ಆರೋಗ್ಯ

ಮನುಷ್ಯನ ವರ್ತನೆ ಹಣವಿದ್ದಾಗ - ಹಣವಿಲ್ಲದಾಗ

  ಮನುಷ್ಯನ ಸ್ವಭಾವ ವಿಚಿತ್ರ ಮತ್ತು ತುಂಬಾ ಚಂಚಲ. ಪರಸ್ಥಿತಿಗೆ ತಕ್ಕ ಹಾಗೆ ಬದಲಾಯಿಸುವ ಸ್ವಭಾವ ಇವನದು. ಹಿರಿಯರು ಮನುಷ್ಯನ ಬದಲಾಗುವ ಸ್ವಭಾವದ ಬಗ್ಗೆ ಉಪಮೆಯನ್ನು ಕೊಡುವಾಗ ಹೀಗೆ ಹೇಳುವದುಂಟು. ಚಹದಲ್ಲಿ ನೊಣ ಬಿದ್ದರೆ ಮನುಷ್ಯ ಚಹವನ್ನೇ ಚೆಲ್ಲಿ ಬಿಡುತ್ತಾನೆ.ಆದರೆ ಅದೇ ತುಪ್ಪದಲ್ಲಿ ನೊಣ ಬಿದ್ದರೆ ನೊಣವನ್ನೆ ತೆಗೆದು ಬಿಸಾಕಿ ಬಿಡುತ್ತಾನೆ.ಇದೆ ತೆರನಾಗಿ ಮನುಷ್ಯನ ಹತ್ತಿರ ಒಮ್ಮೆಲೇ ಹಣ ಬಂದರೂ ಆಕಸ್ಮಿಕ ಸಿರಿವಂತನಾದರೂ ಹಣದ ಬೆಲೆ ಗೊತ್ತಿಲ್ಲದೆ ದುಡಿಮೆಯ ಮಹತ್ವ ತಿಳಿಯದೆ ಬಂದ ದುಡ್ಡಿನಿಂದ ಮನುಷ್ಯನ ನಡೆ, ಅವನ ಪ್ರೆಸ್ಟಿಜ್ ಬದಲಾಯಿತೆಂದರೂ ಸಹ ಅನೇಕ ವಿಚಾರಗಳಲ್ಲಿ ,ನಡತೆಗಳಲ್ಲಿಯೂ ಬದಲಾಗುತ್ತದೆ ಎಂಬುದಕ್ಕೆ ಕೆಲವೊಂದು ಕಟು ಸತ್ಯಗಳನ್ನು ಈ ಲೇಖನದಲ್ಲಿ ಬಿಂಬಿಸಲಾಗಿದೆ.

ತಾಮ್ರದ ತಂಬಿಗೆಯಲ್ಲಿಯ ನೀರು ಕುಡಿಯುವದರಿಂದ ದೇಹಕ್ಕೆ ಆಗುವ ಲಾಭಗಳು.

