ರಾತ್ರಿ ಮಲಗುವ ಮುಂಚೆ ಕೇವಲ 5 ನಿಮಿಷ ಇದನ್ನು ಮಾಡಿ: ಇದರಿಂದಾಗುವ ಲಾಭಗಳು ಕೇಳಿದರೆ ಶಾಕ್ ಆಗ್ತೀರಾ!

ರಾತ್ರಿ ಮಲಗುವ ಮುಂಚೆ ಕೇವಲ 5 ನಿಮಿಷ ಇದನ್ನು ಮಾಡಿ: ಇದರಿಂದಾಗುವ ಲಾಭಗಳು ಕೇಳಿದರೆ ಶಾಕ್ ಆಗ್ತೀರಾ!

 

 

 

ನಾವು ಮಲಗುವ ಮುಂಚೆ ಅನೇಕ ಕಾರ್ಯಗಳನ್ನು ಮಾಡುತ್ತವೆ. ಅಂದರೆ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ಕೆಲಸ ಮಾಡಲೇ ಬೇಕು ಮಾಡದಿದ್ದರೆ. ನಿದ್ದೇನೆ ಬರುವದಿಲ್ಲ. ಅಂಥ ಕೆಲಸ ಯಾವುದೆಂದು ವಿಚಾರ ಮಾಡುತ್ತಿದ್ದೀರಾ? ಅದೇ ಮೊಬೈಲ್ ಮತ್ತು ಟಿ.ವಿ ಹೌದಲ್ಲ್ವಾ. ಇಂದಿನ ಪ್ರತಿಯೊಬ್ಬ ಮನುಷ್ಯ ಮೊಬೈಲ್ ಗೆ ಅಡಿಕ್ಟ್ ಆಗಿ ಬಿಟ್ಟಿದ್ದಾರೆ. ಒಂದು ದಿನದ ಊಟ ಇರದಿದ್ದರೆ ನಡೆಯುತ್ತೆ ಆದರೆ ಒಂದು ತಾಸು ಮೊಬೈಲ್ ನೋಡದಿದ್ದರೆ ಅವರ ಜೀವ ಕಳೆದುಕೊಂಡ ಹಾಗೆ ಭಾಸವಾಗುತ್ತದೆ.

ಇಂದು ನಾವು ನಿಮಗೆ ರಾತ್ರಿ ಮಲಗುವ ಮುಂಚೆ ಕೇವಲ ಐದು ನಿಮಿಷ ಎಣ್ಣೆಯಿಂದ ಕಾಲುಗಳ ಮಸಾಜ್ ಮಾಡುವದರಿಂದ ಆಗುವ ಲಾಭಗಳು ತಿಳಿಸುವವರಿದ್ದೇವೆ. ಕೇವಲ ಐದು ನಿಮಿಷದಲ್ಲಿ ಎಷ್ಟೆಲ್ಲ ಲಾಭಗಳು ಆಗುತ್ತವೆ ಅಂದರೆ ನಿಮಗೆ ನಂಬೋದಕ್ಕೆ ಆಗುವದಿಲ್ಲ.

◆  ಕಾಲುಗಳ ಮಸಾಜ್ ಮಾಡುವದರಿಂದಾಗುವ 5 ಲಾಭಗಳು ◆

 

