ಬೆರಳಲ್ಲಿ ಆಮೆ ಆಕಾರದ ಉಂಗುರು ಏಕೆ ಧರಿಸಬೇಕು ಗೊತ್ತಾ? ಶಾಕ್ ಆಗ್ತೀರಾ!

ಬೆರಳಲ್ಲಿ ಆಮೆ ಆಕಾರದ ಉಂಗುರು ಏಕೆ ಧರಿಸಬೇಕು ಗೊತ್ತಾ? ಶಾಕ್ ಆಗ್ತೀರಾ!

 

 

ಜ್ಯೋತಿಷ್ಯ ಅವರ ಸಲಹೆಯ ಮೇರೆಗೆ ಎಷ್ಟೋ ಜನರು ಬೆರಳಿನಲ್ಲಿ ವಜ್ರದ ಉಂಗುರು ಮತ್ತು ಕೈಯಲ್ಲಿ ಬ್ರಾಸಲೆಟ್, ಕೊರಳಲ್ಲಿ ಚೈನ್ ಹಾಕಿಕೊಳ್ಳುತ್ತಾರೆ. ಉಂಗುರುಗಳಲ್ಲಿ ಬೇರೆ ಬೇರೆಯಾದ ಪ್ರಕಾರದ ರತ್ನದ ಉಂಗುರು ಇರುತ್ತವೆ. ಈ ಉಂಗುರು ಹಾಕಿಕೊಳ್ಳುವ ಹಿಂದಿನ ಕಾರಣವೇನೆಂದರೆ ತಮ್ಮ ಜನ್ಮ ಕುಂದಲಿಯಲ್ಲಿಯ ದೋಷ ನಿವಾರಣೆ ಮಾಡುವ ಉದ್ದೇಶವಿರುತ್ತದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಜನರ ಕೈಯಲ್ಲಿ ಬೇರೆ ಬೇರೆ ಆಕಾರದ ಉಂಗುರು ಕಾಣಿಸುತ್ತವೆ. ಅದರಲ್ಲಿ ಒಂದಾದ ಆಮೆಯ ಆಕಾರ ಹೊಂದಿದ ರಿಂಗ್ ಸಹ ಕಂಡು ಬರುತ್ತದೆ.

ಆಮೆ ಆಕಾರದ ಉಂಗುರು:

ಈ ಒಂದು ಆಕಾರದ ಉಂಗುರು ಇಂದಿನ ದಿವಸಗಳಲ್ಲಿ ಹೆಚ್ಚಾಗಿ ಕಂಡು ಬರುವದು. ಇದನ್ನು ಕಂಡ ಮೇಲೆ ನಮ್ಮಲ್ಲಿ ಒಂದೇ ಪ್ರಕಾರದ ಪ್ರಶ್ನೆ ಉಧ್ಭವವಾಗುವದು ಏನೆಂದರೆ ಈ ಆಕಾರದ ಉಂಗುರು ಏಕೆ ಹಾಕಿಕೊಳ್ಳುತ್ತಾರೆ? ಅಂತ. ನಮಗೆ ಕೆಲವೊಮ್ಮೆ ಅನಿಸುವುದೆನೆಂದರೆ ಇದು ಫ್ಯಾಶನ್ ಇದ್ದಿರ ಬಹುದು ಅಂತ ಆದರೆ ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶೋಧಿಸಿ ನೋಡಿದಾಗ ನಮಗೆ ಕೆಳಗಿನ ಸಂಗತಿಗಳು ಕಂಡು ಬಂದವು. ಆ ಒಂದು ಮಾಹಿತಿಯನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುವವರಿದ್ದೇವೆ. ಆಮೆ ಆಕಾರದ ಉಂಗುರು ಧರಿಸುವದರಿಂದಾಗುವ ಲಾಭಗಳು ; ಆಮೆ ಆಕಾರದ ರಿಂಗ್ ನ್ನು ವಾಸ್ತುಶಾಸ್ತ್ರದಲ್ಲಿ ಶುಭ ಎಂದು ತಿಳಿಯಲಾಗುತ್ತದೆ. ಈ ಉಂಗುರು ವುಕ್ತಿಯ ಜೀವನದಲ್ಲಿಯ ಹಲವಾರು ದೋಷ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಎಲ್ಲಕಿಂತ ವಿಶೇಷ ವೇನೆಂದರೆ ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಅಂತೆ.

  ಶಾಸ್ತ್ರದ ಪ್ರಕಾರ ಆಮೆ ನೀರಿನಲ್ಲಿ ಇರುತ್ತದೆ. ಇದನ್ನು ಸಕಾರಾತ್ಮಕ ಮತ್ತು ಪ್ರಗತಿಯ ಪ್ರತೀಕ ವೆಂದು ಪರಿಗನಣಿಸಲಾಗುವದು. ಆಮೆ ಪರಮೇಶ್ವರ ಮತ್ತು ವಿಷ್ಣುವಿನ ಅವತಾರ ವಿದೆ ಎಂದು ಸಹ ತಿಳಿಯಲಾಗುತ್ತದೆ. ಸಮುದ್ರ ಮಂಥನ ಪುರಾಣದ ಪ್ರಕಾರ ಆಮೆ ಸಮುದ್ರ ಮಂಥನ ನಿಂದ ಉತ್ಪನ್ನ ವಾಗಿದೆ ಮತ್ತು ಜೊತೆಗೆ ಲಕ್ಷ್ಮಿ ಸಹ ಇಲ್ಲಿಂದಲೇ ಬಂದಿದ್ದಾಳೆ ಎಂಬುದು ಪುರಾಣದಲ್ಲಿ ತಿಳಿಸಲಾಗಿದೆ.


