ಊಟ ಮಾಡುವಾಗ ಅಥವಾ ಊಟ ಮುಗಿದ ತಕ್ಷಣ ನೀರು ಕುಡಿಯುತ್ತಿದ್ದರೆ ಎಚ್ಚರ! ಏನಾಗುತ್ತದೆ ಗೊತ್ತಾ?

ಊಟ ಮಾಡುವಾಗ ಅಥವಾ ಊಟ ಮುಗಿದ ತಕ್ಷಣ ನೀರು ಕುಡಿಯುತ್ತಿದ್ದರೆ ಎಚ್ಚರ! ಏನಾಗುತ್ತದೆ ಗೊತ್ತಾ?

 

 

ಊಟದ ಜೊತೆಗೆ ನೀರು ಕುಡಿಯುವದು ಅಮೃತಕ್ಕೆ ಸಮಾನವೋ ಅಥವಾ ವಿಷಕ್ಕೆ ಸಮಾನ ಎಂಬುದು ತಿಳಿದುಕೊಳ್ಳುವದು ತುಂಬಾ ಮಹತ್ವದ ಸಂಗತಿಯಾಗಿದೆ. ನಮ್ಮ ಆಹಾರ ಸರಿಯಾಗಿ ಪಚನವಾಗುತ್ತದೆ ಇಲ್ಲವೋ? ಮತ್ತು ಯಾವ ಕಾರಣದಿಂದ ಊಟವಾದ ನಂತರ ತಕ್ಷಣ ನೀರು ಕುಡಿಯಬಾರದು? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಅದರಂತೆ ಅದರ ಮೇಲಿನ ಉಪಾಯವು ಸಹ ಈ ಲೇಖನದಲ್ಲಿದೆ ಓದಿ ತಿಳಿದುಕೊಳ್ಳಿ.

ಊಟವಾದ ನಂತರ ತಕ್ಷಣ ನೀರು ಕುಡಿಯುವದೆಂದರೆ ವಿಷಕ್ಕೆ ಸಮಾನ:-
ಆಯುರ್ವೇದದ ಪ್ರಕಾರ ಊಟ ಮುಗಿಸಿದ ತಕ್ಷಣ ನೀರು ಕುಡಿಯುವದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಆಯುರ್ವೇದದಲ್ಲಿ ಊಟವಾದ ನಂತರ ನೀರು ಕುಡಿಯುವದು ವಿಷಕ್ಕೆ ಸಮಾನ. ಊಟವಾದ ಬಳಿಕ ನೀರು ಕುಡಿಯುವದರಿಂದ ನಮ್ಮ ಪಚನಕ್ರೀಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಊಟ ಮಾಡುವ ಮುನ್ನ ಅರ್ಧ ಗಂಟೆ ಮೊದಲು ಮತ್ತು ಉಟವಾದ ಮೇಲೆ ಅರ್ಧ ಗಂಟೆಯ ನಂತರ ನೀರು ಕುಡಿಯಬೇಕು.

ಊಟ ಮಾಡುವ ಸಮಯದಲ್ಲಿ ಅಥವಾ ಊಟವಾದ ತಕ್ಷಣ ನೀರು ಕುಡಿಯುವುದರಿಂದ ಏನಾಗುತ್ತದೆ ತಿಳಿದುಕೊಳ್ಳಿ.

