ನಿಮ್ಮ ಅಂಗೈಯಲ್ಲಿ ಈ ಹಸ್ತರೇಖೆಗಳು ಇದ್ದಲ್ಲಿ ನಿಮ್ಮನ್ನು ಯಾರೂ ಯಾವ ಮಾರ್ಗದಿಂದಲೂ ಸೋಲಿಸಲು ಸಾಧ್ಯವಿಲ್ಲ. ಗೊತ್ತಾ?

ನಿಮ್ಮ ಅಂಗೈಯಲ್ಲಿ ಈ ಹಸ್ತರೇಖೆಗಳು ಇದ್ದಲ್ಲಿ ನಿಮ್ಮನ್ನು ಯಾರೂ ಯಾವ ಮಾರ್ಗದಿಂದಲೂ ಸೋಲಿಸಲು ಸಾಧ್ಯವಿಲ್ಲ. ಗೊತ್ತಾ?

 

ಭವಿಷ್ಯ ಮತ್ತು ಹಸ್ತ ರೇಖೆಗಳ ಅಭ್ಯಾಸ ಯಾವುದೇ ಸಂಸ್ಕೃತಿ ಕ್ಷೇತ್ರ ಮತ್ತು ಧರ್ಮಕ್ಕೆ ಸೀಮಿತವಾಗಿಲ್ಲ. ಇದು ಜಗತ್ತಿನಾದ್ಯಂತ ಬೇರೆ ಬೇರೆ ಸಾಂಸ್ಕೃತಿಕ ವಿವಿಧತೆಗಳೊಂದಿಗೆ ಕಂಡು ಬರುವದು. ಹಸ್ತರೇಖೆಗಳಿಂದ ಮನುಷ್ಯನ ಚರಿತ್ರೆ ಮತ್ತು ಸ್ವಭಾವದ ಜೊತೆಗೆ ಆತನ ಭವಿಷ್ಯದ ಬಗ್ಗೆಯೂ ತಿಳಿದು ಬರುತ್ತದೆ. ಹಸ್ತರೇಖೆಯ ಅಭ್ಯಾಸದಿಂದ ಜೀವನದ ಬಗ್ಗೆ ಅನೇಕ ವಿಷಯಗಳು ತಿಳಿದು ಬರುತ್ತವೆ.

ಈ ಹಸ್ತರೇಖಾ ಶಾಸ್ತ್ರಭ್ಯಾಸದ ಜನ್ಮ ಭಾರತದಲ್ಲಿಯೇ ಆಗಿದೆಯಂದು ಪ್ರಚೀತಿ ಇದೆ. ನಂತರ ಇದು ಚೀನಾ, ಟಿಬೆಟ್, ಮಿಸ್ರ್, ಇರಾನ್ ಮೂಲಕ ಯುರೋಪ್ ಖಂಡ ತಲುಪಿದೆ.

 

ಮಹಾನ್ ಭವಿಷ್ಯಕಾರ ಅರಸ್ತು ಈ ವಿದ್ಯೆಯ ಬಗ್ಗೆ ಜಗತ್ತನ್ನೇ ಗೆಲ್ಲಲ್ಲು ಹೊರಟ ಸಿಕಂದರನಿಗೆ ಜ್ಞಾನವನ್ನು ಕೊಟ್ಟಿದ್ದ. ಹೀಗಾಗಿ ಹಸ್ತರೇಖೆಗಳ ಶಾಸ್ತ್ರದಲ್ಲಿ ಸಿಕಂದರನಿಗೆ ಅಭಿರುಚಿ ಉಂಟಾಗಿ ಇದೆ ಕಾರಣದಿಂದ ಸಿಕಂದರನು ತನ್ನ ಅಧಿಕಾರಿಗಳ ಚರಿತ್ರೆಯ ಮೂಲ್ಯಾಂಕನವನ್ನು ಹಸ್ತರೇಖೆಗಳ ಮೂಲಕವೇ ತಿಳಿದುಕೊಳ್ಳಲು ಪ್ರಾರಂಭಿಸಿದನಂತೆ. ಅಷ್ಟೇ ಅಲ್ಲ ಆತ ತನ್ನ ಹಸ್ತರೇಖೆಗಳ ಬಗ್ಗೆ ಅಗಾಧವಾಗಿ ತಿಳಿದುಕೊಂಡಿದ್ದು ಅದರ ಹಾಗೆಯೇ ತನ್ನ ಮುಂದಿನ ನಿಯೋಜನೆಗಳನ್ನು ರೂಪಿಸುತ್ತಿದ್ದನಂತೆ. ಸಿಕಂದರನ ಹಸ್ತದಲ್ಲಿ ಇದ್ದ ರೇಖೆಗಳಿಗೆ ಸರಿಹೊಂದುವ ರೇಖೆಗಳು ಇಲ್ಲಿಯವರಿಗೆ ಯಾರ ಕೈಯಲ್ಲಿಯೂ ಕಂಡು ಬಂದಿಲ್ಲವೆಂಬ ಮಾತು ಇದೆ.