1) ಶರೀರದಲ್ಲಿ ವ್ಯವಸ್ಥಿತವಾಗಿ ರಕ್ತಪ್ರವಾಹವಾಗುತ್ತದೆ:-

ಪೂರ್ಣ ದಿವಸ ಶೂಜ್ ಮತ್ತು ಬೇರೆ ಬೇರೆ ಪ್ರಕಾರದ ಪಾದರಕ್ಷೆಗಳನ್ನು ಧರಿಸುವದರಿಂದ ರಕ್ತ ಪ್ರಸರಣವು ಕಾಲಿನ ಕೆಳಭಾಗದ ವರೆಗೆ ಆಗುವದಿಲ್ಲ. ಈ ರಕ್ತ ಪ್ರವಾಹದಿಂದ ಉಳಿದ ಭಾಗದ ವರೆಗೆ ರಕ್ತಪ್ರಸಾರಣ ಮಾಡುವ ಸಲುವಾಗಿ ಕಾಲುಗಳ ಮಸಾಜ್ ಇದೊಂದು ಉತ್ತಮ ಉಪಾಯವಾಗಿದೆ. ಮಲಗುದವಕ್ಕಿಂತ ಮುಂಚೆ ಸುಮಾರು 20 ರಿಂದ 25 ನಿಮಿಷಗಳ ವರೆಗೆ ಕಾಲು ಮತ್ತು ಅಂಗಾಲುಗಳಿಗೆ ಮಸಾಜ್ ಮಾಡುವದರಿಂದ ಕಾಲಿನ ಕೊನೆಯ ಭಾಗದವರೆಗೆ ರಕ್ತ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತದೆ. ಇದು ಮಧುಮೇಹ ರೋಗದಿಂದ ಅಂಗಾಲುಗಳ ಅಸ್ವಸ್ಥತೆ ಸಮಸ್ಯೆ ಹೊಂದಿರುವವರಿಗೆ ತುಂಬಾ ಲಾಭದಾಯಕ ವಾಗಿದೆ.

 

 2) ಒಳ್ಳೆಯ ನಿದ್ರೆ ಬರುತ್ತದೆ:-

ಇಂದಿನ ವೇಗದ ಜೀವನ ಶೈಲಿಯಲ್ಲಿ ಪೂರ್ಣ ದಿವಸ ಕೆಲಸ ಮಾಡುತ್ತ ಮಾಡುತ್ತಾ ಸಾಯಂಕಾಲ ವಾಗುವವರೆಗೆ ನಮ್ಮ ಮೆದುಳು ತುಂಬಾ ಸುಸ್ತಾಗಿ ಬಿಡುತ್ತದೆ. ಈ ಕಾರಣದಿಂದ ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಬರುವದಿಲ್ಲ. ಅದಲ್ಲದೆ ರಾತ್ರಿ ಮೇಲಿಂದ ಮೇಲೆ ಎಚ್ಚರ ವಾಗುತ್ತದೆ. ಇಂಥ ಸಮಸ್ಯೆ ಎದುರಿಸುವವರು ಪ್ರತಿ ದಿವಸ ರಾತ್ರಿ ಮಲಗುವ ಮುಂಚೆ 15-20 ನಿಮಿಷ ಗಳ ವರೆಗೆ ಕಾಲುಗಳಿಗೆ ಮಸಾಜ್ ಮಾಡಿಕೊಳ್ಳಿ, ಇದರಿಂದ ಅಸ್ವಸ್ಥತೆ ದೂರವಾಗುವದರ ಜೊತೆಗೆ ಶಾಂತಿಪೂರ್ವಕವಾಗಿ ನೀವು ನಿದ್ರಿಸಲು ಸಹಾಯ ಮಾಡುತ್ತದೆ.

 

