ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ತಿನ್ನುವದರಿಂದ ಏನಾಗುತ್ತದೆ ಗೊತ್ತಾ? ದಂಗಾಗಿ ಬಿಡುವಿರಿ!

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ತಿನ್ನುವದರಿಂದ ಏನಾಗುತ್ತದೆ ಗೊತ್ತಾ? ದಂಗಾಗಿ ಬಿಡುವಿರಿ!

 

 

ಒಂದು ವೇಳೆ ನಿಮಗೆ ತುಳಸಿ ಎಲೆ ಸೇವನೆಯಿಂದ ಆಗುವ ಲಾಭ ಗೊತ್ತಿರದಿದ್ದರೆ ಅದನ್ನುತಿನ್ನಲು ನೀವು ಇಂದೇ ಪ್ರಾರಂಭ ಮಾಡಿ. ಆದರೆ, ಒಂದು ಸಂಗತಿ ನೆನಪಿನಲ್ಲಿಡಿ. ತುಳಸಿ ಎಲೆ ಎಂದಿಗೂ ನಿಮ್ಮ ಹಲ್ಲಿನಿಂದ ತುಂಡು ಮಾಡಿ ತಿನ್ನದೆ ನೀರಿನ ಜೊತೆಗೆ ಅದನ್ನು ನುಂಗಬೇಕು. ಆಯುರ್ವೇದ ಮತ್ತು ನೈಸರ್ಗಿಕ ಉಪಚಾರ ಔಷಧಿಗಳಲ್ಲಿ ತುಳಸಿ ಎಲೆ ಹೆಚ್ಚು ಪ್ರಮಾಣದಲ್ಲಿ ಉಪಯೋಗ ಮಾಡಲಾಗುತ್ತದೆ. ಆದ್ದರಿಂದ ತುಳಸಿಯು ವನಸ್ಪತಿ ಔಷಧಿಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ತುಳಸಿ ವನಸ್ಪತಿಯ ಎಲೆಯ ಜೊತೆಗೆ ಅದರ ಹೂ ಕೂಡಾ ತುಂಬಾ ಉಪಯೋಗಕಾರಿಯಾಗಿದೆ.

ತುಳಸಿಯ ಸಸಿಯನ್ನು ಎಲ್ಲಕ್ಕಿಂತ ಪವಿತ್ರವೆಂದು ತಿಳಿಯಲಾಗುತ್ತದೆ. ಆದ್ದರಿಂದ ದಿನಾಲು ಅದರ ಪೂಜೆ ಮಾಡುತ್ತಾರೆ. ಯಾವ ಮನೆಯಲ್ಲಿ ತುಳಸಿಯ ಸಸಿ ಇರುವದಿಲ್ಲವೊ, ಆ ಮನೆಯಲ್ಲಿ ದೇವರು ಸಹ ನಿಲ್ಲಲು ಇಚ್ಛಿಸುವದಿಲ್ಲ ಎಂಬುದು ಹಿಂದಿನಿಂದ ಬಂದ ಒಂದು ಮಾತಾಗಿದೆ. ಮನೆಯಲ್ಲಿ ತುಳಸಿಯ ಸಸಿ ಹಚ್ಚುವದರಿಂದ ರೋಗ ಮತ್ತು ದಾರಿದ್ರ್ಯ ದೂರಾಗುವದು. ತುಳಸಿ ಹಲವಾರು ಸಮಸ್ಯೆಗಳನ್ನು ಹೊಡೆದೋಡಿಸಲು ಸಹಾಯವಾಗುತ್ತದೆ. ಇನ್ನೊಂದು ಸಂಗತಿ ಏನೆಂದರೆ, ತುಳಸಿ ಎಲೆಯನ್ನು ಸಾಯಂಕಾಲ ಸಮಯದಲ್ಲಿ ಯಾವತ್ತೂ ಕಡಿಯಬಾರದು. ಇದರಿಂದ ನಮಗೆ ಸಮಸ್ಯೆ ನಿರ್ಮಾಣವಾಗುವ ಸಾಧ್ಯತೆ ಇರುತ್ತದಂತೆ.