ನಾವು ದೈನಂದಿನ ಆಹಾರದಲ್ಲಿ ಬೇಳೆ, ಕಾಯಿಪಲ್ಲೆಗಳು, ಚಪಾತಿ, ಮೊಸರು, ಹಾಲು , ಮಜ್ಜಿಗೆ, ಹಣ್ಣು ಹಂಪಲು ಮುಂತಾದವುಗಳನ್ನು ನಾವು ಊಟದ ಸಮಯದಲ್ಲಿ ಸೇವನೆ ಮಾಡುತ್ತೇವೆ. ಇವೆಲ್ಲ ನಮ್ಮ ಶರೀರಕ್ಕೆ ಶಕ್ತಿ ಕೊಡುತ್ತವೆ. ಈ ಆಹಾರದಿಂದ ಶಕ್ತಿ ನಿರ್ಮಾಣವಾಗಬೇಕಾದರೆ ಹಲವಾರು ಪ್ರಕ್ರಿಯೆಗಳು ನಮ್ಮ ಉದರದಲ್ಲಿ ನಡೆಯುತ್ತವೆ ಎಂಬುದು ನಾವು ವಿಜ್ಞಾನದಲ್ಲಿ ಕಲಿತಿದ್ದೇವೆ. ನಾವು ಸೇವನೆ ಮಾಡಿದ ಆಹಾರ ಮೊದಲು ಜಠರದಲ್ಲಿ ಪ್ರವೇಶ ಮಾಡುತ್ತದೆ. ಅಂದರೆ ಜಠರ ಇದೊಂದು ಚೀಲದ ಹಾಗೆ ಇರುತ್ತದೆ. ನಾವು ಸೇವಿಸಿದ ಆಹಾರ ಮೊದಲು ಇದರಲ್ಲಿ ಸಂಗ್ರಹವಾಗುತ್ತದೆ. ಇದು ತುಂಬಾ ಚಿಕ್ಕದಾಗಿರುತ್ತದೆ. ಅಂದರೆ ಇದರಲ್ಲಿ ಹೆಚ್ಚೆಂದರೆ 350 ಗ್ರಾಮ್ ನಷ್ಟು ಆಹಾರ ಸಂಗ್ರಹವಾಗುತ್ತದೆ.

ನಾವು ಸೇವನೆ ಮಾಡಿದ ಆಹಾರ ಜಠರಿನಲ್ಲಿ ಪ್ರವೇಶ ಮಾಡುತ್ತದೆ. ಜಠರಿನಲ್ಲಿ ಅಗ್ನಿ ನಿರ್ಮಾಣವಾಗುತ್ತದೆ ಅದಕ್ಕೆ ” ಗ್ಯಾಸ್ಟ್ರೋನಾಮಿಕ್” ಎಂದು ಕರೆಯುತ್ತಾರೆ. ಈ ಪ್ರಕ್ರಿಯೆ ನಾವು ತಿನ್ನುವ ಆಹಾರದ ಮೊದಲನೆಯ ತುತ್ತಿನಿಂದ ಪ್ರಾರಂಭವಾಗುತ್ತದೆ. ಈ ಉಷ್ಣತೆಯಿಂದ ನಮ್ಮ ಆಹಾರ ಪಚನ ವಾಗಲು ಪ್ರಾರಂಭವಾಗುತ್ತದೆ. ನಾವು ಊಟ ಮಾಡುವವರೆಗೆ ಇದರ ಕಾರ್ಯ ಚಾಲ್ತಿಯಲ್ಲಿರುತ್ತದೆ. ಅಂಥ ಸಂದರ್ಭದಲ್ಲಿ ನಾವು ನೀರು ಕುಡಿದರೆ ನಿರ್ಮಾಣವಾದ ಗ್ಯಾಸ್ಟ್ರೋನಾಮಿಕ್ ತಂಪು ಗೊಳ್ಳುತ್ತದೆ ಅಥವಾ ಉಷ್ಣತೆ ಕಡಿಮೆ ಮಾಡುತ್ತದೆ. ಇದರಿಂದ ನಮ್ಮ ಅನ್ನಪಚನದ ಪ್ರಕ್ರಿಯೆಯ ಮೇಲೆ ಅಡಚಣೆ ಉಂಟು ಮಾಡುತ್ತದೆ.

