ನಿಂತು ನೀರು ಕುಡಿಯುವ ಅಭ್ಯಾಸವಿದ್ದರೆ ಅದರಿಂದ ಆಗುವ ಪರಿಣಾಮಗಳನ್ನು ಬಲ್ಲಿರಾ? ಯಾವುದಕ್ಕೂ ಒಂದು ಸಲ ಓದಿ ತಿಳಿದುಕೊಳ್ಳಿ.

ನಿಂತು ನೀರು ಕುಡಿಯುವ ಅಭ್ಯಾಸವಿದ್ದರೆ ಅದರಿಂದ ಆಗುವ ಪರಿಣಾಮಗಳನ್ನು ಬಲ್ಲಿರಾ? ಯಾವುದಕ್ಕೂ ಒಂದು ಸಲ ಓದಿ ತಿಳಿದುಕೊಳ್ಳಿ.

 

 

 

1) ಕಿಡ್ನಿಯ ವಿಕಾರ:-

ಕಿಡ್ನಿಯ ಮುಖ್ಯ ಕೆಲಸ ದೇಹದಲ್ಲಿಯ ನೀರಿನ ಫಿಲ್ಟರ್ ಮಾಡುವದು. ನಿಂತು ನೀರು ಕುಡಿಯುವದರಿಂದ ಕುಡಿದ ನೀರು ಕಿಡ್ನಿಯಲ್ಲಿಂದ ಯೋಗ್ಯ ರೀತಿಯಾಗಿ ಫಿಲ್ಟರ್ ಆಗದೆ ಹಾಗೆಯೇ ಹರಿದು ಹೋಗುತ್ತದೆ. ಕಾಲಕ್ರಮೇಣವಾಗಿ ನಿಮ್ಮ ಮೂತ್ರಪಿಂಡ ಮತ್ತು ರಕ್ತದಲ್ಲಿ ಕಲ್ಮಶ ಕುಡಿಕೊಳ್ಳಲು ಪ್ರಾರಂಭಿಸುತ್ತದೆ. ಇದೆ ಪರಿಸ್ಥಿತಿ ಮುಂದುವರಿದಲ್ಲಿ ಭವಿಷ್ಯದಲ್ಲಿ ಮೂತ್ರಾಶಯ, ಹೃದಯ ಹಾಗೂ ಕಿಡ್ನಿಯ ವಿಕಾರ ಸಂಭವಿಸುತ್ತದೆ.

2) ಹೊಟ್ಟೆಯ ವಿಕಾರ:-

ನಿಂತು ನೀರು ಕುಡಿಯುವ ದುರಭ್ಯಾಸದಿಂದ ನೀರು ಅನ್ನನಳಿಕೆಯಿಂದ ವೇಗವಾಗಿ ಕೆಳಗಿನ ಅಂಗಾಂಗಗಳಿಗೆ ಹರಿದು ಹೋಗುತ್ತದೆ. ಹೊಟ್ಟೆಯ ಒಳಭಾಗದಲ್ಲಿ ಹಾಗೂ ಸುತ್ತಮುತ್ತಲ ಕ್ಷೇತ್ರದಲ್ಲಿ ನೀರು ಸತತವಾಗಿ ಇದೇ ರೀತಿ ಬೀಳುವದರಿಂದ ನಿಧಾನವಾಗಿ ಹಾನಿ ಉಂಟಾಗುತ್ತಿರುತ್ತದೆ. ಇದರಿಂದ ಪಚನ ಕ್ರಿಯೆಯಲ್ಲಿ ಏರುಪೇರಾಗುವದರ ಜೊತೆಗೆ ಹೃದಯಕ್ಕೂ ಸಹ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.

3) ಬಾಯಾರಿಕೆ ಅಪೂರ್ಣವಾಗಿರುವದು:-

ಈ ಕ್ರಿಯೆಯಿಂದ ನೀರಡಿಕೆ ಸಂಪೂರ್ಣವಾಗಿ ಹಿಂಗುವದಿಲ್ಲ. ಆಯುರ್ವೇದದ ಪ್ರಕಾರ ನೀರನ್ನು ತಿನ್ನುವ ಹಾಗೆ ನಿಧಾನವಾಗಿ ಕುಡಿಯಬೇಕಂತೆ. ಹಾಗೂ ಅನ್ನವನ್ನು ಮೆಲೆದು ಮೆಲೆದು ಕುಡಿಯುವ ಹಾಗೆ ಗಂಟಲಿಂದ ಇಳಿಸಬೇಕಂತೆ.

4) ಎಸಿಡಿಟಿಯ ಮೇಲೆ ದುಷ್ಪರಿಣಾಮ:-

ನಿಂತು ನೀರು ಕುಡಿಯುವದರಿಂದ ಹೊಟ್ಟೆಯಲ್ಲಿಯ ಅನ್ನದ ಮೇಲಿನ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗುವದು. ನಿಂತು ನೀರು ಕುಡಿಯುವುದರಿಂದ ಎಸಿಡ್ ನ ಪ್ರಮಾಣ ಹೆಚ್ಚಾಗುವದು. ಇದರ ಜೊತೆಗೆ ಅನೇಕ ಸಮಸ್ಯೆಗಳು ನಿರ್ಮಾಣವಾಗುವವು.

