ಕೇವಲ ಒಂದೇ ನಿಮಿಷದಲ್ಲಿ ತನ್ನ ಕೈಯಿಂದ 122 ತೆಂಗಿನಕಾಯಿ ಒಡೆದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರು ಗಿಟ್ಟಿಸಿಕೊಂಡ ವ್ಯಕ್ತಿ, ವಿಡಿಯೋ ನೋಡಿ 😳👇🏿👇🏿

ಕೇವಲ ಒಂದೇ ನಿಮಿಷದಲ್ಲಿ ತನ್ನ ಕೈಯಿಂದ 122 ತೆಂಗಿನಕಾಯಿ ಒಡೆದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರು ಗಿಟ್ಟಿಸಿಕೊಂಡ  ವ್ಯಕ್ತಿ, ವಿಡಿಯೋ ನೋಡಿ 😳👇🏿👇🏿

 

 

ನಯಿ ದೆಹಲಿ:- ತೆಂಗಿನಕಾಯಿ ಎಂದಾಗ ನೆನಪಿಗೆ ಬರುವದು ಅದರ ನೀರು ಮತ್ತು ತೆಂಗು. ತೆಂಗಿನಕಾಯಿ ಮರಕ್ಕೆ ನಾವು ಕಲ್ಪವೃಕ್ಷ ಎಂದು ಸಹ ಕರೆಯುತ್ತೇವೆ. ದೇವರಿಗೆ ಪ್ರಿಯವಾದದ್ದು ಅದಲ್ಲದೆ ಮನುಷ್ಯನಿಗೆ ಕೂಡಾ ತುಂಬಾ ಉಪಯೋಗಕಾರಿಯಾದದ್ದು. ತೆಂಗಿನಕಾಯಿ ಸುಲಿಯುವದು ಮತ್ತು ಅದನ್ನು ಒಡೆಯುವದು ತುಂಬಾ ಕಷ್ಟಕರವಾದ ಕೆಲಸ ವಾಗಿದೆ. ಇದರ ಸೊಪ್ಪೆ ಹೇಗೆ ತೆಗೆಯುವರು ಮತ್ತು ಹೇಗೆ ಒಡೆಯುವರು ಎಂಬುದು ಕೆಲವು ಜನರಿಗೆ ಮಾತ್ರ ಗೊತ್ತು. ತೆಂಗಿನಕಾಯಿ ದೇವರ ಮುಂದೆ ಒಡೆಯುವಾಗ ಪೂಜಾರಿಯು ಸಹ ಕಲ್ಲಿಗೆ ಎರಡು ಅಥವಾ ಮೂರು ವೇಳೆ ಹೊಡೆಯುತ್ತಾನೆ ಅಂದಾಗ ಮಾತ್ರ ತೆಂಗು ಎರಡು ತುಂಡಾಗುವದು. ಇಷ್ಟೊಂದು ಕಠಿಣವಾದ ತೆಂಗನ್ನು ಈತ ಒಂದು ನಿಮಿಷದಲ್ಲಿ ಒಂದಲ್ಲಾ ಎರಡಲ್ಲ ಬರೋಬರಿ 122 ತೆಂಗಿನಕಾಯಿ ತನ್ನ ಕೈಯಿಂದ ಒಡೆದು ಗಿನ್ನಿಸ್ ಬುಕ್ಕಿನಲ್ಲಿ ತನ್ನ ಹೆಸರನ್ನು ಗಿಟ್ಟಿಸಿಕೊಂಡಿದ್ದಾನೆ.