ತುಳಸಿಯ ಎಲೆಗಳನ್ನು ನೀವು ಚಹಾ ಅಥವಾ ಹಾಲಿನಲ್ಲಿ ಮಿಶ್ರಣ ಮಾಡಿ ಸೇವನೆ ಮಾಡಿದರೆ ಅದರಿಂದಾಗುವ ಲಾಭಗಳನ್ನು ನಾವು ಊಹಿಸಲು ಸಾಧ್ಯವಾಗುವದಿಲ್ಲ, ನಮಗೆ ಅಷ್ಟೊಂದು ಲಾಭಗಳು ಆಗುವವು. ನಿಮ್ಮ ಶರೀರದಲ್ಲಿಯ ರೋಗಗಳನ್ನು ನಷ್ಟ ಮಾಡುವ ಶಕ್ತಿ ತುಳಸಿ ಎಲೆ ಹೊಂದಿದೆ.

ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವನೆ ಮಾಡುವುದರಿಂದ ಹಲವಾರು ಪ್ರಕಾರದ ಲಾಭಗಳು ಆಗುತ್ತವೆ. ಮುಂದಿನ ಹತ್ತು ಆರೋಗ್ಯದ ಸಮಸ್ಯೆಯ ಮೇಲೆ ಪರಿಹಾರ ಕಂಡುಕೊಳ್ಳಲು ತುಳಸಿ ಎಲೆ ಒಂದು ಉತ್ತಮ ಗುಣಮಟ್ಟದ ಔಷಧಿಯಾಗಿದೆ.

 

ನೆಗಡಿ:- ಖಾಲಿ ಹೊಟ್ಟೆಯಲ್ಲಿ ತುಳಸಿಯ ಎಲೆ ತಿನ್ನುವದರಿಂದ ನೆಗಡಿ ದೂರವಾಗುತ್ತವೆ.

ಮಾನಸಿಕ ಮತ್ತು ದೈಹಿಕ ಒತ್ತಡ:- ಹಾಲು ಮತ್ತು ತುಳಸಿ ಇವುಗಳ ಮಿಶ್ರಣ ಮಾಡಿ ಸೇವನೆ ಮಾಡುವುದರಿಂದ ನಮ್ಮ ರಕ್ತ ಸಂಚಲನ ಕ್ರಿಯೆ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ ಇದರಿಂದ ಮಾನಸಿಕ ಮತ್ತು ದೈಹಿಕ ಒತ್ತಡ ದೂರವಾಗುತ್ತದೆ.

ಕಿಡ್ನಿ ಸ್ಟೋನ್:– ಒಂದು ವೇಳೆ ನಿಮ್ಮ ಕಿಡ್ನಿಯಲ್ಲಿ ಸ್ಟೋನ್ ಸಮಸ್ಯೆ ಹೊಂದಿದ್ದರೆ, ತುಳಸಿ ಮಿಶ್ರಿತ ಹಾಲು ಸೇವನೆ ಮಾಡಿ. ಇದರಿಂದ ಹರಳು ಸಾವಕಾಶವಾಗಿ ಕರಗಲು ಪ್ರಾರಂಭಿಸುತ್ತದೆ.

ತಲೆನೋವು:- ನಿಮಗೆ ದಿನಾಲು ತಲೆನೋವು ಉಂಟಾಗುತ್ತಿದ್ದರೆ, ತುಳಸಿ ಎಲೆ ಮತ್ತು ಹಾಲಿನ ಮಿಶ್ರಣ ದಿನಾಲು ಕುಡಿಯಿರಿ. ಹೀಗೆ ಮಾಡುವದರಿಂದ ತಲೆನೋವಿನಿಂದ ಮುಕ್ತಿ ಪಡೆಯಬಹುದು.