3) ಮಾನಸಿಕ ಮತ್ತು ದೈಹಿಕ ಒತ್ತಡದ ಮೇಲೆ ನಿಯಂತ್ರಣ:-


ಇಂದಿನ ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ರೀತಿಯ ಮಾನಸಿಕ ಒತ್ತಡ ಇದ್ದೆ ಇರುತ್ತದೆ. ಅದರ ಜೊತೆಗೆ ದೈಹಿಕ ಒತ್ತಡ ಸೇರಿಕೊಂಡು ಸರಿಯಾದ ವಿಚಾರ ಮಾಡಲು ಮೆದುಳಿಗೆ ಸಹಾಯ ಮಾಡುವದಿಲ್ಲ. ಈ ಸಮಸ್ಯೆಯನ್ನು ದೂರಮಾಡಲು ನಿಮ್ಮ ಕಾಲುಗಳ ಮಸಾಜ್ ಮಾಡಿಕೊಳ್ಳಿ, ಇದರಿಂದ ಮಾನಸಿಕ ಮತ್ತು ದೈಹಿಕ ಒತ್ತಡ ದೂರವಾಗುವದರ ಜೊತೆಗೆ ಮೆದುಳಿಗೆ ಶಾಂತವಾಗಿ ಇಡಲು ಸಹಾಯ ಮಾಡುತ್ತದೆ. ಮಸಾಜ್ ಮಾಡುವಾಗ ಅಂಗಾಲಿನ ಬೇರೆ ಬೇರೆ ಭಾಗದ ಮೇಲೆ ಜೋರಾಗಿ ಒತ್ತಿ ಮಸಾಜ್ ಮಾಡುವದರಿಂದ ನಮ್ಮ ಮಜ್ಜಾತಂತು ವ್ಯವಸ್ಥಿತವಾಗಿ ನಡೆಯುತ್ತದೆ ಮತ್ತು ಸಂಪೂರ್ಣ ಶರೀರಕ್ಕೆ ಆರಾಮವಾಗಿಡುತ್ತದೆ.

 

4) ಕಾಲು ನೋವಿನಿಂದ ಮುಕ್ತಿ:-


ಒಳ್ಳೆಯ ಪ್ರಕಾರದಲ್ಲಿ ಮಾಡಿದ ಮಸಾಜ್ ಕಾಲು ಮತ್ತು ಕಾಲಿನ ಸ್ನಾಯುಗಳಿಗೆ ಅದ್ಭುತವಾಗಿ ಆರಾಮ ನೀಡುತ್ತದೆ. ಅದರ ಜೊತೆಗೆ ಕಾಲಿನಲ್ಲಿ ಬಂದ ಉಬ್ಬುವಿಕೆಯನ್ನು ದೂರಮಾಡುವದು. ಇದರಿಂದ ಕಾಲು ನೋವು ಇಲ್ಲದಂತಾಗುವದು. ಮಸಾಜ್ ಮಾದುವಡಕ್ಕಿಂತ ಮುಂಚೆ ಉಗುರು ಬೆಚ್ಚಗಿನ ನೀರಿನಿಂದ ಕಾಲುಗಳನ್ನು ತೊಳೆದುಕೊಂಡು ತದನಂತರ ಮಸಾಜ್ ಮಾಡಿಕೊಳ್ಳಿ ಅದರಿಂದ ಇನ್ನಷ್ಟು ಹೆಚ್ಚಿಗೆ ಲಾಭದಾಯಕವಾಗುತ್ತದೆ.

 

5)  ರಕ್ತದೊತ್ತಡ ಕಡಿಮೆ ಮಾಡುತ್ತದೆ:-


ದಿವಾಸತುಂಬೆಲ್ಲಾ ಶೂಜ್ ಹಾಕಿಕೊಳ್ಳುವದರಿಂದ ಅಂಗಾಲಿನ ವರೆಗೆ ರಕ್ತ ವ್ಯವಸ್ಥಿತವಾಗಿ ಪೂರೈಕೆ ಆಗುವದಿಲ್ಲ. ಅದರ ಪರಿಣಾಮ ಹೃದಯದ ಮೇಲೆ ಆಗುತ್ತದೆ. ಇದರಿಂದ ಶರೀರದಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಅದನ್ನು ನಿಯಂತ್ರಣದಲ್ಲಿಡಲು ದಿನಾಲು ರಾತ್ರಿ ಮಲಗುವ ಸಮಯದಲ್ಲಿ ಅಂಗಾಲಿನ ಕೆಳ ಭಾಗದಲ್ಲಿ ಮಸಾಜ್ ಮಾಡಿ, ಮಸಾಜ್ ಮಾಡುವದರಿಂದ ರಕ್ತದೊತ್ತಡ ಸುರಳಿತವಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಆರೋಗ್ಯ ಸರಿಯಾಗಿಡಲು ಸಹಾಯವಾಗುತ್ತದೆ.

Leave a Reply

Your email address will not be published. Required fields are marked *