  1.ಕಾಂತಿಯುಕ್ತ ತ್ವಚೆ:– ಪ್ರತಿದಿನ ರಾತ್ರಿ ತಾಮ್ರದ ತಂಬಿಗೆಯಲ್ಲಿ ತುಂಬಿಟ್ಟ ನೀರು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವದರಿಂದ ತ್ವಚೆಗೆ ಸಂಬಂಧಿಸಿದ ಸರ್ವ ಸಮಸ್ಯೆಗಳಿಂದ ಮುಕ್ತಿ,ಜೊತೆಗೆ ತ್ವಚೆ ಕಾಂತಿಯುಕ್ತವಾಗಿ ಹೊಳೆಯುವದು. 2.ಕೀಲು ನೋವಿನಿಂದ ಪರಿಹಾರ: ದಿನಂಪ್ರತಿ ಮುಂಜಾನೆ ಮತ್ತು ಸಾಯಂಕಾಲ ತಾಮ್ರದ ಪಾತ್ರೆಯಲ್ಲಿಯ ನೀರು ಕುಡಿಯುವದರಿಂದ ಕೀಲು ನೋವಿಗೆ ಪರಿಹಾರ ಸಿಗುವದು. 3.ದೇಹದ ತೂಕ ಇಳಿಸಲು ಸಹಾಯ:- ದಿನಂಪ್ರತಿ ಮುಂಜಾನೆ ಹಾಗೂ ಸಾಯಂಕಾಲ ತಾಮ್ರದ ತಂಬಿಗೆಯಲ್ಲಿ ತುಂಬಿಟ್ಟ ನೀರು ಕುಡಿಯುವದರಿಂದ ಶರೀರದಲ್ಲಿಯ ಬೇಡವಾದ ಬೊಜ್ಜು ಕಡಿಮೆಯಾಗುವದು. ಇದರಿಂದ ದೇಹದ ತೂಕ ಹತೋಟಿಯಲ್ಲಿರುವದು. 4.ಬ್ಯಾಕ್ಟೇರಿಯಾಗಳು ನಾಶವಾಗುತ್ತವೆ:- ಈ ತಂಬಿಗೆಯಲ್ಲಿ ಆಂಟಿ ಬ್ಯಾಕ್ಟೇರಿಯಾ ಗುಣಗಳಿರುತ್ತವೆ. ಆದ್ದರಿಂದ ಇದರಲ್ಲಿ ನೀರು ತುಂಬಿ ಇಡುವದರಿಂದ ಬ್ಯಾಕ್ಟೇರಿಯಾಗಳು

ಜೀವಂತ ಸೊಳ್ಳೆಗಳಿಂದ ಅನೇಕ ತೊಂದರೆಗಳಾದರೆ, ಸತ್ತ ಸೊಳ್ಳೆಗಳಿಂದಲೂ ಸಹ ತೊಂದರೆ ತಪ್ಪಿದ್ದಲ್ಲ.

  ಸೊಳ್ಳೆ ಎಂದರೆನೇ ಸಾಕು ಕಣ್ಣು ಮುಂದೆ ಮಲೇರಿಯಾ , ಡೆಂಗೂ ಕಾಯಿಲೆ ಧುತ್ತೆಂದು ಬಂದು ನಿಲ್ಲುತ್ತವೆ. ಇದು ಜೀವಂತ ಸೊಳ್ಳೆಯ ಪ್ರತಾಪವಾಗಿದೆ. ಇನ್ನು ಸತ್ತ ಸೊಳ್ಳೆಯು ಸಹಿತ ತುಂಬಾ ಘಾತಕವೆಂಬುವದು ಸಾಬೀತಾಗಿದೆ. ಇಲ್ಲಿಯವರೆಗೆ ಬರೀ ಜೀವಂತ ಸೊಳ್ಳೆಯಿಂದ ಹರಡುವ ಹಾಗೂ ಸಾವಿನ ಸಮೀಪ ತೆಗೆದುಕೊಂಡು ಹೋಗುವ ಕಾಯಿಲೆಗಳ ಬಗ್ಗೆನೇ ಕೇಳಿದ್ದೆವು ಆದರೆ ಈಗ ಸತ್ತ ಸೂಳ್ಳೆಯಿಂದಲೂ ಸಹ ಜೀವಕ್ಕೆ ಅಪಾಯವಿದೆ ಎಂಬುದು ಖಚಿತವಾಗಿದೆ. ದೆಹಲಿಯ ವಿಶ್ವ ವಿದ್ಯಾಲಯದ ವಲ್ಲಭಬಾಯಿ ಪಟೇಲ್ ಹೃದಯ ಚಿಕಿತ್ಸಾ ಘಟಕದಲ್ಲಿ ನಡೆದ ಅಧ್ಯಯನ ಒಂದರಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈ ಅಧ್ಯಯನದ ನೇತೃತ್ವ ವಹಿಸಿದ ಡಾ ಕುಮಾರ್ ಅವರು ಸೊಳ್ಳೆಯ ಅವಶೇಷಗಳು ಹಗುರವಾದ್ದರಿಂದ