ಅಂಗೈಯಲ್ಲಿ X ಅಕ್ಷರದ ಮಹತ್ವವೇನು ಗೊತ್ತಾ?


ಮಿಸ್ರ್ ನ ಭವಿಷ್ಯಕಾರರ ಪ್ರಕಾರ ಸಿಕಂದರನ ಅಂಗೈಯಲ್ಲಿ ಇದ್ದ ಈ X ಚಿಹ್ನೆ ಜಗತ್ತಿನಲ್ಲಿ ಬಹಳ ಕಡಿಮೆ ಜನರ ಕೈಯಲ್ಲಿ ಕಂಡು ಬಂದಿದೆಯಂತೆ.ಈ ಚಿಹ್ನೆ ಸ್ಪಷ್ಟವಾಗಿ ಎರಡು ರೇಖೆಗಳ ಮಧ್ಯದಲ್ಲಿ ಇರಬೇಕು.ಒಂದು ಸರ್ವೇಕ್ಷಣೆಯ ಪ್ರಕಾರ ಜಗತ್ತಿನ ಒಟ್ಟು ಜನಸಂಖ್ಯೆಯ 3 ಪ್ರತಿಶತ ಜನರ ಕೈಯಲ್ಲಿ ಮಾತ್ರ ಈ ಪ್ರಕಾರದ ರೇಖೆಗಳು ಕಂಡು ಬರುತ್ತದೆಯಂತೆ. ಈ ದಾವೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಸಲುವಾಗಿ ಮಾಸ್ಕೊದ ಎಸ್ ಟಿ ಆಯ್ ವಿಶ್ವವಿದ್ಯಾಲಯದ ವತಿಯಿಂದ ರಿಸರ್ಚ್ ಸಹ ಮಾಡಲಾಯಿತು. ರಿಸರ್ಚ್ ನಲ್ಲಿ 20 ಲಕ್ಷ ಜನರ ಹಸ್ತರೇಖೆಗಳನ್ನು ಅಭ್ಯಸಿಸಲಾಯಿತು. ಅವರ ಅಭ್ಯಾಸದ ಪ್ರಕಾರ ಯಾರ ಯಾರ ಕೈಯಲ್ಲಿ ಅಂಗೈ ಮಧ್ಯದಲ್ಲಿ ಕ್ರಾಸ್ ಚಿಹ್ನೆ ಇತ್ತೋ ಅವರು ದೊಡ್ಡ ದೊಡ್ಡ ವ್ಯಕ್ತಿಗಳಾಗಿದ್ದರು.ಅವರು ರಾಜಕೀಯ ವ್ಯಕ್ತಿ ಅಥವಾ ಸಮಾಜದ ಮೇಲೆ ತುಂಬಾ ಪ್ರಭಾವ ಹೊಂದಿದ ವ್ಯಕ್ತಿ ಎಂದು ಕಂಡು ಬಂದಿದೆ.ಸಿಕಂದರನ ಹೊರತಾಗಿ ಅಬ್ರಾಹಂ ಲಿಂಕನ್ ಕೈಯಲ್ಲಿಯೂ ಈ ತರಹದ ಚಿಹ್ನೆ ಇತ್ತು.