ಕಣ್ಣಿನ ಸಮಸ್ಯೆ:- ಕಣ್ಣಿನ ಸಮಸ್ಯೆಗಳ ಮೇಲೆ ತುಳಸಿಯ ಕರಿ ಎಲೆ ತುಂಬಾ ಪರಿಣಾಮಕಾರಿಯಾದ ಮಹತ್ವದ ಔಷಧಿಯಾಗಿದೆ. ತುಳಸಿಯ ಕರಿ ಎಲೆಯ(ಕೃಷ್ಣ ತುಳಸಿ) ರಸದ ಒಂದೆರಡು ಹನಿಗಳು ಕಣ್ಣಿನಲ್ಲಿ ಹಾಕಿಕೊಳ್ಳುವದರಿಂದ ಕಣ್ಣಿನ ಉರಿತ ಮತ್ತು ದೃಷ್ಟಿದೋಷ ಕಡಿಮೆ ಯಾಗಲು ಸಹಾಯವಾಗುತ್ತದೆ.

ತ್ವಚೆಯ ಸಮಸ್ಯೆ:– ತ್ವಚೆಯ ಮೇಲಿನ ಸಮಸ್ಯೆಗೆ ತುಳಸಿ ಎಲೆಯ ರಸ ತುಂಬಾ ಗುಣಾಕಾರಿಯಾಗಿದೆ.

ಶ್ವಸನ ರೋಗ:- ನಿಮಗೆ ಶ್ವಸನದ ಕುರಿತು ಯಾವುದೇ ಸಮಸ್ಯೆ ಇದ್ದರೆ, ತುಳಸಿ ಮಿಶ್ರಿತ ಹಾಲಿನ ಸೇವನೆ ಮಾಡಿ. ಈ ಹಾಲು ಕುಡಿಯುವದರಿಂದ ನಿಮಗೆ ಆ ಸಮಸ್ಯೆಯಿಂದ ಆರಾಮ ಸಿಗಬಹುದು.

ಗಂಟಲು ನೋವು:- ಬಿಸಿ ನೀರಿನಲ್ಲಿ ತುಳಸಿ ಎಲೆ ಹಾಕಿ ಆ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಇದರಿಂದ ಗಂಟಲು ನೋವು ದೂರಾಗುವದರ ಜೊತೆಗೆ ದಮ್ಮುಮತ್ತು ಬ್ರಾಂಕಾಯ್ಟಿಸ್ ಸಮಸ್ಯೆ ಮೇಲೆ ಕೂಡಾ ತುಂಬಾ ಉಪಾಯಕಾರಿಯಾಗಿದೆ.

ಹೃದಯಕ್ಕೇ ನಿರೋಗಿಯಾಗಿ ಇಡುತ್ತದೆ:- ಯಾವ ವ್ಯಕ್ತಿಗೆ ಹೃದಯ ರೋಗ ವಿರುತ್ತದೆಯೋ ಅವರು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ ಎಲೆ ಮಿಶ್ರಿತ ಹಾಲು ಕುಡಿಯಿರಿ ಇದರಿಂದ ಸಮಸ್ಯೆ ದೂರಾಗಬಹುದು.

ಸೊಳ್ಳೆ ಮತ್ತು ಇನ್ನಿತರ ಕೀಟಗಳ ಕಚ್ಚುವಿಕೆಯ ಮೇಲೆ ಮದ್ದು:- ಸೊಳ್ಳೆ ಮತ್ತು ತತ್ಸಮ ಕೀಟಗಳು ಕಚ್ಚುವದು ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ. ತುಳಸಿಯ ಗಿಡದ ಬೇರಿನ ಪೇಸ್ಟನ್ನು ಕಚ್ಚಿದ ಸ್ಥಳದಲ್ಲಿ ಹಚ್ಚಬೇಕು.

 

ಹಲ್ಲಿನ ಸಮಸ್ಯೆ:- ತುಳಸಿಯ ಎಲೆಯ ಪುಡಿಯನ್ನು ತಯಾರಿಸಿ ಅದನ್ನು ಸಾಸಿವೆ ಎಣ್ಣೆಯಲ್ಲಿ ಮಿಶ್ರಣ ಮಾಡಿ ಲೇಪನ ತಯಾರಿಸಿ. ಲೇಪನದಿಂದ ಹಲ್ಲು ತಿಕ್ಕಿಕೊಳ್ಳಿ ಇದರಿಂದ ಹಲ್ಲು ಮತ್ತು ದವಡೆ ನೋವು ಬೇಗನೆ ವಾಸಿಯಾಗುತ್ತದೆ.

Leave a Reply

Your email address will not be published. Required fields are marked *