟ್ಟ ಬದಾಮಿ ಬೇಕೇ ಬೇಕು ಇದರಿಂದ ಸಮಸ್ಯೆ ದೂರ ಮಾಡಲು ಅನುಕೂಲ ವಾಗುತ್ತದೆ.

5) ತ್ವಚೆಯನ್ನು ತೇಜಸ್ವಿಯಾಗಿಡುತ್ತದೆ:-


ನೀವು ದಿನನಿತ್ಯ ನೆನೆದ ಬದಾಮಿಯನ್ನು ತಿಂದರೆ ನಿಮ್ಮಲ್ಲಿ ಯಾವುದೇ ಪ್ರಕಾರದ ಅಶಕ್ತತೆ ಇರುವದಿಲ್ಲ ಮತ್ತು ತ್ವಚೆಯ ಮೇಲೆ ರಂಧ್ರಗಳು ಸಹ ಬರುವುದಿಲ್ಲ. ಇದರಲ್ಲಿ ವಿಟಾಮಿನ್ E ಬಹಳಷ್ಟು ಪ್ರಾಮಾಣದಲ್ಲಿ ಇರುವದರಿಂದ ನಮಗೆ ತರುಣ ರಾಗಿ ಕಾಣಲು ಸಹಾಯವಾಗುತ್ತದೆ.

6) ಬುದ್ಧಿಯನ್ನು ಚುರುಕಾಗಿಸುತ್ತದೆ:-


ಬಾದಾಮಿಯ 5-7 ತುಣುಕನ್ನು ಬೆಳೆಯುವ ಮಕ್ಕಳಿಗೆ ಅವಶ್ಯಕವಾಗಿ ಕೊಡಬೇಕು. ಏಕೆಂದರೆ ಇದರಿಂದ ಅವರ ಬುದ್ಧಿಗೆ ಚಾಲನೆ ದೊರೆಯುವದು ಜೊತೆಗೆ ರೋಗಪ್ರತಿಕಾರಕ ಕ್ಷಮತೆಯಲ್ಲಿ ಹೆಚ್ಚಳವಾಗುವದು. ಇದರಿಂದ ಅನಾರೋಗ್ಯ ಬರುವ ಪ್ರಮಾಣ ಕಡಿಮೆ ಮಾಡುತ್ತದೆ.

Leave a Reply

Your email address will not be published. Required fields are marked *