5) ಅಪಚನ:-

ನಿಂತು ನೀರು ಕುಡಿಯುವುದರಿಂದ ಹೊಟ್ಟೆಗೆ ಬಿಡುವು ಸಿಗುವದಿಲ್ಲ. ಹೊಟ್ಟೆಯ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಕುಳಿತು ಕುಡಿಯುವದರಿಂದ ಹೊಟ್ಟೆಗೆ ವಿಶ್ರಾಂತಿ ದೊರೆಯುವದು. ಇದರಿಂದ ಹೊಟ್ಟೆ ಮತ್ತಷ್ಟು ಚೆನ್ನಾಗಿ ತನ್ನ ಕಾರ್ಯ ನಿರ್ವಹಿಸುವದು.

6) ಅಲ್ಸರ್ ಮತ್ತು ಹೃದಯದಲ್ಲಿ ಉರಿ:-

ನಿಂತು ನೀರು ಕುಡಿಯುವ ದುರಭ್ಯಾಸದಿಂದ ಹೃದಯದಲ್ಲಿ ಉರಿ ಮತ್ತು ಅಲ್ಸರ ದಂತಹ ರೋಗ ಹುಟ್ಟುವ ಸಾಧ್ಯತೆ ಗಳಿರುತ್ತವೆ. ಇಂತಹದರಲ್ಲಿ ಅನ್ನನಳಿಕೆಯ ಕೆಳಭಾಗದಲ್ಲಿ ದುಷ್ಪರಿಣಾಮ ತಲೆದೂರುವ ಸಾಧ್ಯತೆಗಳಿರುತ್ತವೆ. ಅಲ್ಲಿಂದ ಮತ್ತೆ reflex ಆಗಿ sphincter ಗೆ ಅಡತಡೆ ನಿರ್ಮಾಣ ಮಾಡುವ ಪ್ರಸಂಗವಿರುತ್ತದೆ. ಇದರಿಂದ ಹೃದಯದಲ್ಲಿ ಉರಿ ಮತ್ತು ಅಲ್ಸರ ದಂತಹ ರೋಗ ನಿರ್ಮಾಣ ವಾಗುವ ಸಾಧ್ಯತೆ ಇರುತ್ತದೆ.

7) ನರಗಳ ಮೇಲೆ ಒತ್ತಡ:-

ನಿಂತು ನೀರು ಕುಡಿಯುವುದರಿಂದ ಶರೀರದ fight and fight system ಎಕ್ಟವೇಟ್ ಆಗುತ್ತದೆ. ಇದರಿಂದ ಶರೀರದ ಎಲ್ಲ ನರಗಳ ಮೇಲೆ ಒತ್ತಡ ಬೀಳುವದು. ಇದರ ತದ್ವಿರುದ್ಧವಾಗಿ ನೀವು ಒಂದು ವೇಳೆ ಕುಳಿತು ನೀರು ಕುಡಿಯುತ್ತಿದ್ದರೆ rest and digest system activate ಆಗುತ್ತದೆ. ಇದು ಎಲ್ಲ ಇಂದ್ರಿಯಗಳಿಗೆ ಶಾಂತವಾಗಿಡುತ್ತದೆ. ಮತ್ತು ಪಚನ ಕ್ರೀಯೆ ಚೆನ್ನಾಗಿ ನಡೆಯುತ್ತದೆ.

8) ಕೀಲು ನೋವು:-

 

ನಿಂತು ನೀರು ಕುಡಿಯುವವರಾಗಿದ್ದರೆ ಭವಿಷ್ಯದಲ್ಲಿ ಕೀಲು ನೋವಿನಂತಹ (ಸಂಧಿವಾತ) ಭಯಂಕರ ರೋಗದ ಬಲಿಯಾಗುವದು ನಿಶ್ಚಿತ. ಏಕೆಂದರೆ ನಿಂತು ನೀರು ಕುಡಿಯುವುದರಿಂದ ಶರೀರದಲ್ಲಿ ದ್ರವ ಪದಾರ್ಥದ ಸಮತೋಲ ಕೆಡುವದು. ನೀರು ವೇಗವಾಗಿ ಕೆಳಗಿನ ಭಾಗಕ್ಕೆ ಹೋಗುವದರಿಂದ ದ್ರವ ಪದಾರ್ಥ ಸಮತೋಲ ಕಳೆದುಕೊಂಡು ಅವು ಕೀಲುಗಳಲ್ಲಿ ಘನಪದಾರ್ಥವಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಸಂಧಿವಾತ ಅಥವಾ ಕೀಲುನೋವುಗಳಂತಹ ಭಯಂಕರ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿರುತ್ತವೆ.

Leave a Reply

Your email address will not be published. Required fields are marked *