ಕೇರಳದಲ್ಲಿ ವಾಸಿಸುವ ಅಭಿಷೇಕ್ ಪಿ. ಡೊಮಿನಿಕ್ ಈತನು ತನ್ನ ಶಕ್ತಿಶಾಲಿ ಕೈಯಿಗಳಿಂದ ಒಂದು ನಿಮಿಷದಲ್ಲಿ 122 ತೆಂಗಿನಕಾಯಿ ಒಡೆದಿದ್ದಾರೆ. ಇದಕ್ಕಿಂತ ಮುಂಚೆ ಕೊಟ್ಟೆಯಮ್ ನಲ್ಲಿ ನೂರರಷ್ಟು ತೆಂಗಿನಕಾಯಿ ಒಡೆದಿದ್ದರಂತೆ. ಮೊನ್ನೆ ತಾನೆ ಕೇರಳ ನಲ್ಲಿ 122 ತೆಂಗಿನಕಾಯಿ ಕೇವಲ ಒಂದೇ ಒಂದು ನಿಮಿಷದಲ್ಲಿ ಒಡೆದು “ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ನಲ್ಲಿ ತಮ್ಮ ಹೆಸರನ್ನು ನೊಂದಿಸಿದ್ದಾರೆ.

ಅಭಿಷೇಕ್ ಅವರು ಇದಕ್ಕಿಂತ ಮೊದಲು 118 ತೆಂಗಿನಕಾಯಿಗಳು ಒಡದಿದ್ದರು. ಈಗ ತಮ್ಮ ರೆಕಾರ್ಡ್ ನ್ನು ತಾವೇ ಮುರಿದು ಮತ್ತೆ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಈ 122 ತೆಂಗಿನಕಾಯಿ ಒಡೆಯುವ ವಿಡಿಯೋ youtube ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ. ವಿಡಿಯೋ ದಲ್ಲಿ ಒಂದು ಸಣ್ಣ ಗೋಡೆಯ ಮೇಲೆ, ಒಂದೇ ಲೈನಿನಲ್ಲಿ ಸುಮಾರು 140 ತೆಂಗಿನಕಾಯಿಗಳು ಒಂದರ ನಂತರ ಒಂದು ಹೀಗೆ ಇಟ್ಟಿದ್ದಾರೆ. ಅದಲ್ಲದೆ ಅವರನ್ನು ಪ್ರೋತ್ಸಾಹಿಸಲು ಮತ್ತು ಸಾಹಸವನ್ನು ನೋಡಲು ಬದಿಯಲ್ಲಿ ಜನರು ತುಂಬಿಕೊಂಡಿದ್ದಾರೆ.ಅಭಿಷೇಕ್ ರವರು ತೆಂಗಿನಕಾಯಿ ಒಡೆಯಲು ಪ್ರಾರಂಭಿಸಿ ನೋಡು ನೋಡುವಸ್ಟರಲ್ಲಿ ಸುಮಾರು 122 ತೆಂಗಿನಕಾಯಿ ಒಡೆದಿದ್ದಾರೆ.


ಈ ಒಂದು ಸಾಹಸದ ಕುರಿತು ಅವರು ಹೇಳಿದ್ದೇನೆಂದರೆ, ” ನಾನು ನನ್ನದೇ ಆದ ರೆಕಾರ್ಡ್ ನ್ನು ಮುರಿಯಲು ಪ್ರಯತ್ನಿಸಿದ್ದೇನೆ. ನಾನು ಒಂದು ಪುಟ್ಟ ಹಳ್ಳಿಯಿಂದ ಬಂದವನು. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತಮ್ಮ ಹೆಸರಿರಬೇಕು ಎಂದು ಎಲ್ಲರೂ ಆಸೆ ಪಡುವ ಹಾಗೆ ನಂದು ಒಂದು ಆಸೆ ಇತ್ತು. ಆ ಒಂದು ನನ್ನ ಆಸೆ ಎಂದು ತೀರಿತು”. ಎಂದು ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ ಅವರ ಈ ಒಂದು ಸಾಹಸ ನಿಮಗೂ ನೋಡಬೇಕು ಎಂದೆನಿಸುತ್ತದೆ ಅಲ್ವಾ. ಹಾಗಿದ್ರೆ ಅವರ ಅತ್ಯುತ್ತಮ ಸಾಹಸದ ವಿಡಿಯೋ ಕೆಳಗೆ ಇದೆ ನೋಡಿ.

Leave a Reply

Your email address will not be published. Required fields are marked *