ನಾವು ಗಮನವಿಡಬೇಕಾದ ಸಂಗತಿ ಏನೆಂದರೆ ಆಹಾರ ಸೇವನೆ ಮಾಡಿದ ನಂತರ ಹೊಟ್ಟೆಯಲ್ಲಿ ಎರಡು ಕ್ರಿಯೆ ನಡೆಯುತ್ತವೆ ಅವು ತುಂಬಾ ಮಹತ್ವಾದ್ದಾಗಿವೆ. ಮೊದಲನೆಯದು “Digestion”(ಪಚನಕ್ರಿಯಾ) ಮತ್ತು ಎರಡನೆಯದಾಗಿ “Fermentation”(ಆಹಾರದ ಕೊಳೆತುಕೊಳ್ಳುವಿಕೆ).

ಆಯುರ್ವೇದದ ಪ್ರಕಾರ ನಮ್ಮ ಹೊಟ್ಟೆಯಲ್ಲಿ ಜ್ವಾಲೆ ನಿರ್ಮಾಣವಾದರೆ ಮಾತ್ರ ಆಹಾರ ಪಚನವಾಗುತ್ತದೆ. ಮತ್ತು ಅದರಿಂದ ರಸ ನಿರ್ಮಾಣವಾಗುವದು. ಈ ರಸದಿಂದ ಮಾಂಸ, ಮಜ್ಜಾತಂತು, ರಕ್ತ, ವಿರ್ಯ, ಅಸ್ಥಿ, ಮಲ, ಮೂತ್ರ ಮತ್ತು ಎಲುಬುಗಳ ರಚನೆಯಾಗುತ್ತವೆ. ಮತ್ತು ಎಲ್ಲಕ್ಕಿಂತ ಕೊನೆಗೆ ಅದರಿಂದ ಫ್ಯಾಟ್ ತಯಾರಾಗುತ್ತದೆ. ಇವೆಲ್ಲವುಗಳ ನಿರ್ಮಾಣ ಆಹಾರ ಪಚನದಿಂದ ಆಗುತ್ತದೆ. ಒಂದು ವೇಳೆ ಆಹಾರ ಪಚನ ವಾಗದಿದ್ದರೆ ಶರೀರದಲ್ಲಿ ಯಾವುದೇ ಪ್ರಕಾರದ ಮೇಲಿನ ಸಂಗತಿಗಳು ತಯಾರಾಗುವದಿಲ್ಲ. ನಮ್ಮ ಶರೀರದಲ್ಲಿ ಅನ್ನ ಕೊಳೆಯುತ್ತದೆ. ಇದರಿಂದ ಹೊಟ್ಟೆಯಲ್ಲಿ ವಿಷದ ನಿರ್ಮಾಣವಾಗುವದು. ಅದು ಅಂದರೆ ಯೂರಿಕ್ ಆಸಿಡ್(uric acid). ಎಷ್ಟೋ ಬಾರಿ ನೀವು ಮೊಳಕಾಲು, ಮೊಳಕೈ ಮತ್ತು ಬೆನ್ನು ನೋವಾದಾಗ ಡಾಕ್ಟರ್ ಹತ್ತಿರ ಹೋಗಿರಬಹುದು.
ಆಗ ಡಾಕ್ಟರ ನಿಮ್ಮ ಯೂರಿಕ್ ಆಸಿಡ್ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಅದರ ಸಲುವಾಗಿ ವಿವಿಧ ಪ್ರಕಾರದ ಔಷಧಿಗಳನ್ನು ಬರೆದು ಕೊಡುತ್ತಾರೆ. ಇದಲ್ಲದೆ ಅನ್ನ ಸರಿಯಾಗಿ ಪಚನವಾಗದಿದ್ದಲ್ಲಿ ಇನ್ನೊಂದು ವಿಷ ಪದಾರ್ಥ ನಿರ್ಮಾಣವಾಗುವದು, ಅದಕ್ಕೆ LDL( Low Density Lipoprotine) ಎಂದು ಕರೆಯುತ್ತಾರೆ. ಅಂದರೆ ಕೆಟ್ಟ ಕೊಲೆಸ್ಟ್ರಾಲ್(cholesterole).