ಸದ್ಯಕ್ಕೆ ವರ್ತಮಾನದ ವಿಚಾರ ಮಾಡಲಾಗಿ ರಶಿಯಾದ ಅಧ್ಯಕ್ಷರಾದ ವ್ಲಾದಿಮೀರ್ ಪುತಿನ್ ಅವರ ಹಸ್ತರೇಖೆಗಳು ಇದಕ್ಕೆ ಹೊಂದುತ್ತವೆ.ಇದರಿಂದನೇ ನಮಗೆ ಗೊತ್ತಾಗುವದು ಈ ಚಿಹ್ನೆ ಹೊಂದಿದ ವ್ಯಕ್ತಿಗಳು ಸಮಾಜದ ಮೇಲೆ ಎಂಥ ಪ್ರಭಾವ ಬೀರಿರುತ್ತಾರೆ ಎನ್ನುವದು.ಯಾವ ವ್ಯಕ್ತಿಗಳ ಎರಡು ಕೈಯಲ್ಲಿ ಈ ಕ್ರಾಸ್ ಇರುತ್ತದೋ ಆ ವ್ಯಕಿಗಳನ್ನು ಜಗತ್ತು ಅನಂತ ಕಾಲದ ವರೆಗೆ ಸ್ಮರಿಸುತ್ತಾ ಇರುತ್ತಾರಂತೆ. ಹಾಗೂ ಒಂದು ಕೈಯಲ್ಲಿ ಇರುವವರೂ ಸಹಿತ ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಸಾಧಿಸುವವರು ಇರುತ್ತಾರೆ. ಹಾಗೂ ತಮ್ಮ ಜೀವನ ಕಾಲದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆಯುತ್ತಾರೆ.

ಇವರ ಸ್ವಭಾವ ಹೇಗಿರುತ್ತೆ ನೋಡಿ.

ಇವರ ಆರನೇ ಇಂದ್ರಿಯ ಬಹಳ ವೇಗದಿಂದ ಕೆಲಸ ಮಾಡುತ್ತಿರುತ್ತದೆ. ಯಾವುದೇ ಮುಂಬರುವ ಅಪಾಯ, ದ್ರೋಹ ಮತ್ತು ವಿಶ್ವಾಸಘಾತವನ್ನು ಬೇಗನೆ ಅರಿಯುವರು.

ಒಂದು ವೇಳೆ ಇವರ ಜೊತೆಗೆ ಸುಳ್ಳು ಹೇಳುವುದಾಗಲಿ ಅಥವಾ ಇನ್ನಿತರ ಯಾವುದೇ ಮೋಸ ಮಾಡಲಿಕ್ಕೆ ಪ್ರಯತ್ನಪಟ್ಟರೆ ಇವರ ವ್ಯಕ್ತಿತ್ವದ ಭಯಾನಕ ರೂಪವನ್ನು ನೋಡಬಹುದು. ಒಂದು ವೇಳೆ ಇವರು ಕ್ಷಮಿಸಿದರೂ ಸಹಿತ ಆ ಘಟನೆಯನ್ನು ಎಂದಿಗೂ ಮರೆಯಲಾರರು.

ಇವರಿಗೆ ಭಾಗ್ಯವೂ ಸಹಿತ ಸಾಕಷ್ಟು ಜೊತೆಗೆ ಇರುವದರಿಂದ ಯಾವ ಹಂತದಲ್ಲಿಯೂ ಇವರಿಗೆ ಹಾನಿಯಾಗಲಾರದು. ಹಾಗೆ ಇವರು ಪ್ರತಿಯೊಂದು ಕೆಲಸಿನಲ್ಲಿ ಸಫಲತೆಯನ್ನು ಹೊಂದುವರು ಮತ್ತು ಬೇರೆಯವರ ಅಸೂಯೆ ಯಾವ ಹಾನಿಯನ್ನು ಮಾಡದು. ಈ ವ್ಯಕ್ತಿಗಳು ತುಂಬ ಬುದ್ಧಿವಂತರು, ಚುರುಕು ಅತೀ ಸಂವೇದನೆಶೀಲ ಉಳ್ಳವರೂ ಹಾಗೂ ನೆನಪಿನಶಕ್ತಿಯುಳ್ಳವರೂ ಆಗಿರುತ್ತಾರೆ. ಯಾವುದೇ ವಿಷಯವನ್ನು ಬೇಗನೆ ಕಲಿತುಕೊಳ್ಳುತ್ತಾರೆ ಮತ್ತು ತಮ್ಮ ಯೋಜನೆಗಳಿಗೆ ಪೂರ್ಣ ರೂಪ ಕೊಡಲು ಸ್ವಲ್ಪವೂ ಯೋಚಿಸುವದಿಲ್ಲ.

Leave a Reply

Your email address will not be published. Required fields are marked *