ಇಲ್ಲಿ ತರಕಾರಿ ಬೆಲೆಯಲ್ಲಿ ಮೊಬೈಲ್ ಮಾರಾಟ ಮಾಡುತ್ತಾರೆ: ಮೊಬೈಲ್ ಬೆಲೆ ಕೇಳಿದರೆ ಶಾಕ್ ಆಗ್ತೀರಾ!

ಇಲ್ಲಿ ತರಕಾರಿ ಬೆಲೆಯಲ್ಲಿ ಮೊಬೈಲ್ ಮಾರಾಟ ಮಾಡುತ್ತಾರೆ:  ಮೊಬೈಲ್ ಬೆಲೆ ಕೇಳಿದರೆ ಶಾಕ್ ಆಗ್ತೀರಾ!

 

 

ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ಕಾರ್ಯ ಆನ್ಲೈನ್ ಮಾಡುತ್ತಾರೆ. ಅಲ್ಲದೆ ಇಂದು ಎಲ್ಲ ಕಾರ್ಯಗಳು ಡಿಜಿಟಲ್ ಪದ್ಧತಿಯನ್ನು ಅನುಸರಿಸುತ್ತಿವೆ. ಇಂದಿನ ಪ್ರತಿಯೊಂದು ಮಗುವಿನಿಂದ ಹಿಡಿದು ವಯಸ್ಕರರವರೆಗೆ ಪ್ರತಿಯೊಬ್ಬರಿಗೂ ಮೊಬೈಲ್ ಬೇಕೇ ಬೇಕು. ಮೊಬೈಲ್ ಇಲ್ಲದೆ ದಿನವೇ ಸಾಗುವದಿಲ್ಲ, ಒಂದು ಹೊತ್ತಿನ ಊಟ ಇರದಿದ್ದರೆ ಪರವಾಗಿಲ್ಲ ಆದ್ರೆ ಮೊಬೈಲ್ ಅಂತೂ ಬೇಕು. ಯಾರ ಹತ್ತಿರ ಮೊಬೈಲ್ ಇರುವದಿಲ್ಲವೊ ಅವರು ಆಧುನಿಕ ಯುಗಕ್ಕೆ ಕಾಲಿಟ್ಟಿಲ್ಲ ಎಂದರ್ಥ.

ನಮಗೆ ಯಾವುದಾದರೂ ಹೊಸ ಮೊಬೈಲ್ ಕೊಂಡುಕೊಳ್ಳಬೇಕಾದರೆ ನಾವು ಮೊಬೈಲ್ ಶಾಪ್ ಗೆ ಹೋಗುತ್ತೇವೆ. ಆದರೆ ಈ ಒಂದು ಸ್ಥಳದಲ್ಲಿ ತರಕಾರಿ ಮಾರ್ಕೆಟ್ ತರ, ಮೊಬೈಲ್ ಮಂಡಿ ಹಾಕುತ್ತಾರೆ. ಪ್ರತಿಯೊಂದು ಪ್ರಕಾರದ ಮೊಬೈಲ್ ರಸ್ತೆಯ ಬದಿಗೆ ಕುಳಿತುಕೊಂಡು ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲ ಇವುಗಳ ಬೆಲೆ ಸಹ ತರಕಾರಿ ಬೆಲೆ ಅಷ್ಟೇ ಇವೆ.

ಈ ಒಂದು ಮೋಬೈಲ್ ಸಂತೆ ಬಾಂಗ್ಲಾದೇಶದಲ್ಲಿ ನಡೆಯುತ್ತದೆ. ನಮ್ಮಲ್ಲಿ ಹೇಗೆ ತರಕಾರಿ ಮಾರಾಟ ಮಾಡುತ್ತಾರೋ ಹಾಗೆ ಇಲ್ಲಿ ಮೊಬೈಲ್ ಮಾರಾಟ ಮಾಡುತ್ತಾರೆ. ಬಾಂಗ್ಲಾದೇಶದ ಚಲನೆ ‘ಟಕಾ’. ಒಂದು ಸಾಧಾರಣ ಮೊಬೈಲ್ ಕೇವಲ 100 ಟಕಾ ದಲ್ಲಿ ಕೊಂಡುಕೊಳ್ಳಬಹುದು, ಅಂದರೆ ಭಾರತೀಯ ಬೆಲೆಯಲ್ಲಿ ಕೇವಲ 84 ರೂಪಾಯಿ.

ಬಾಂಗ್ಲಾದೇಶದ ಈ ಮಾರುಕಟ್ಟೆಯಲ್ಲಿ ಮೊಬೈಲ್ ಜೊತೆಗೆ ಮೊಬೈಲ್ ಎಕ್ಸೆಸರಿಜ ಗಳು ಸಹ ದೊರೆಯುತ್ತವೆ. ಅಂದರೆ ಬ್ಯಾಟರಿ, ಹೆಡ್ಫೋನ್, ಚಾರ್ಜರ್ ಮತ್ತು ಮೊಬೈಲ್ ಕವರ್. ಇಲ್ಲಿ ಇವೆಲ್ಲವುಗಳು ಕಡಿಮೆ ದರದಲ್ಲಿ ಸಿಗುತ್ತವೆ. ಇಲ್ಲಿಯ ಹೆಚ್ಚಿನ ವಸ್ತುಗಳು ಸಾಧಾರಣವಾಗಿ ಮೇಡ್ ಇನ್ ಚಯಿನಾ ಇರುತ್ತವೆ. ಇಲ್ಲಿ ದೊಡ್ಡ ದೊಡ್ಡ ಬ್ರಾಂಡ್ ಕಂಪನಿಯ ಮೊಬೈಲ್ ಸಹ ಕಡಿಮೆ ದರದಲ್ಲಿ ದೊರೆಯುತ್ತವೆ.


ಬಾಂಗ್ಲಾದೇಶದಲ್ಲಿ ನಡೆಯುವಂತಹ ಈ ಮಾರ್ಕೆಟ್ ನಲ್ಲಿಯ ಮೊಬೈಲ್ ಫೋನ್ ಗಳು ಹೆಚ್ಚಾಗಿ ಕಳ್ಳತನ ಮಾಡಿದ್ದು ಇರುತ್ತವೆ ಅಥವಾ ಹಳೆಯದಾಗಿರುತ್ತವೆ. ಇಲ್ಲಿ ಕೆಲವೊಂದು ಮೊಬೈಲ್ ಗಳು ಸರಿಯಾಗಿರುತ್ತವೆ. ಈ ಮಾರ್ಕೆಟ್ ನಲ್ಲಿ ಮೊಬೈಲ್ ಜೊತೆಗೆ ಕೆಲವು ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯೂ ಸಹ ಕಡಿಮೆ ಇರುತ್ತದೆ.

Leave a Reply

Your email address will not be published. Required fields are marked *