ನೀವು ಯಾವಾಗ ರಕ್ತದೊತ್ತಡ(BP) ಪರೀಕ್ಷೆ ಮಾಡಿಕೊಳ್ಳಲು ಡಾಕ್ಟರ್ ಕಡೆಗೆ ಹೋದಾಗ ಬಿಪಿ ಹೆಚ್ಚು ಕಡಿಮೆ ಎಂದು ಹೇಳುತ್ತಾರೆ. ಅದರ ಕಾರಣ ಕೇಳಿದಾಗ ಕೊಲೆಸ್ಟ್ರಾಲ್ ಮಟ್ಟ ತುಂಬಾ ಜಾಸ್ತಿಯಾಗಿದೆ ಎಂದು ಹೇಳುವರು.
ಕೊಲೆಸ್ಟ್ರಾಲ್ ಯಾವ ಪ್ರಕಾರದ ಇರುತ್ತದೆ ಎಂದು ಕೇಳಿದಾಗ ಅವರು LDL ಕುರಿತು ಹೇಳುವರು. ಇದಕ್ಕಿಂತ ತುಂಬಾ ಅಪಾಯಕಾರಿ ಇನ್ನೊಂದು ವಿಷವಿದೆ. ಅದೇ VLDL(Very Low Density Lipoprotive). ಇದು ಕೂಡಾ ಕೊಲೆಸ್ಟ್ರಾಲ್ ಹಾಗೆ ಅಪಾಯಕಾರಿಯಾಗಿದೆ. ಒಂದು ವೇಳೆ ನಿಮ್ಮ ಶರೀರದಲ್ಲಿ VLDL ಮಟ್ಟ ಹೆಚ್ಚಾಯಿತೆಂದರೆ ನಿಮ್ಮನ್ನು ದೇವರು ಕೂಡಾ ಬದುಕಿಸಲು ಸಾಧ್ಯವಿಲ್ಲ.

 

ತಿಂದ ಅನ್ನವು ಕೆಟ್ಟನಂತರ ಅದರಿಂದ ಅನೇಕ ಪ್ರಕಾರದ ವಿಷನಿರ್ಮಾಣ ವಾಗುತ್ತವೆ. ಅದರಲ್ಲಿ ಇನ್ನೊಂದು ಎಂದರೆ ಅದಕ್ಕೆ ಇಂಗ್ಲೀಷನಲ್ಲಿ “Triglycerides” ಎಂದು ಕರೆಯುತ್ತಾರೆ. ಯಾವಾಗ ವೈದ್ಯರು ನಿಮ್ಮ ಶರೀರದಲ್ಲಿ “Triglycerides” ಹೆಚ್ಚಾಗಿದೆ ಹೇಳುತ್ತಾರೋ ಆವಾಗ ನಿಮ್ಮ ಶರೀರದಲ್ಲಿ ವಿಷ ನಿರ್ಮಾಣ ವಾಗಿದೆ ಎಂದು ತಿಳಿದುಕೊಳ್ಳಿ.

ಈ ಪ್ರಕಾರದ ವಿಷ ನಿರ್ಮಾಣವಾಗುವದನ್ನು ನಿಯಂತ್ರಣದಲ್ಲಿಡಬೇಕಾದರೆ ನಾವು ಊಟಮಾಡುವದಕ್ಕಿಂತ ಅರ್ಧ ಗಂಟೆ ಮೊದಲು ಮತ್ತು ಊಟವಾದ ಅರ್ಧ ಗಂಟೆ ನಂತರ ನೀರು ಕುಡಿಯಬೇಕು. ಇದರಿಂದ ಅನ್ನ ಪಚನ ಕ್ರಿಯೆ ಸರಿಯಾಗಿ ಆಗುತ್ತದೆ. ಅದರಿಂದ ಅನ್ನದ ಅಪವ್ಯಯವಾಗದೆ ನಮ್ಮ ಶರೀರಕ್ಕೆ ಉತ್ತಮವಾದ ಫಲಿತಾಂಶ ದೊರೆಯುವದು.

Leave a Reply

Your email address will not be published. Required fields are marked *