●ಸಮೃದ್ಧಿಯ ಪ್ರತಿಕೆ: ಈ ಒಂದು ಕಾರಣದಿಂದ ಆಮೆಯನ್ನು ವಾಸ್ತುಶಾಸ್ತ್ರದಲ್ಲಿ ತುಂಬಾ ಮಹತ್ವವಿದೆ ಅದೇನೆಂದರೆ ಆಮೆಗೆ ಲಕ್ಷ್ಮೀದೇವಿಯ ಕೃಪೆಯ ಜೊತೆಗೆ ಧನಸಂಪತ್ತು ಪ್ರಾಪ್ತವಾಗುವದು. ಇದಲ್ಲದೆ ಧೈರ್ಯ ,ಶಾಂತಿ, ಸಮಾಧಾನ ಮತ್ತು ಸಮೃದ್ಧಿಪ್ರತೀಕವಾಗಿದೆ ಎಂದು ತಿಳಿಸಲಾಗಿದೆ.

ಈ ಉಂಗುರು ತಯಾರಿಸುವ ವಿಧಾನ :

●ಬೆಳ್ಳಿಯ ಉಂಗುರು :
ವಾಸ್ತುಶಾಸ್ತ್ರದ ಅನುಸಾರ ಆಮೆ ಆಕಾರದ ಉಂಗುರು ಕೇವಲ ಬೆಳ್ಳಿಯಿಂದ ತಯಾರಿದ್ದು ಇರಬೇಕು . ಒಂದು ವೇಳೆ ನೀವು ಬಂಗಾರ ಅಥವಾ ವಜ್ರದ ಉಂಗುರು ಧರಿಸುತ್ತಿದ್ದರೆ ಬೆಳ್ಳಿಯಿಂದ ಆಮೆ ಆಕಾರ ತಯಾರಿಸಿ ಅದನ್ನು ಬಂಗಾರದ ಉಂಗುರಿನ ಮೇಲೆ ಡಿಸೈನ್ ಮಾಡಬಹುದು. ಅಥವಾ ಅದರ ಮೇಲೆ ರತ್ನ ಲೆಪಿಸಬಹುದು.

● ಈ ಉಂಗುರು ಬೆರಳಲ್ಲಿ ಧರಿಸುವ ನಿಯಮ :


ಉಂಗುರು ಧರಿಸುವಾಗ ತುಂಬಾ ಎಚ್ಚರ ವಹಿಸಬೇಕು. ಆಮೆಯ ತಲೆ ಉಂಗುರು ಧರಿಸುವ ವ್ಯಕ್ತಿಯ ಬದಿಗೆ ಇರಬೇಕು. ಒಂದು ವೇಳೆ ಅದರ ತಲೆ ಬೆರಳಿನ ಮುಂದುಗಡೆ ಮಾಡಿ ಧರಿಸಿಕೊಂಡರೆ ಧನಲಕ್ಷ್ಮಿ ಬರುವದರ ಬದಲಾಗಿ ನಮ್ಮಿಂದ ಹೊರಟು ಹೋಗುವಳು.
ಈ ಉಂಗುರನ್ನು ನಿಮ್ಮ ಮಧ್ಯದ ಬೆರಳಿನಲ್ಲಿ ಅಥವಾ ಅದರ ಬದಿಗಿನ ಬೆರಳಿನಲ್ಲಿ ಧರಿಸಬೇಕು. ಇದರಿಂದ ನಿಮಗೆ ಯಾವುದೇ ಪ್ರಕಾರದ
ವಾಸ್ತುಶಾಸ್ತ್ರದ ಸಮಸ್ಯೆ ನಿರ್ಮಾಣವಾಗುವದಿಲ್ಲ. ಈ ಉಂಗುರು ಮೊಟ್ಟ ಮೊದಲು ಬೆರಳಲ್ಲಿ ಕೇವಲ ಶುಕ್ರವಾರ ದಂದು ಹಾಕಿಕೊಳ್ಳಲು ಪ್ರಾರಂಭಿಸಿ ಏಕೆಂದರೆ ಶುಕ್ರವಾರ ಲಕ್ಷ್ಮೀಯ ವಾರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನಮ್ಮ ಮನೆಗೆ ಲಕ್ಷ್ಮಿ ಜೊತೆಗೆ ಧನದ ಆಗಮನ ಸಹ ಆಗುವದು

ಇದನ್ನು ಮಾಡಬೇಡಿ :
ಈ ಉಂಗುರು ಧರಿಸಿದ ನಂತರ ಅದನ್ನು ಯಾವಾಗಲು ತಿರುಗಿಸಬೇಡಿ ಏಕೆಂದರೆ ತಿರುಗಿಸುವದರಿಂದ ಆಮೆಯ ಮುಖದ ದಿಶೆ ಬದಲಾಗುವದು. ಇದರಿಂದ ಸಮಸ್ಯೆಗಳು ನಿರ್ಮಾಣವಾಗುತ್ತವೆ.

Leave a Reply

Your email address will not be published. Required fields are marked *